IND vs WI ಸರಣಿ ಯಾರಿಗೆ? ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ!

ಟಿ20 ಸರಣಿಯ ಇಂದಿನ ಪಂದ್ಯ ಪ್ರಶಸ್ತಿ ನಿರ್ಧರಿಸಲಿದೆ. ಈಗಾಗಲೇ 2 ಪಂದ್ಯ ವೆಸ್ಟ್ ಇಂಡೀಸ್ ಗೆದ್ದುಕೊಂಡಿದ್ದರೆ, ಇನ್ನೆರಡು ಪಂದ್ಯ ಭಾರತ ಗೆದ್ದಿದೆ. ಹೀಗಾಗಿ ಇಂದು ಗೆದ್ದ ತಂಡ ಸರಣಿ ಕೈವಶ ಮಾಡಲಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

IND vs WI final t20 Team India win toss opt bat against west Indies ckm

ಫ್ಲೋರಿಡಾ(ಆ.13) ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಅಂತಿಮ ಹಂತ ತಲುಪಿದೆ. ಫೈನಲ್ ಸ್ವರೂಪ ಪಡೆದಿರುವ 5ನೇ ಟಿ20 ಪಂದ್ಯ ಕುತೂಹಲ ಹೆಚ್ಚಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಕಳೆದೆರಡು ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಟೀಂ ಇಂಡಿಯಾ ಆತ್ಮವಿಶ್ವಾಸದಲ್ಲಿದೆ. ಇಂದಿನ ಪಂದ್ಯ ಗೆದ್ದು ಟಿ20 ಸರಣಿ ಕೈವಶ ಮಾಡಲು ಹಾರ್ದಿಕ್ ಸೈನ್ ಸಜ್ಜಾಗಿದೆ. ಒತ್ತಡದಲ್ಲಿ ಭಾರತದ ಬ್ಯಾಟಿಂಗ್ ಸಾಮರ್ಥ್ಯ ಇಂದು ಸಾಬೀತಾಗಲಿದೆ.

ಟೀಂ ಇಂಡಿಯಾ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಅರ್ಶದೀಪ್ ಸಿಂಗ್, ಯಜುವೇಂದ್ರ ಚಹಾಲ್, ಮುಕೇಶ್ ಕುಮಾರ್

ತಿಲಕ್ ವರ್ಮಾ 2023ರ ವಿಶ್ವಕಪ್ ಆಡ್ತಾರಾ? ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ನೀಡಿದ ರೋಹಿತ್ ಶರ್ಮಾ..!

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಶೈ ಹೋಪ್, ನಿಕೋಲಸ್ ಪೂರನ್, ರೊವ್ಮನ್ ಪೊವೆಲ್(ನಾಯಕ), ಶಿಮ್ರೊನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ರೋಸ್ಟನ್ ಚೇಸ್, ಅಕೀಲ್ ಹೊಸೈನ್, ಅಲ್ಜಾರಿ ಜೊಸೆಫ್

ವೆಸ್ಟ್ ಇಂಡೀಸ್‌ನಿಂದ 4ನೇ ಟಿ20 ಪಂದ್ಯಕ್ಕಾಗಿ ಫ್ಲೋರಿಡಾಗೆ ಪ್ರಯಾಣ ಮಾಡಿದ ಟೀಂ ಇಂಡಿಯಾ ಗೆಲುವಿನ ಸಿಹಿ ಕಂಡಿತ್ತು. ಇದೀಗ ಅಂತಿಮ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ಫ್ಲೋರಿಡಾದಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿ 178 ರನ್ ಸಿಡಿಸಿತ್ತು. ಇತ್ತ ಟೀಂ ಇಂಡಿಯಾ ಯಾವುದೇ ಆತಂಕವಿಲ್ಲದೆ 1 ವಿಕೆಟ್ ನಷ್ಟಕ್ಕೆ ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದೀಗ ಭಾರತ ಮೊದಲು ಬ್ಯಾಟಿಂಗ್ ನಿರ್ಧಾರ ಮಾಡಿದೆ. ಈ ನಿರ್ಧಾರವನ್ನು ವೆಸ್ಟ್ ಇಂಡೀಸ್ ನಾಯಕ ಪೊವೆಲ್ ಸ್ವಾಗತಿಸಿದ್ದರೆ. ಕಾರಣ ವೆಸ್ಟ್ ಇಂಡೀಸ್ ಟಾಸ್ ಗೆದ್ದುಕೊಂಡಿದ್ದರೆ, ಫೀಲ್ಡಿಂಗ್ ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿತ್ತು. ಇದೀಗ ನಮಗೆ ಫೀಲ್ಡಿಂಗ್ ಲಭ್ಯವಾಗಿರುವುದು ಉತ್ತಮ ಬೆಳವಣಿಗೆ ಎಂದು ಪೊವೆಲ್ ಹೇಳಿದ್ದಾರೆ.

ಏಕದಿನ ವಿಶ್ವಕಪ್ ಸಮರಕ್ಕೂ ಮೊದಲೇ ಸೋಲುಪ್ಪಿಕೊಂಡ್ರಾ ನಾಯಕ ರೋಹಿತ್ ಶರ್ಮಾ?

ಸತತ 12ನೇ ದ್ವಿಪ​ಕ್ಷೀಯ ಟಿ20 ಸರಣಿ ಗೆಲು​ವಿನ ಜೊತೆ ವಿಂಡೀಸ್‌ ವಿರುದ್ಧ ಸತತ 7ನೇ ಟಿ20 ಸರಣಿ ಜಯಿ​ಸಲು ಭಾರತ ಎದುರು ನೋಡು​ತ್ತಿದೆ. ಆರಂಭಿಕ ಎರಡು ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ತೀವ್ರ ಟೀಕೆಗೆ ಗುರಿಯಾಗಿತ್ತು. ಆರಂಭಿಕ 2 ಪಂದ್ಯದಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿದ ಟೀಂ ಇಂಡಿಯಾ 3 ಮತ್ತು 4ನೇ ಪಂದ್ಯದಲ್ಲಿ ಗೆಲುವು ದಾಖಲಿಸಿ ತಿರುಗೇಟು ನೀಡಿತ್ತು. ಇತ್ತ ವೆಸ್ಟ್ ಇಂಡೀಸ್ ಕೂಡ ಗೆಲುವಿನ ವಿಶ್ವಾಸದಲ್ಲಿದೆ. ಹೀಗಾಗಿ 5ನೇ ಟಿ20 ಪಂದ್ಯ ಕುತೂಹಲ ಹೆಚ್ಚಿಸಿದೆ.

Latest Videos
Follow Us:
Download App:
  • android
  • ios