ಭಾರತ ಮತ್ತು ವೆಸ್ಟ್ ವಿಂಡೀಸ್ (India vs West Indies) ನಡುವಿನ ಕೊನೆಯ ಹಾಗೂ ಫೈನಲ್ ಟಿ-20 ಪಂದ್ಯವು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ (M Chinnaswamy Stadium) ನಡೆಯಲಿದೆ. ಅಕ್ಟೋಬರ್ 17 ರಂದು ಶನಿವಾರ ಎರಡೂ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಟಿ-20 ಸಿರೀಸ್ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಮಧ್ಯೆ ಪಂದ್ಯಕ್ಕೆ ಮಳೆಯ ಆತಂಕ ಇದೆ.

ಬೆಂಗಳೂರು (ಅಕ್ಟೋಬರ್ 15): ಭಾರತ ಮತ್ತು ವೆಸ್ಟ್ ವಿಂಡೀಸ್ (India vs West Indies) ನಡುವಿನ ಕೊನೆಯ ಹಾಗೂ ಫೈನಲ್ ಟಿ-20 ಪಂದ್ಯವು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ (M Chinnaswamy Stadium) ನಡೆಯಲಿದೆ. ಅಕ್ಟೋಬರ್ 17 ರಂದು ಶನಿವಾರ ಎರಡೂ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಟಿ-20 ಸಿರೀಸ್ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಮಧ್ಯೆ ಪಂದ್ಯಕ್ಕೆ ಮಳೆಯ ಆತಂಕ ಇದೆ.

ಯಾಕೆಂದರೆ.. ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಭಾರೀ ಮಳೆ ಆಗುತ್ತಿದೆ. ಒಂದು ವೇಳೆ ಶನಿವಾರ ಸಂಜೆ ಮಳೆ ಬಂದರೆ ಪಂದ್ಯ ಆಹುತಿಯಾಗುವ ಆತಂಕ ಅಭಿಮಾನಿಗಳದ್ದಾಗಿದೆ. ಇನ್ನು ಹವಾಮಾನ ಇಲಾಖೆ ಹೇಳೋದು ಏನು ಅಂತಾ ನೋಡೋದಾದರೆ.. ಗೂಗಲ್‌ನಲ್ಲಿ ಸಿಕ್ಕಿರುವ ಮಳೆ ಭವಿಷ್ಯದ ಪ್ರಕಾರ.. ಶನಿವಾರ ಸಂಜೆ ಬೆಂಗಳೂರಿನಲ್ಲಿ ಮಳೆ ಬರುವ ಸಾಧ್ಯತೆ ಹೆಚ್ಚಿದೆ.

ಗುಡುಗು ಸಹಿತ, ಬಿರುಗಾಳಿಯೊಂದಿಗೆ ಮಳೆ ಆಗಲಿದೆ. ಸಂಜೆ ಹಾಗೂ ರಾತ್ರಿಯ ಸಮಯದಲ್ಲಿ ಶೇಕಡಾ 75 ರಷ್ಟು ಮಳೆ ಬೀಳುವ ಸಾಧ್ಯತೆ ಇದೆ. ಇನ್ನು ಮಳೆ ಬೆಂಗಳೂರಿನಲ್ಲಿ ಯಾಕೆ ಬೀಳಲಿದೆ ಅಂತಾ ನೋಡೋದಾದರೆ.. ಈಶಾನ್ಯ ಮುಂಗಾರು ಸಕ್ರಿಯವಾಗಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ಇನ್ನು ತಾಪಮಾನ ಹೇಗಿರಲಿದೆ ಎಂದು ನೋಡೋದಾದರೆ.. ಗರಿಷ್ಠ ತಾಪಮಾನ 27°C, ಕನಿಷ್ಠ ತಾಪಮಾನ: 21°C ಇರಲಿದೆ. ಸಂಜೆಯ ವೇಳೆ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ (Waterlogging) ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ವೆದರ್ ರಿಪೋರ್ಟ್ ತಿಳಿಸಿದೆ. ಇನ್ನು ಇವತ್ತೂ ಕೂಡ ಮಳೆರಾಯ ಭಾರೀ ಆರ್ಭಟಿಸಿದ್ದಾನೆ. ನಗರದ ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹೀಗಾಗಿ ಶನಿವಾರ ಅಭಿಮಾನಿಗಳ ಆಸೆ ನಿರಾಸೆ ಆಗುತ್ತಾ ಎಂಬ ಚರ್ಚೆ ಶುರುವಾಗಿದೆ.

ಎರಡೂ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯ

ಇನ್ನು, ಎರಡೂ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯ ಆಗಿರಲಿದೆ. ಐದು ಟಿ-20 ಪಂದ್ಯಗಳಲ್ಲಿ ಭಾರತ ಮೊದಲ ಪದ್ಯವನ್ನು ಗೆದ್ದರೆ, ವೆಸ್ಟ್ ವಿಂಡೀಸ್ ಎರಡನೇ ಪಂದ್ಯವನ್ನು ಗೆದ್ದುಕೊಂಡಿದೆ. ಹಾಗೆಯೇ ಮೂರನೇ ಟಿ20 ಪಂದ್ಯವನ್ನು ಭಾರತ ಗೆದ್ದರೆ, ನಾಲ್ಕನೇ ಪಂದ್ಯವನ್ನು ವಿಂಡೀಸ್ ಗೆದ್ದಿದೆ. ಹೀಗಾಗಿ ಎರಡೂ ತಂಡಗಳ ನಡುವೆ ಸಮಬಲದ ಹೋರಾಟ ನಡೆಯುತ್ತಿದೆ. ಹೀಗಾಗಿ ಫೈನಲ್ ಪಂದ್ಯವು ತುಂಬಾನೇ ಹೈವೋಲ್ಟೇಜ್‌ನಿಂದ ಕೂಡಿರಲಿದೆ. ಸಂಜೆ 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆದರೆ, 7.30 ರಿಂದ ಪಂದ್ಯ ಆರಂಭವಾಗಲಿದೆ.

2025ರ ಐಪಿಎಲ್‌ ಮುಗಿಯುತ್ತಿದ್ದಂತೆಯೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಾದ ಬಳಿಕ ಪುರುಷರ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆದಿಲ್ಲ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಗೊಂಡಿದೆ. ಪಂದ್ಯ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳ ಓಡಾಟಕ್ಕೆ ಅನುಕೂಲ ಆಗಲಿ ಎಂದು ಮೆಟ್ರೋ ಹಾಗೂ ಬಿಎಂಟಿಸಿ ಸೇವೆಗಳ ಅವಧಿ ವಿಸ್ತರಣೆ ಆಗಿದೆ.