Asianet Suvarna News Asianet Suvarna News

IND vs SA ಮತ್ತೆ ಟಾಸ್ ಸೋತ ಟೀಂ ಇಂಡಿಯಾ, ಸೌತ್ ಆಫ್ರಿಕಾ ಫೀಲ್ಡಿಂಗ್

  • ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ
  • 1-2 ಹಿನ್ನಡೆಯಲ್ಲಿರುವ ಟೀಂ ಇಂಡಿಯಾಗೆ ಮಹತ್ವದ ಪಂದ್ಯ
  • ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ
     
IND vs SA 4th T20 South Africa win toss and opt bowl first against Team India ckm
Author
Bengaluru, First Published Jun 17, 2022, 6:43 PM IST | Last Updated Jun 17, 2022, 7:07 PM IST

ರಾಜ್‌ಕೋಟ್(ಜೂ.17): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ ಕುತೂಹಲ ಘಟ್ಟದಲ್ಲಿದೆ.1-2 ಅಂತರದ ಹಿನ್ನಡೆಯಲ್ಲಿರುವ ಟೀಂ ಇಂಡಿಯಾಗೆ ಇಂದು ಗೆಲ್ಲಲೇಬೇಕಾದ ಪಂದ್ಯ. ಈ ಮಹತ್ವ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತ ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್, ಅವೇಶ್ ಖಾನ್

ಸೌತ್ ಆಫ್ರಿಕಾ ಪ್ಲೇಯಿಂಗ್ 11
ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿಕಾಕ್, ರಸಿ ವಾಂಡರ್ ಡಸೆನ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕಾಲ್ಸೇನ್, ಡ್ವೇನ್ ಪ್ರೆಟ್ರೋರಿಯಸ್, ಕೇಶವ್ ಮಹಾರಾಜ್, ಮಾರ್ಕೋ ಜಾನ್ಸೆನ್, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ, ಅನ್ರಿಜ್ ನೋರ್ಜೆ

ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ 498 ರನ್ ಪೇರಿಸಿದ ಇಂಗ್ಲೆಂಡ್!

ರಾಜ್‌ಕೋಟ್ ಕ್ರೀಡಾಂಗಣದಲ್ಲಿ ರನ್ ಮಳೆ ಹರಿಯಲಿದೆ. ಕಾರಣ ಈ ಹಿಂದಿನ 3 ಪಂದ್ಯಗಳಲ್ಲಿ ಎರಡು ಪಂದ್ಯ ಬೃಹತ್ ಮೊತ್ತಕ್ಕೆ ಸಾಕ್ಷಿಯಾಗಿತ್ತು. ಈ ಕ್ರೀಡಾಂಗಣದಲ್ಲಿ ಆಡಿರುವ ಮೂರು ಟಿ20 ಪಂದ್ಯಗಳಲ್ಲಿ ಭಾರತ 2ರಲ್ಲಿ ಗೆಲುವು ಸಾಧಿಸಿದೆ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 201 ರನ್ ಚೇಸ್ ಮಾಡಿ ಗೆಲುವು ಸಾಧಿಸಿತ್ತು. ಇನ್ನು ಬಾಂಗ್ಲಾದೇಶ ನೀಡಿದ್ದ 154 ರನ್ ಟಾರ್ಗೆಟ್ ಚೇಸ್ ಮಾಡಿ ಭಾರತ ಗೆಲುವು ಸಾಧಿಸಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿತ್ತು.

5 ಪಂದ್ಯಗಳ ಟಿ20 ಸರಣಿಯ ಆರಂಭಿಕ 2 ಪಂದ್ಯಗಳನ್ನು ಸೌತ್ ಆಫ್ರಿಕಾ ತಂಡ ಗೆದ್ದರೆ, 3ನೇ ಪಂದ್ಯವನ್ನು ಭಾರತ ಗೆದ್ದುಕೊಂಡಿದೆ. ಇದೀಗ ನಾಲ್ಕನೇ ಪಂದ್ಯವೂ ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಗೆಲವಿನ ಲಯಕ್ಕೆ ಮರಳಿರುವ ಟೀಂ ಇಂಡಿಯಾ 4ನೇ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ.

ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾಗೆ 7 ವಿಕೆಟ್ ಗೆಲುವು
ಸೌತ್ ಆಫ್ರಿಕಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 211 ರನ್ ಸಿಡಿಸಿತ್ತು. ಆದರೆ ರಸಿ ವಾಂಡರ್ ಡಸೆನ್ ಹಾಗೂ ಡೇವಿಡ್ ಮಿಲ್ಲರ್ ಹೋರಾಟದಿಂದ ಸೌತ್ ಆಫ್ರಿಕಾ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತ್ತು

ಉಮ್ರಾನ್‌ ಮಲಿಕ್‌ರಷ್ಟು ವೇಗವಾಗಿ ಬೌಲಿಂಗ್‌ ಮಾಡಲು ನನಗೆ ಸಾಧ್ಯವಿಲ್ಲವೆಂದ ಹರ್ಷಲ್‌ ಪಟೇಲ್‌..!

2ನೇ ಪಂದ್ಯದಲ್ಲಿ ಸೌತ್ ಆಫ್ರಿಕಾಗೆ 4 ವಿಕೆಟ್ ಗೆಲುವು
ದ್ವಿತೀಯ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 148 ರನ್ ಸಿಡಿಸಿತ್ತು. ಹೆನ್ಲಿಚ್ ಕಾಲ್ಸೇನ್ 81 ರನ್ ನೆರವಿನಿಂದ ಸೌತ್ ಆಫ್ರಿಕಾ 4 ವಿಕೆಟ್ ಗೆಲುವು ಕಂಡಿತ್ತು. ಈ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು.

3ನೇ ಪಂದ್ಯದಲ್ಲಿ ಭಾರತಕ್ಕೆ 48ರನ್ ಗೆಲುವು
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ಕಮ್‌ಬ್ಯಾಕ್ ಮಾಡಿತ್ತು. ಸೌತ್ ಆಫ್ರಿಕಾ ವಿರುದ್ಧ 48 ರನ್ ಗೆಲುವು ದಾಖಲಿಸಿತು. ಇದರೊಂದಿಗೆ ಸರಣಿಯನ್ನು ಜೀವಂತವಾಗಿರಿಸಿತು.

Latest Videos
Follow Us:
Download App:
  • android
  • ios