Asianet Suvarna News Asianet Suvarna News

IND vs SL ಭಾರತದ ದಾಳಿಗೆ ಲಂಕಾ ದಹನ, ಮೊದಲ ಟಿ20 ಪಂದ್ಯ ಗೆದ್ದ ಹಾರ್ದಿಕ್ ಸೈನ್ಯ!

ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿ ನಡುವೆ ಲಂಕಾ ನಾಯಕ ದಸೂನ್ ಶನಕ ಹೋರಾಟ, ಕ್ಷಣ ಕ್ಷಣಕ್ಕೂ ರೋಚಕ, ಪ್ರತಿ ಓವರ್‌ನಲ್ಲಿ ಪಂದ್ಯದ ಸ್ವರೂಪ ಬದಲು. ಹೀಗೆ ಸಾಗಿದ ಮೊದಲ ಟಿ20 ಪಂದ್ಯದಲ್ಲಿ ಭಾರತ 2 ರನ್ ರೋಚಕ ಗೆಲುವು ದಾಖಲಿಸಿದೆ.

IND vs SL t20 Bowlers help team india to beat sri lanka by 2 Runs and took 1 0 series lead ckm
Author
First Published Jan 3, 2023, 10:44 PM IST

ಮುಂಬೈ(ಜ.03): ಭಾರತೀಯ ಬೌಲರ್ಸ್ ಹೋರಾಟ, ಶ್ರೀಲಂಕಾ ನಾಯಕ ದಸೂನ್ ಶನಕ ಬ್ಯಾಟಿಂಗ್ ಅಂತಿಮ ಹಂತದಲ್ಲಿ ಪಂದ್ಯವನ್ನು ತೀವ್ರ ರೋಚಕತೆಗೆ ಕೊಂಡೊಯ್ದಿತ್ತು. ಅಂತಿಮ ಓವರ್ ಮತ್ತಷ್ಟು ಕುತೂಹಲ ಕೆರಳಿಸಿತು. ಅಂತಿಮ ಹಂತದಲ್ಲಿ ಲಂಕಾದ ಕರುಣಾರತ್ನೆ ಸಿಡಿಸಿ ಎರಡು ಸಿಕ್ಸರ್ ಪಂದ್ಯದ ಗತಿ ಬದಲಿಸುವ ಸೂಚನೆ ನೀಡಿತ್ತು. ಆದರೆ ಕೊನೆಯ ಎಸೆತದಲ್ಲಿ ಭಾರತ 2 ರನ್ ಗೆಲುವು ದಾಖಲಿಸಿತು.  ಭಾರತದ ಬೌಲರ್ಸ್ ಪರಾಕ್ರಮದಿಂದ ಲಂಕಾ ತಂಡವನ್ನು160 ರನ್‌ಗೆ ಕಟ್ಟಿ ಹಾಕಲಾಯಿತು. 

163 ರನ್ ಟಾರ್ಗೆಟ್ ಚೇಸ್ ಮಾಡಲು ಶ್ರೀಲಂಕಾ ಸಜ್ಜಾಗಿತ್ತು. ಡ್ಯೂ ಫ್ಯಾಕ್ಟರ್ ಲಾಭ ಕೂಡ ಲಂಕಾಗಿತ್ತು. ಇದೇ ಕಾರಣಕ್ಕೆ ಚೇಸಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಎಲ್ಲಾ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. ಆದರೆ ಶಿವಂ ಮಾವಿ ಬೆಂಕಿ ದಾಳಿಗೆ ಶ್ರೀಲಂಕಾ ಆರಂಭದಲ್ಲೇ ಪಥುಮ್ ನಿಸಂಕಾ ವಿಕೆಟ್ ಕಳೆದುಕೊಂಡಿತು. ನಿಸಂಕ 1 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಧನಂಜಯ ಡಿಸಿಲ್ವ ವಿಕೆಟ್ ಪತನಗೊಂಡಿತು. ಧನಂಜಯ 8 ರನ್ ಸಿಡಿಸಿ ಔಟಾದರು.

ಅಂತಿಮ ಕ್ಷಣದಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ, ಶ್ರೀಲಂಕಾ ಸರಣಿಗೆ ಬುಮ್ರಾ ವಾಪಸ್!

ಕುಸಾಲ್ ಮೆಂಡೀಸ್ ಹೋರಾಟ ಮುಂದುವರಿಸಿದರು. ಇತ್ತ ಚಾರಿತ್ ಅಸಲಂಕಾ ಉತ್ತಮ ಸಾಥ್ ನೀಡಿದರು. ಬಹುಬೇಗನೆ 2 ವಿಕೆಟ್ ಕಳೆದುಕೊಂಡ ಲಂಕಾ ತಂಡಕ್ಕೆ ಮೆಂಡೀಸ್ ಹಾಗೂ ಅಸಲಂಕಾ ನೆರವಾದರು. ಆದರೆ ಚಾರಿತ್ ಅಸಲಂಕ 12 ರನ್ ಸಿಡಿಸಿ ಔಟಾದರು.ಹೋರಾಟ ನೀಡಿದ ಕುಸಾಲ್ ಮೆಂಡೀಸ್ 28 ರನ್ ಸಿಡಿಸಿ ನಿರ್ಗಮಿಸಿದರು.

ಭಾನುಕ ರಾಜಪಕ್ಸ 10 ರನ್ ಸಿಡಿಸಿ ಔಟಾದರು. ಇತ್ತ ನಾಯಕ ದಸೂನ್ ಶನಕ ಕುಸಿದ ತಂಡಕ್ಕೆ ಆಸರೆಯಾದರು. ತಂಡದ ಜವಾಬ್ದಾರಿ ಹೊತ್ತುಕೊಂಡ ನಾಯಕ, ಹೋರಾಟ ಮುಂದುವರಿಸಿದರು. ನಾಯಕನಿಗೆ ವಾನಿಂಡು ಹಸರಂಗ ಜೊತೆಯಾದರು. ಇವರಿಬ್ಬರ ಜೊತೆಯಾಟ ಟೀಂ ಇಂಡಿಯಾ ಆತಂಕ ಹೆಚ್ಚಿಸಿತ್ತು. ಕೇವಲ 10 ಎಸೆತದಲ್ಲಿ 21 ರನ್ ಸಿಡಿಸಿದ ವಾನಿಂಡು ವಿಕೆಟ್ ಪತನ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಆದರೆ ದಸೂನ ಶನಕ ಬ್ಯಾಟಿಂಗ್ ಕ್ಷಣಕ್ಷಣಕ್ಕೂ ಪಂದ್ಯಕ್ಕೆ ರೋಚಕ ತಿರುವು ನೀಡಲು ಆರಂಭಿಸಿತು.

ಚಮಿಕಾ ಕರುಣರತ್ನೆ ಜೊತೆ ಸೇರಿದ ದಸೂನ್ ಶನಕ ಹೋರಾಟ ಭಾರತದ ತಲೆನೋವು ಹೆಚ್ಚಿಸಿತು. 27 ಎಸೆತದಲ್ಲಿ 45 ರನ್ ಚಚ್ಚಿದ ದಸೂನ್ ಶನಕ ಭಾರತಕ್ಕೆ ಅಪಾಯದ ಸೂಚನೆ ನೀಡಿದರು. ಆದರೆ ಉಮ್ರಾನ್ ಮಲಿಕ್ ದಾಳಿಗೆ ಶನಕ ವಿಕೆಟ್ ಪತನಗೊಂಡಿತು. ಈ ವಿಕೆಟ್ ಪತನದೊಂದಿಗೆ ಭಾರತ ಪಂದ್ಯದ ಮೇಲೆ  ಹಿಡಿತ ಸಾಧಿಸಲು ಆರಂಭಿಸಿತು. ಇದರೊಂದಿಗೆ ಲಂಕಾ ಗೆಲುವಿಗೆ ಅಂತಿಮ 18 ಎಸೆತದಲ್ಲಿ 32 ರನ್ ಅವಶ್ಯಕತೆ ಇತ್ತು. 

ಒತ್ತಡಕ್ಕೆ ಸಿಲುಕಿದ ಶ್ರೀಲಂಕಾ ರನ್‌ಗಳಿಸಲು ಪರದಾಡಿತು. ಮಹೀಶ್ ತೀಕ್ಷಾನ ಕೇವಲ 1 ರನ್ ಸಿಡಿಸಿ ಔಟಾದರು. 8 ವಿಕೆಟ್ ಕಳೆದುಕೊಂಡ ಲಂಕಾ ಸೋಲಿನ ಸುಳಿಗೆ ಸಿಲುಕಿತು. ಅಂತಿಮ 2 ಓವರ್‌ಗಳಲ್ಲಿ ಶ್ರೀಲಂಕಾ ಗೆಲುವಿಗೆ 29 ರನ್ ಬೇಕಿತ್ತು. ಭಾರತಕ್ಕೆ ಕೇವಲ 2 ವಿಕೆಟ್ ಅವಶ್ಯಕತೆ ಇತ್ತು. ಚಮಿಕಾ ಕರುಣಾರತ್ನೆ ಸಿಕ್ಸರ್  ಸಿಡಿಸುವ ಮೂಲಕ ಟೀಂ ಇಂಡಿಯಾ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದರು. ಅಕ್ಸರ್ ಪಟೇಲ್ ಅಂತಿಮ ಓವರ್‌ನ 3ನೇ ಎಸೆತದಲ್ಲಿ ಕರುಣಾರತ್ನೆ ಮತ್ತೊಂದು ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಅಂತಿಮ 3 ಎಸೆತದಲ್ಲಿ ಲಂಕಾ ಗೆಲುವಿಗೆ 5 ರನ್ ಅವಶ್ಯಕತೆ ಇತ್ತು. 5ನೇ ಎಸೆತದಲ್ಲಿ ಕಸೂನ್ ರಾಜಿತ ರನ್‌ಔಟ್‌ಗೆ ಬಲಿಯಾದರು.

ICC ಏಕದಿನ ವಿಶ್ವಕಪ್‌ಗೆ BCCI ಆಯ್ಕೆ ಮಾಡಿದ ಭಾರತ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಯಾರಿಗೆಲ್ಲಾ ಸ್ಥಾನ..?

ಅಂತಿಮ 1 ಎಸೆತದಲ್ಲಿ ಲಂಕಾಗೆ 4 ರನ್ ಬೇಕಿತ್ತು. ಕ್ರೀಸ್‌ನಲ್ಲಿ ಸಿಕ್ಸರ್ ಸಿಡಿಸಿ ಚಮಿಕಾ ಕರುಣರತ್ನೆ ಮತ್ತೊಂದು ಸ್ಫೋಟಕ ಹೊಡೆತಕ್ಕೆ ಸಜ್ಜಾಗಿದ್ದರು. ಆದರೆ ಅಕ್ಸರ್ ಪಟೇಲ್ ಚಾಣಾಕ್ಷ ಬೌಲಿಂಗ್‌ನಿಂದ ಸಿಕ್ಸರ್ ಬೌಂಡರಿ ಬರಲಿಲ್ಲ. 2ನೇ ರನ್ ಕದಿಯಲು ಹೋದ ಮಧುಶಂಕ ರನೌಟ್ ಆದರು. ಈ ಮೂಲಕ ಟೀಂ ಇಂಡಿಯಾ 2 ರನ್ ಗೆಲುವು ದಾಖಲಿಸಿತು. 

Follow Us:
Download App:
  • android
  • ios