Asianet Suvarna News Asianet Suvarna News

Yo-Yo Test: ಆಫ್ರಿಕಾ ಸರಣಿಗೆ ಸೆಲೆಕ್ಟ್​ ಆದವರಿಗೆ ಟೆನ್ಷನ್​ ಶುರುವಾಗಿದ್ದೇಕೆ..?

* ಐಪಿಎಲ್ ಮುಗಿಯುತ್ತಿದ್ದಂತೆಯೇ ಭಾರತದಲ್ಲಿ ದಕ್ಷಿಣ ಆಫ್ರಿಕಾ ಎದುರು ಟಿ20 ಸರಣಿ ಆರಂಭ

* ಆಫ್ರಿಕಾ ಎದುರಿನ ಟಿ20 ಸರಣಿಗೆ ಈಗಾಗಲೇ ಭಾರತ ಕ್ರಿಕೆಟ್ ತಂಡ ಪ್ರಕಟ

* ಯೋ ಯೋ ಟೆಸ್ಟ್​ ಪಾಸಾಗಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ ಆಟಗಾರರು

Ind vs SA T20I Series Team India Cricketer Yo Yo Test More Difficult For Players kvn
Author
Bengaluru, First Published May 26, 2022, 2:48 PM IST | Last Updated May 26, 2022, 2:48 PM IST

ಮುಂಬೈ(ಮೇ.22): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (Indian Premier League) ಮುಗಿಯುತ್ತಿದ್ದಂತೆ ಭಾರತ ಕ್ರಿಕೆಟ್ ತಂಡವು ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟಿ20 ಸರಣಿಯನ್ನಾಡಲಿದೆ. ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿ ಮುಂಬರುವ ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ಟೀಂ​ ಇಂಡಿಯಾವನ್ನ ಪ್ರಕಟಿಸಿತ್ತು. ಕನ್ನಡಿಗ ಕೆಎಲ್​ ರಾಹುಲ್​ (KL Rahul) ನಾಯಕತ್ವದಲ್ಲಿ 18 ಸದಸ್ಯರ ತಂಡವನ್ನ ಸಜ್ಜುಗೊಳಿಸಿತ್ತು. ಇದ್ರಲ್ಲಿ ಕೆಲವರಿಗೆ ಜಾಕ್​​​​ಪಾಟ್​ ಹೊಡೆದಿತ್ತು. ಸದ್ಯ ಟೀಮ್​​ ಅನೌನ್ಸ್ ಆಗಿ 3 ದಿನ ಕಳೆದಿದೆ. ಆಫ್ರಿಕಾ ಸರಣಿಗೆ ಸೆಲೆಕ್ಟ್ ಆದ ಎಲ್ಲಾ ಪ್ಲೇಯರ್ಸ್​ಗೆ ಹೊಸ ಟೆನ್ಷನ್​ ಶುರುವಾಗಿದೆ. 

ಟೀಂ​​ ಇಂಡಿಯಾ ಆಟಗಾರರಿಗೆ ಯೋ ಯೋ 'ಟೆಸ್ಟ್​​​: 

ಹೌದು, ಆಫ್ರಿಕಾ ಸರಣಿಗೆ ಸೆಲೆಕ್ಟ್​ ಆದ ಖುಷಿಯಲ್ಲಿದ್ದ ಆಟಗಾರರಿಗೆ ಬಿಸಿಸಿಐ (BCCI) ಈಗ ಹೊಸ ಟೆನ್ಷನ್​ ತಂದೊಡ್ಡಿದೆ. ಅದೇನಂದ್ರೆ ಆಯ್ಕೆಯಾದ 18 ಪ್ಲೇಯರ್ಸ್​ ಯೋ ಯೋ ಟೆಸ್ಟ್​ (Yo Yo Test) ಪಾಸಾಗಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಸಿಸಿಐ ಎಲ್ಲಾ ಆಟಗಾರರಿಗೆ ಕಡ್ಡಾಯವಾಗಿ ಫಿಟ್ನೆಸ್​​ ಟೆಸ್ಟ್​​​ನಲ್ಲಿ  ಪಾಸಾಗಲೇಬೇಕೆಂದು ಖಡಕ್ ಆಗಿ ಸೂಚಿಸಿದೆ. ಐಪಿಎಲ್​​ ಮುಗಿಯುತ್ತಿದ್ದಂತೆ  ಜೂನ್​​ 5ರಂದು ಬೆಂಗಳೂರಿನ ಎನ್​​ಸಿಎಯಲ್ಲಿ ಫಿಟ್ನೆಸ್​​ ಕ್ಯಾಂಪ್ ನಡೆಯಲಿದೆ. ಈ ವೇಳೆ ಹೆಡ್​​ ಕೋಚ್​ ರಾಹುಲ್​​ ದ್ರಾವಿಡ್ (Team India head Coach Rahul Dravid)​​ ಹಾಗೂ ಎನ್​ಸಿಎ ಮುಖ್ಯಸ್ಥ ವಿವಿಎಸ್​ ಲಕ್ಷ್ಮಣ್​​​ ಹಾಜರಿರಲಿದ್ದಾರೆ. ಈ ಇಬ್ಬರು ದಿಗ್ಗಜರ ಸಮ್ಮುಖದಲ್ಲಿ ಪ್ಲೇಯರ್ಸ್​ ಫಿಟ್ನೆಸ್​​ ಟೆಸ್ಟ್ ಪಾಸಾಗಬೇಕಿದೆ. ಒಂದು ವೇಳೆ ಈ ಟೆಸ್ಟ್​​ನಲ್ಲಿ ಫೇಲಾದ್ರೆ ಆಫ್ರಿಕಾ ಸರಣಿಯಿಂದ ಸ್ಥಾನ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ​​​18 ಆಟಗಾರರ ಎದೆಯಲ್ಲಿ ಢವ ಢವ ಶುರುವಾಗಿದೆ.

ಹಾರ್ದಿಕ್​​​​​​​​ ಪಾಂಡ್ಯ ಎದೆಯಲ್ಲಿ ಢವಢವ:

ನಿಜ, ಈ ಪ್ರಶ್ನೆ ಎಲ್ಲರನ್ನ ಕಾಡುತ್ತೆ. ಐಪಿಎಲ್​​​ ಪರ್ಫಾಮೆನ್ಸ್​​ ಮೇಲೆ ಆಫ್ರಿಕಾ ಸರಣಿಗೆ ತಂಡವನ್ನ ಪ್ರಕಟಿಸಲಾಗಿದೆ. ಇದಾಗಿಯೂ ಮತ್ತೊಮ್ಮೆ ಯೋ ಯೋ ಟೆಸ್ಟ್​ ನಡೆಸೋದು ಅನಗತ್ಯ ಅನ್ನಿಸಬಹುದು. ಆದ್ರೆ ಇದಕ್ಕೊಂದು ಕಾರಣವಿದೆ. ಯಾಕಂದ್ರೆ ಟೀಂ​ ಇಂಡಿಯಾದ ಆಯ್ಕೆಯಾದ ಎಲ್ಲಾ ಪ್ಲೇಯರ್ಸ್​ ಫುಲ್​​​ ಫಿಟ್ ಆಗಿಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​​​​ ಹಾರ್ದಿಕ್​​ ಪಾಂಡ್ಯ. 

ಹೌದು, ಹಾರ್ದಿಕ್​​​​​ ಪ್ರಸಕ್ತ ಐಪಿಎಲ್​​​ನಲ್ಲಿ ಸಾಲಿಡ್​​​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಜೊತೆಗೆ ತಂಡವನ್ನ ಫೈನಗೇರಿಸಿದ್ದಾರೆ ನಿಜ. ಆದ್ರೆ ಈ ಸ್ಟಾರ್​ ಆಲ್​ರೌಂಡರ್​​​ ಅನ್​ಫಿಟ್​​ನಿಂದಾಗಿ ಟೀಂ​ ಇಂಡಿಯಾದಿಂದ ಹೊರಬಿದ್ದಿದ್ರು. ಬಿಸಿಸಿಐ ಎನ್​​ಸಿಎ ಶಿಬಿರದಲ್ಲಿ ಭಾಗಿಯಾಗಬೇಕೆಂದು ಖಡಕ್ ಆಗಿ ಸೂಚಿಸಿದ್ರು ಅವರ ಮಾತಿಗೆ ಸೊಪ್ಪಿ ಹಾಕ್ಲಿಲ್ಲ. ಆದ್ರೆ ಫೈನಲ್ ವಾರ್ನಿಂಗ್ ನೀಡಿದ್ದರಿಂದ ಬಂದು ಫಿಟ್ನೆಸ್ ಟೆಸ್ಟ್​​ ಪಾಸ್ ಮಾಡಿ ಹೋದ್ರು. ಆದ್ರೂ ಡೊಮೆಸ್ಟಿಕ್ ​ ಕ್ರಿಕೆಟ್​​ ಆಡದೆಯೇ ನೇರವಾಗಿ ಐಪಿಎಲ್​​​​​​​​ಗೆ ಧುಮುಕಿದ್ರು. 

ಪರಿಶ್ರಮಕ್ಕೆ ಸಿಕ್ಕ ಬೆಲೆ: ಟೀಂ ಇಂಡಿಯಾಗೆ ಭರ್ಜರಿ ಕಮ್‌ಬ್ಯಾಕ್‌ ಮಾಡಿದ ದಿನೇಶ್ ಕಾರ್ತಿಕ್‌...!

ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ರೂ, ಇವರ ಫಿಟ್ನೆಸ್​ ಬಗ್ಗೆ ಬಿಸಿಸಿಐಗೆ ಅನುಮಾನವಿದೆ. ಯಾಕಂದ್ರೆ ಪಾಂಡ್ಯ ಪೂರ್ಣ ಪ್ರಮಾಣದಲ್ಲಿ ಬೌಲಿಂಗ್​ ಮಾಡ್ತಿಲ್ಲ. ಹೀಗಾಗಿ ಬಿಸಿಸಿಐ ಎಲ್ಲಾ ಪ್ಲೇಯರ್ಸ್​ಗೆ ಆಫ್ರಿಕಾ ಸರಣಿ ಆರಂಭಕ್ಕೂ ಮುನ್ನ ಯೋ ಯೋ ಟೆಸ್ಟ್​​​ ನಡೆಸಲು ಮುಂದಾಗಿದೆ. ಒಂದು ವೇಳೆ ಈ ಟೆಸ್ಟ್​ನಲ್ಲಿ ಪಾಂಡ್ಯ ಫೇಲಾದ್ರೆ ಆಫ್ರಿಕಾ ಸರಣಿ ಮಿಸ್​ ಮಾಡಿಕೊಳ್ಳಲಿದ್ದಾರೆ. ಇವರಂತೆ ಇನ್ನು ಕೆಲವರಿಗೆ ಆ ಭೀತಿ ಶುರುವಾಗಿದೆ. ಜೂನ್​​ 5ರಂದು ಯೋ ಯೋ ಟೆಸ್ಟ್​​​​ ಭವಿಷ್ಯ ಹೊರಬೀಳಲಿದೆ.

Latest Videos
Follow Us:
Download App:
  • android
  • ios