BCCI ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಚೇತನ್ ಶರ್ಮಾ ಪುನರಾಯ್ಕೆ..!
ಬಿಸಿಸಿಐ ನೂತನ ಆಯ್ಕೆ ಸಮಿತಿ ನೇಮಕ, ಚೇತನ್ ಶರ್ಮಾ ಮುಖ್ಯಸ್ಥ
2020ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಚೇತನ್ ಶರ್ಮಾ
ಮುಂಬೈ(ಜ.07): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ, ಇದೀಗ ಮತ್ತೊಮ್ಮೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. 2020ರ ಡಿಸೆಂಬರ್‌ನಲ್ಲಿ ಬಿಸಿಸಿಐ ಪುರುಷರ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕವಾಗಿದ್ದ, ಚೇತನ್ ಶರ್ಮಾ ಅವರನ್ನು ಇತ್ತೀಚೆಗಷ್ಟೇ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಬೆನ್ನಲ್ಲೇ ಚೇತನ್ ಶರ್ಮಾ ಅವರನ್ನು ಕೆಳಗಿಳಿಸಲಾಗಿತ್ತು.
ಇದೀಗ ಮತ್ತೊಮ್ಮೆ ಚೇತನ್ ಶರ್ಮಾ ಅವರನ್ನು ಭಾರತ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕವಾಗಿದ್ದು, ದಕ್ಷಿಣ ವಿಭಾಗದಿಂದ ಶ್ರೀಧರನ್ ಶರತ್, ಕೇಂದ್ರ ವಲಯದಿಂದ ಶಿವ ಸುಂದರ್ ದಾಸ್, ಪೂರ್ವ ವಲಯದಿಂದ ಸುಬ್ರತೋ ಬ್ಯಾನರ್ಜಿ ಹಾಗೂ ಪಶ್ಚಿಮ ವಲಯದಿಂದ ಸಲಿಲ್ ಅಂಕೋಲಾ ಅವರು ಆಯ್ಕೆ ಸಮಿತಿ ಸದಸ್ಯರಾಗಿ ನೇಮಕ ಮಾಡಿ ಬಿಸಿಸಿಐ ಆದೇಶ ಹೊರಡಿಸಿದೆ.
ಶ್ರೀ ಸುಲಕ್ಷಣ ನಾಯ್ಕ್, ಅಶೋಕ್ ಮಲ್ಹೋತ್ರಾ, ಜತಿನ್ ಪರಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು, ಹೊಸ ಆಯ್ಕೆ ಸಮಿತಿಯನ್ನು ನೇಮಕ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸುಮಾರು 600ಕ್ಕೂ ಅಧಿಕ ಮಂದಿ 5 ಸ್ಥಾನಗಳಿಗೆ ಅರ್ಜಿ ಸಲ್ಲಿಸಿದ್ದರು. ಎಂದು ಬಿಸಿಸಿಐ ತಿಳಿಸಿದೆ.
Ind vs SL ಲಂಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ; ಬದಲಾವಣೆಗೆ ಮುಂದಾಗ್ತಾರಾ ಪಾಂಡ್ಯ?
ಸಲ್ಲಿಕೆಯಾದ ಅರ್ಜಿಗಳನ್ನು ಸಾಕಷ್ಟು ಎಚ್ಚರಿಕೆಯಿಂದ ಗಮನಿಸಿ, ಕ್ರಿಕೆಟ್ ಸಲಹಾ ಸಮಿತಿಯು 11 ಮಂದಿಯ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಲಾಯಿತು. 11 ಮಂದಿಯನ್ನು ಸಂದರ್ಶನ ಮಾಡಲಾಯಿತು. ಇದರಲ್ಲಿ ಕ್ರಿಕೆಟ್ ಸಲಹಾ ಸಮಿತಿಯು, ಬಿಸಿಸಿಐ ಹಿರಿಯರ ಸಲಹಾ ಸಮಿತಿಯು 1. ಚೇತನ್ ಶರ್ಮಾ, 2. ಶಿವ ಸುಂದರ್ ದಾಸ್, 3 ಸುಬ್ರತೋ ಬ್ಯಾನರ್ಜಿ, 4. ಸಲಿಲ್ ಅಂಕೊಲಾ, 5. ಶ್ರೀಧರನ್ ಶರತ್ ಅವರನ್ನು ಆಯ್ಕೆ ಸಮಿತಿಯಾಗಿ ನೇಮಕ ಮಾಡಲಾಯಿತು ಎಂದು ಬಿಸಿಸಿಯ ತಿಳಿಸಿದೆ. ಇದರಲ್ಲಿ ಚೇತನ್ ಶರ್ಮಾ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕ ಮಾಡಲಾಯಿತು ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಲು ಬಯಸುವವರಿಗೆ ಬಿಸಿಸಿಐ ಕೆಲವೊಂದು ಮಾನದಂಡಗಳನ್ನು ವಿಧಿಸಿತ್ತು. ಅದರಲ್ಲಿ, 7 ಟೆಸ್ಟ್ ಪಂದ್ಯಗಳನ್ನಾಡಿರಬೇಕು ಅಥವಾ 30 ಪ್ರಥಮ ದರ್ಜೆ ಪಂದ್ಯ ಅಥವಾ 10 ಏಕದಿನ ಪಂದ್ಯ ಅಥವಾ 20 ಪರ್ಸ್ಟ್ ಕ್ಲಾಸ್ ಪಂದ್ಯಗಳನ್ನಾಡಿರಬೇಕು ಎನ್ನುವ ಷರತ್ತು ವಿಧಿಸಿತ್ತು. ಇದಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ 5 ವರ್ಷಗಳಾಗಿರಬೇಕು ಎನ್ನುವ ಮಾನದಂಡಗಳನ್ನು ಇಡಲಾಗಿತ್ತು.