Asianet Suvarna News Asianet Suvarna News

IND vs SL ಲಂಕಾ ವಿರುದ್ಧ ರೋಹಿತ್ ಸೈನ್ಯಕ್ಕೆ ಸೋಲು, ಆಫ್ಘಾನಿಸ್ತಾನ ಮೇಲೆ ನಿಂತಿದ ಭಾರತದ ಭವಿಷ್ಯ!

ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಟೀಂ ಇಂಡಿಯಾ ಸತತ 2ನೇ ಸೋಲು ಕಂಡಿದೆ. ಇದರಿಂದ ಟೀಂ ಇಂಡಿಯಾದ ಏಷ್ಯಾಕಪ್ ಹೋರಾಟ ಆಫ್ಘಾನಿಸ್ತಾನದ ಪ್ರದರ್ಶದನ ಮೇಲೆ ನಿಂತಿದೆ.  ಲಂಕಾ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ.

IND vs SL t20 Sri lanka beat Team India by 6 wickets in Super 4 clash Rohit team to pray for Afghanistan ckm
Author
First Published Sep 6, 2022, 11:24 PM IST

ದುಬೈ(ಸೆ.06): ಏಷ್ಯಾಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲುವಿನ ನಿರೀಕ್ಷೆಯೊಂದಿಗೆ ದುಬೈಗೆ ಕಾಲಿಟ್ಟ ಟೀಂ ಇಂಡಿಯಾ ಇದೀಗ ಸತತ ಎರಡು ಸೋಲಿನ ಮೂಲಕ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಆದರೆ ಆಫ್ಘಾನಿಸ್ತಾನ ತಂಡ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದರೆ ಟೀಂ ಇಂಡಿಯಾ ಕೊನೆಯ ಅವಕಾಶವೊಂದು ತೆರೆಯಲಿದೆ.  ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ್ದರೆ, ಎರಡನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿದೆ. ಲಂಕಾ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದೆ. ಇದರಿಂದ ಲಂಕಾ ತಂಡ ಭಾರತವನ್ನು ಮಣಿಸಿ ಫೈನಲ್ ಹಾದಿಯನ್ನು ಸುಗಮಗೊಳಿಸಿದೆ.  ಟೀಂ ಇಂಡಿಯಾ ಸೋಲಿಗೆ ಟೀಕೆಗಳು ವ್ಯಕ್ತವಾಗಿದೆ. ಏಷ್ಯಾ ತಂಡಗಳ ವಿರುದ್ಧ ಗೆಲ್ಲಲು ಸಾಧ್ಯವಾಗದ ಟೀಂ ಇಂಡಿಯಾ, ಮುಂಬರುವ ಟಿ20 ವಿಶ್ವಕಪ್ ಟೂರ್ನಿ ಟ್ರೋಫಿ ವಶಪಡಿಸಿಕೊಳ್ಳುವ ಯಾವುದೇ ಸಾಧ್ಯತೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಬೇಕಿದೆ. ಈ ತಂಡದಿಂದ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

ಶ್ರೀಲಂಕಾ(India vs Sri lanka) ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ(Team India) ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ರೋಹಿತ್ ಶರ್ಮಾ(Rohit Sharma) ಹೋರಾಟದಿಂದ ಟೀಂ ಇಂಡಿಯಾ 173 ರನ್ ಸಿಡಿಸಿತ್ತು. 174 ರನ್ ಟಾರ್ಗೆಟ್ ಪಡೆದ ಶ್ರೀಲಂಕಾ ದಿಟ್ಟ ಹೋರಾಟ ನೀಡಿತು. ಪಥುಮ್ ನಿಸಾಂಕ ಹಾಗೂ ಕುಸಾಲ್ ಮೆಂಡೀಸ್ ಆರಂಭಕ್ಕೆ ಟೀಂ ಇಂಡಿಯಾ ಸುಸ್ತಾಗಿತ್ತು. ಮೊದಲ ವಿಕೆಟ್‌ಗೆ ಈ ಜೋಡಿ 97 ರನ್ ಜೊತೆಯಾಟ ನೀಡಿತ. ಕುಸಾಲ್ ಹಾಗೂ ಪಥುಮ್ ತಲಾ ಹಾಫ್ ಸೆಂಚುರಿ ಸಿಡಿಸಿದರು.

IND vs SA ಭಾರತ ವಿರುದ್ದದ ಟಿ20 ಹಾಗೂ ಏಕದಿನ ಸರಣಿಗೆ ತಂಡ ಪ್ರಕಟಿಸಿದ ಸೌತ್ ಆಫ್ರಿಕಾ!

ಪಥುಮ್ ನಿಸಾಂಕ 37 ಎಸೆತದಲ್ಲಿ 52 ರನ್ ಸಿಡಿಸಿ ಔಟಾದರು. ಆರಂಭಿಕನ ವಿಕೆಟ್ ಪತನದ ಬೆನ್ನಲ್ಲೇ ಶ್ರೀಲಂಕಾ ದಿಢೀರ್ ಕುಸಿತ ಕಂಡಿತು. ಚಾರಿತ್ ಅಸಲಂಕಾ ಡಕೌಟ್ ಆದರು. ದನುಷ್ಕಾ ಗುಣತಿಲಕ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಶ್ರೀಲಂಕಾ 3 ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಆದರೆ ಕುಸಾಲ್ ಮೆಂಡೀಸ್ ಹೋರಾಟ ಮುಂದುವರಿಸಿದರು.

ಟೀಂ ಇಂಡಿಯಾ ಸ್ಪಿನ್ ದಾಳಿಗೆ ಶ್ರೀಲಂಕಾ ಗಲಿಬಿಲಿಗೊಂಡಿತು. ಯಜುವೇಂದ್ರ ಚಹಾಲ್ ಹಾಗೂ ಆರ್ ಅಶ್ವಿನ್ ಸ್ಪಿನ್ ಮೋಡಿಗೆ ಲಂಕಾ ವಿಕೆಟ್ ಕೈಚೆಲ್ಲಿತು. ಆಸರೆಯಾಗಿದ್ದ ಕುಸಾಲ್ ಮೆಂಡೀಸ್ 57 ರನ್ ಸಿಡಿಸಿ ಔಟಾದರು. ಬಾನುಕಾ ರಾಜಪಕ್ಸ ಹಾಗೂ ನಾಯಕ ದಸೂನ್ ಶನಕಾ ಹೋರಾಟದಿಂದ ಶ್ರೀಲಂಕಾ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಅಂತಿಮ 12 ಎಸೆತದಲ್ಲಿ ಶ್ರೀಲಂಕಾ ಗೆಲುವಿಗೆ 21 ರನ್ ಅವಶ್ಯಕತೆ ಇತ್ತು. ಭುವನೇಶ್ವರ್ ಕುಮಾರ್ ಓವರ್‌ನಲ್ಲಿ ಸತತ ಎರಡು ಬೌಂಡರಿ ಪಂದ್ಯದ ಗತಿಯನ್ನು ಬದಲಾಯಿಸಿತು.  ಬಾನುಕ ರಾಜಪಕ್ಸ ಅಜೇಯ 25 ರನ್ ಹಾಗೂ ದಸೂನ್ ಶನಕಾ ಅಜೇಯ 33 ರನ್ ಸಿಡಿಸಿದರು. ಈ ಮೂಲಕ ಶ್ರೀಲಂಕಾ 19.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿತಲುಪಿತು. 6 ವಿಕೆಟ್ ಗೆಲುವು ಸಾಧಿಸಿದ ಶ್ರೀಲಂಕಾ ಏಷ್ಯಾಕಪ್(Asia Cup 2022) ಫೈನಲ್ ಹಾದಿಯನ್ನು ಸುಗಮಗೊಳಿಸಿದೆ.

ವಿದೇಶಿ ಲೀಗ್‌ಗಳತ್ತ ಒಲವು, ಐಪಿಎಲ್‌ಗೆ ಸುರೇಶ್‌ ರೈನಾ ವಿದಾಯ 

ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ(Pakistan vs Afghanistan) ನಡುವಿನ ಪಂದ್ಯದಲ್ಲಿ ಆಫ್ಘಾನಿಸ್ತಾನ ಗೆಲುವು ಸಾಧಿಸಬೇಕು. ಆದರೆ ಪಾಕಿಸ್ತಾನ ಗೆಲುವು ಸಾಧಿಸಿದರೆ, ಭಾರತ ಹಾಗೂ ಆಫ್ಘಾನಿಸ್ತಾನ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
 

Follow Us:
Download App:
  • android
  • ios