ಭಾರತ ಹಾಗೂ ಶ್ರೀಲಂಕಾ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಬದಲಾವಣೆ ಏನು?

ರಾಜ್‌ಕೋಟ್(ಜ.07): ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ಅಂತಿಮ ಘಟ್ಟ ತಲುಪಿದೆ. ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಹೀಗಾಗಿ ಇಂದಿನ ಪಂದ್ಯದ ಫಲಿತಾಂಶ ಸರಣಿ ಯಾರಿಗೆ ಅನ್ನೋದು ನಿರ್ಧರಿಸಲಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ಚೇಸಿಂಗ್ ಆಯ್ಕೆಮಾಡಿಕೊಂಡ ಭಾರತ ಕೈಸುಟ್ಟುಕೊಂಡಿತು. ಇದೀಗ ಉತ್ತಮ ಮೊತ್ತ ಪೇರಿಸಿ ಡಿಫೆಂಡ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಭಾರತ ಪ್ಲೇಯಿಂಗ್ 11
ಇಶಾನ್ ಕಿಶನ್, ಶುಬಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡ, ಅಕ್ಸರ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಅರ್ಶದೀಪ್ ಸಿಂಗ್, ಯಜುವೇಂದ್ರ ಚಹಾಲ್

ಶ್ರೀಲಂಕಾ ಪ್ಲೇಯಿಂಗ್ 11
ಪಥುಮ್ ನಿಸಂಕಾ, ಕುಸಾಲ್ ಮೆಂಡೀಸ್, ಅವಿಷ್ಕಾ ಫರ್ನಾಂಡೋ, ಧನಂಜಯ ಡಿ ಸಿಲ್ವ, ಚಾರಿತ್ ಅಸಲಂಕ, ದಸೂನ ಶನಕ(ನಾಯಕ), ವಾನಿಂಡು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಾನ, ಕಸೂನ್ ರಾಜಿತ, ದಿಲ್ಶಾನ್ ಮಧುಶಂಕ

BCCI ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಚೇತನ್‌ ಶರ್ಮಾ ಪುನರಾಯ್ಕೆ..!

ಭಾರತ ಹಾಗೂ ಲಂಕಾ ತಂಡಕ್ಕೆ ಇದು ಮಹತ್ವದ ಪಂದ್ಯ. ಮೊದಲ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದ್ದರೆ, ದ್ವಿತೀಯ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿತ್ತು. ಈ ಮೂಲಕ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಇದೀಗ 3ನೇ ಪಂದ್ಯದ ಗೆಲುವಿಗಾಗಿ ಲಂಕಾ ಹಾಗೂ ಭಾರತ ತೀವ್ರ ಪೈಪೋಟಿ ನಡಸಲಿದೆ. ಟಿ20 ವಿಶ್ವಕಪ್ ಟೂರ್ನಿಯ ಹಾಲಿ ಚಾಂಪಿಯನ್ ಶ್ರೀಲಂಕಾ, ಆಕ್ರಮಣಕಾರಿ ಆಟದ ಮೂಲಕ ಪಂದ್ಯಗಗಳನ್ನು ಗೆಲ್ಲುತ್ತಿದೆ. ಇತ್ತ ಟೀಂ ಇಂಡಿಯಾ ಪ್ರಯೋಗಕ್ಕೆ ಹೆಚ್ಚಿನ ಒತ್ತು ನೀಡಿದೆ. 

2ನೇ ಪಂದ್ಯದಲ್ಲಿ ಅಬ್ಬರಿಸಿ ಗೆದ್ದ ಲಂಕಾ
 2ನೇ ಟಿ20 ಪಂದ್ಯದಲ್ಲಿ ಭಾರತ 16 ರನ್‌ ಸೋಲು ಅನುಭವಿಸಿತ್ತು. ಹಿರಿಯ ಆಟಗಾರರನ್ನು ಹೊರಗಿಟ್ಟು ಹಾರ್ದಿಕ್‌ ಪಾಂಡ್ಯ ಕೈಗೆ ತಂಡದ ಚುಕ್ಕಾಣಿ ನೀಡಿರುವ ಟೀಂ ಇಂಡಿಯಾ, ಅತಿಯಾದ ಪ್ರಯೋಗಕ್ಕೆ ಮುಂದಾಗಿದೆ. ತಂಡಕ್ಕೆ ಅಲ್ಲಲ್ಲಿ ಒಂದಷ್ಟುಭರವಸೆಯ ಬೆಳಕು ಕಾಣಿಸುತ್ತಿದೆಯಾದರೂ ಒಟ್ಟಾರೆಯಾಗಿ ತಂಡ ಸಾಗುತ್ತಿರುವ ದಿಕ್ಕಿನ ಬಗ್ಗೆ ಅನುಮಾನ ಮೂಡುತ್ತಿದೆ. ಪಂದ್ಯದಲ್ಲಿ ಬೌಲಿಂಗ್‌, ಫೀಲ್ಡಿಂಗ್‌ ಹಾಗೂ ಕೊನೆ 7-8 ಓವರ್‌ ಹೊರತು ಪಡಿಸಿ ಬ್ಯಾಟಿಂಗ್‌ನಲ್ಲೂ ಭಾರತ ದಯನೀಯ ವೈಫಲ್ಯ ಅನುಭವಿಸಿತು. ಮೊದಲು ಲಂಕಾಗೆ 20 ಓವರಲ್ಲಿ 206 ರನ್‌ ಗಳಿಸಲು ಬಿಟ್ಟಭಾರತ, ಪವರ್‌ನಲ್ಲಿ ಕೇವಲ 39 ರನ್‌ ಗಳಿಸಿದ್ದು ಮಾತ್ರವಲ್ಲ 4 ವಿಕೆಟ್‌ ಸಹ ಕಳೆದುಕೊಂಡಿತು. 10 ಓವರ್‌ ಮುಗಿಯುವ ಮೊದಲೇ ಹೂಡಾ ವಿಕೆಟ್‌ ಸಹ ಕಳೆದುಕೊಂಡು ತಂಡ ಗಳಿಸಿದ್ದು ಕೇವಲ 57 ರನ್‌.

ಅರ್ಜೆಂಟೀನಾ: ಪ್ರತಿ 70ರಲ್ಲಿ 1 ಮಗುವಿಗೆ ಲಿಯೋನೆಲ್‌ ಮೆಸ್ಸಿ ಹೆಸರು!

ಕ್ಷರ್‌ ಪಟೇಲ್‌ ನಡುವಿನ 6ನೇ ವಿಕೆಟ್‌ ಜೊತೆಯಾಟ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿತು. ಕೇವಲ 6.4 ಓವರಲ್ಲಿ 91 ರನ್‌ ಜೊತೆಯಾಟವಾಡಿ ತಂಡದ ಕಳಪೆ ಆಟವನ್ನು ಮರೆಸುವ ಪ್ರಯತ್ನ ನಡೆಸಿದರು. ಸೂರ್ಯ 3 ಬೌಂಡರಿ, 3 ಸಿಕ್ಸರ್‌ನೊಂದಿಗೆ 51 ರನ್‌ ಸಿಡಿಸಿ ಔಟಾದ ಮೇಲೂ ಅಕ್ಷರ ಜೊತೆ ಸೇರಿದ ಶಿವಂ ಮಾವಿ(26) ತಂಡವನ್ನು ಗೆಲುವಿನ ದಡ ಸೇರಿಸಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.