ನಿರ್ಣಾಯಕ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ ಘಟಾನುಘಟಿ ಬ್ಯಾಟ್ಸ್‌ಮನ್ ಔಟ್, ಬೌಲರ್‌ಗಳ ಕೈಯಲ್ಲಿ ಭಾರತ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ, ಲಂಕಾಗೆ ಮೇಲುಗೈ
ಕೊಲೊಂಬೊ(ಜು.29): ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳೋ ಮೂಲಕ ಆರಂಭಿಕ ಮೇಲುಗೈ ಸಾಧಿಸಿದ್ದ ಟೀಂ ಇಂಡಿಯಾ ಇದೀಗ ಪ್ರಮುಖ 6 ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಅಲ್ಪ ಮೊತ್ತಕ್ಕೆ ಆಲೌಟ್ ಭೀತಿ ಎದುರಿಸುತ್ತಿದೆ.
INDvsSL: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ; 1 ಬದಲಾವಣೆ!
ಆರಂಭದಲ್ಲೇ ನಾಯಕ ಶಿಖರ್ ಧವನ್ ವಿಕೆಟ್ ಪತನಗೊಂಡಿತು. ಧವನ್ ಡಕೌಟ್ ಆದರು. ದೇವದತ್ ಪಡಿಕ್ಕಲ್ ಕೇವಲ 9 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಸಂಜು ಸಾಮ್ಯನ್ಸ್ ಶೂನ್ಯ ಸುತ್ತಿದರು. ರುತುರಾಜ್ ಗಾಯಕ್ವಾಡ್ 14 ರನ್ ಕಾಣಿಕೆ ನೀಡಿದರು. ನತೀಶ್ ರಾಣಾ ಕೇವಲ 6 ರನ್ ಗಳಿಸಿ ಔಟಾದರು.ಭುವನೇಶ್ವರ್ ಕುಮಾರ್ ವಿಕೆಟ್ ಕೂಡ ಪತನಗೊಂಡಿದೆ.
ಬೌಲರ್ ಹೋರಾಟದ ಮೇಲೆ ಟೀಂ ಇಂಡಿಯಾ ಸ್ಕೋರ್ ನಿಂತಿದೆ. ಸದ್ಯ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿರುವ ಟೀಂ ಇಂಡಿಯಾ ಮೇಲೆ ಲಂಕಾ ಹೆಚ್ಚಿನ ಒತ್ತಡ ಹೇರುತ್ತಿದೆ. ಇದು ನಿರ್ಣಾಯಕ ಪಂದ್ಯವಾಗಿತ್ತು. ಗೆದ್ದ ತಂಡ ಸರಣಿ ಗೆಲ್ಲಲಿದೆ.
