ಭಾರತ-ಶ್ರೀಲಂಕಾ ನಡುವಿನ 3ನೇ ಹಾಗೂ ಅಂತಿಮ ಟಿ20 ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಪಂದ್ಯ ಗೆದ್ದ ತಂಡಕ್ಕೆ T20 ಸರಣಿ

ಕೊಲೊಂಬೊ(ಜು.29): ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ನಿರ್ಣಾಯಕ ಘಟ್ಟ ತಲುಪಿದೆ. ಸರಣಿ 1-1 ಅಂತರದಿಂದ ಸಮಬಲಗೊಂಡಿರುವ ಕಾರಣ ಇಂದಿನ 3ನೇ ಹಾಗೂ ಅಂತಿಮ ಟಿ20 ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಕೊಲೊಂಬೊದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಗಾಯಗೊಂಡಿರುವ ನವದೀಪ್ ಸೈನಿ ಬದಲು ಸಂದೀಪ್ ವಾರಿಯರ್ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ.

Scroll to load tweet…

ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 38 ರನ್ ಗೆಲುವು ದಾಖಲಿಸಿತ್ತು. ಕೊರೋನಾ ಕಾರಣ 2ನೇ ಪಂದ್ಯ ಮುಂದೂಡಲಾಗಿತ್ತು. ನಿನ್ನೆ(ಜು.28) ನಡೆದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ 4 ವಿಕೆಟ್ ಗೆಲುವು ಕಂಡಿತ್ತು.