Asianet Suvarna News Asianet Suvarna News

ಜಿಂಬಾಬ್ವೆ ಎದುರಿನ 3ನೇ ಏಕದಿನ ಪಂದ್ಯದಲ್ಲಿ ಈ ಮೂವರಿಗೆ ಅವಕಾಶ ಸಿಗದೇ ಹೋದರೆ ಅನ್ಯಾಯ ಮಾಡಿದಂತೆ: ಉತ್ತಪ್ಪ

* ಭಾರತ-ಜಿಂಬಾಬ್ವೆ ಮೂರನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ
* ಬೆಂಚ್ ಕಾಯಿಸಿರುವ ಆಟಗಾರರಿಗೆ ಅವಕಾಶ ಕೊಡಿ ಎಂದ ಉತ್ತಪ್ಪ
* ಈಗಾಗಲೇ 2-0 ಅಂತರದಲ್ಲಿ ಏಕದಿನ ಸರಣಿ ಜಯಿಸಿರುವ ಟೀಂ ಇಂಡಿಯಾ

Ind vs ZIM It will be unfair if Gaikwad Tripathi dont get a game says Robin Uthappa kvn
Author
Bengaluru, First Published Aug 21, 2022, 3:20 PM IST

ಹರಾರೆ(ಆ.21): ಕೆ ಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ, ಜಿಂಬಾಬ್ವೆ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಪೈಕಿ ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ 2-0 ಅಂತರದಲ್ಲಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇದೀಗ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಕೆಲ ಪ್ರಯೋಗಗಳನ್ನು ನಡೆಸುವ ಸಾಧ್ಯತೆಯಿದೆ. 

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭಕ್ಕೆ ಇನ್ನೊಂದು ವಾರ ಬಾಕಿ ಇದೆ. ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರನೇ ಏಕದಿನ ಪಂದ್ಯ ಆಗಸ್ಟ್ 22ರಂದು ಆರಂಭವಾಗಲಿದ್ದು, ಈ ಪಂದ್ಯವನ್ನು ಮುಗಿಸಿಕೊಂಡು, ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಕೆ ಎಲ್ ರಾಹುಲ್, ದೀಪಕ್ ಹೂಡಾ ಹಾಗೂ ಆವೇಶ್ ಖಾನ್ ಭಾರತ ತಂಡವನ್ನು ಕೂಡಿಕೊಳ್ಳಲು ಯುಎಇಗೆ ಹಾರಲಿದ್ದಾರೆ. ಇದರ ಜತೆಗೆ ಮೀಸಲು ಆಟಗಾರರಾಗಿರುವ ದೀಪಕ್ ಚಹರ್ ಹಾಗೂ ಅಕ್ಷರ್ ಪಟೇಲ್ ಕೂಡಾ ಯುಎಇನತ್ತ ಮುಖ ಮಾಡಲಿದ್ದಾರೆ. ಇದೀಗ ಜಿಂಬಾಬ್ವೆ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ, ಮೂವರು ಆಟಗಾರರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ರಾಹುಲ್ ತ್ರಿಪಾಠಿ, ಪ್ರತಿಭಾನ್ವಿತ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಹಾಗೂ ಯುವ ವೇಗಿ ಆವೇಶ್‌ ಖಾನ್‌ಗೆ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ

ಸದ್ಯದವರೆಗಿನ ಭಾರತ ಕ್ರಿಕೆಟ್‌ ತಂಡದ ಪ್ರದರ್ಶನವನ್ನು ಗಮನಿಸಿದರೇ, ಮೂರನೇ ಪಂದ್ಯಕ್ಕೆ ಸಾಕಷ್ಟು ಬದಲಾವಣೆಗಳಾಗಲಿವೆ ಎಂದು ನನಗನಿಸುತ್ತಿಲ್ಲ. ಶೆಹಬಾಜ್‌ಗೆ ತಂಡದಲ್ಲಿ ಸ್ಥಾನ ಸಿಗಬಹುದು. ಋತುರಾಜ್ ಗಾತಕ್ವಾಡ್ ಹಾಗೂ ರಾಹುಲ್ ತ್ರಿಪಾಠಿ ಅವಕಾಶಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಒಂದು ವೇಳೆ ಇವರಿಗೆ ಮೂರನೇ ಏಕದಿನ ಪಂದ್ಯದಲ್ಲಿ ಆಡಲು ಅವಕಾಶ ಸಿಗದೇ ಹೋದರೆ, ಯುವ ಕ್ರಿಕೆಟಿಗರಿಗೆ ಅನ್ಯಾಯವಾದಂತೆ ಆಗುತ್ತದೆ. ಇಶಾನ್‌ ಕಿಶನ್‌ಗೆ ಈಗಾಗಲೇ ಒಂದು ಇನಿಂಗ್ಸ್‌ನಲ್ಲಿ ಆಡಲು ಅವಕಾಶ ಸಿಕ್ಕಿದೆ. ಹೀಗಾಗಿ ಪ್ರಾಮಾಣಿಕವಾಗಿ ಹೇಳಬೇಕು ಎಂದರೇ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಒಂದು ರೀತಿ ತಲೆನೋವಾಗಿ ಪರಿಣಮಿಸಿದೆ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ಏಷ್ಯಾಕಪ್‌ನಿಂದ ಶಾಹೀನ್ ಅಫ್ರಿದಿ ಔಟ್; ಟೀಂ ಇಂಡಿಯಾ ಆಟಗಾರರಿಗೆ ಬಿಗ್ ರಿಲೀಫ್ ಎಂದ ಪಾಕ್ ಮಾಜಿ ವೇಗಿ..!

ಇನ್ನು ಜಿಂಬಾಬ್ವೆ ಎದುರಿನ ಮೂರನೇ ಏಕದಿನ ಪಂದ್ಯದಿಂದ ನೀಳಕಾಯದ ವೇಗಿ ಪ್ರಸಿದ್ದ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಿ ದೀಪಕ್ ಚಹರ್‌ ಮತ್ತು ಆವೇಶ್ ಖಾನ್‌ಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ. ಮೂರನೇ ಪಂದ್ಯಕ್ಕೆ ದೀಪಕ್ ಚಹರ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಹೆಚ್ಚು. ಇನ್ನು ಪ್ರಸಿದ್ದ್ ಕೃಷ್ಣಗೆ ವಿಶ್ರಾಂತಿ ನೀಡಿ ಆವೇಶ್ ಖಾನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಬೇಕು. ಇನ್ನು ಮೊಹಮ್ಮದ್ ಸಿರಾಜ್‌ಗೂ ಕೂಡಾ ವಿಶ್ರಾಂತಿ ನೀಡಿ ಶಾರ್ದೂಲ್‌ ಠಾಕೂರ್‌ಗೆ ಆಡಲು ಅವಕಾಶ ಕಲ್ಪಿಸಬೇಕು ಎಂದ ಉತ್ತಪ್ಪ ಸಲಹೆ ನೀಡಿದ್ದಾರೆ.

Follow Us:
Download App:
  • android
  • ios