Asianet Suvarna News Asianet Suvarna News

IND vs SA ಸೌತ್ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ, ಯಾರು ಇನ್? ಯಾರು ಔಟ್!

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ ಆರಂಭಗೊಂಡಿದೆ. ತಿರುವನಂತಪುರಂನಲ್ಲಿ ನಡೆಯತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. 

IND vs SA 1st T20I Team India wins toss and opt bowl first against south Africa at Thiruvananthapuram ckm
Author
First Published Sep 28, 2022, 6:33 PM IST

ತಿರುವನಂತಪುರಂ(ಸೆ.28): ಆಸ್ಟೇಲಿಯಾ ವಿರುದ್ದದ ಟಿ20 ಸರಣಿ ಗದ್ದ ಟೀಂ ಇಂಡಿಯಾ ಇದೀಗ ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ಸಜ್ಜಾಗಿದೆ. 3 ಪಂದ್ಯಗಳ ಟಿ20 ಸರಣಿ ತಿರುವನಂತಪುರಂನಿಂದ ಆರಂಭಗೊಂಡಿದೆ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನಡೆಯುತ್ತಿರುವ ಈ ಸರಣಿ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಹಾರ್ದಿಕ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ ನೀಡಲಾಗಿದೆ. ಇವರ ಸ್ಥಾನದಲ್ಲಿ ರಿಷಬ್ ಪಂತ್ ಹಾಗೂ ಅರ್ಶದೀಪ್ ತಂಡ ಸೇರಿಕೊಂಡಿದ್ದಾರೆ. ಇತ್ತ ಜಸ್ಪ್ರೀತ್ ಬುಮ್ರಾ ಹಾಗೂ ಯಜುವೇಂದ್ರ ಚಹಾಲ್ ತಂಡದಿಂದ ಹೊರಗುಳಿದಿದ್ದಾರೆ.  ಆರ್ ಅಶ್ವಿನ್ ಹಾಗೂ ಅಕ್ಸರ್ ಪಟೇಲ್ ಸ್ಪಿನ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅಶ್ವಿನ್ ಆಗಮನದಿಂದ ಚಹಾಲ್ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ದೀಪಕ್ ಚಹಾರ್, ಹರ್ಷಲ್ ಪಟೇಲ್ ಹಾಗೂ ಅರ್ಶದೀಪ್ ಸಿಂಗ್ ವೇಗದ ಸಾರಥ್ಯ ವಹಿಸಿದ್ದಾರೆ. ಅನುಭವಿ ವೇಗಿಗಳ ಕೊರತೆ ಟೀಂ ಇಂಡಿಯಾಗೆ ಕೊಂಚ ಕಾಡಲಿದೆ. ದಿನೇಶ್ ಕಾರ್ತಿಕ್  ಹಾಗೂ ರಿಷಬ್ ಪಂತ್ ಇಬ್ಬರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಅರ್ಶದೀಪ್ ಸಿಂಗ್

ಟೀಂ ಇಂಡಿಯಾ ಡೆತ್ ಓವರ್ ಬೌಲಿಂಗ್‌ ಬಗ್ಗೆ ಗಮನ ಹರಿಸಲಿ: ಇರ್ಫಾನ್ ಪಠಾಣ್

ಸೌತ್ ಆಫ್ರಿಕಾ ಪ್ಲೇಯಿಂಗ್ 11
ಕ್ವಿಂಟನ್ ಡಿಕಾಕ್, ತೆಂಬಾ ಬುವಮಾ(ನಾಯಕ), ರಿಲೆ ರೋಸೋ, ಆ್ಯಡಿನ್ ಮಕ್ರಮ್, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ವೈಯ್ನ್ ಪಾರ್ನೆಲ್, ಕಾಗಿಸೋ ರಬಡಾ, ಕೇಶವ್ ಮಹಾರಾಜ, ಅನ್ರಿಚ್ ನೋರ್ಜೆ, ತಬ್ರೈಜ್ ಶಮ್ಸಿ

ಭಾರತ ಟಿ20 ಸರಣಿಯಲ್ಲಿ(Team India) ಪ್ರಾಬಲ್ಯ ಸಾಧಿಸುತ್ತಿದೆ. ಆದರೆ ಐಸಿಸಿ(ICC Cricket) ಸೇರಿದಂತೆ ಮಹತ್ವದ ಸರಣಿಗಳಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿರುವುದೇ ತಲೆನೋವಿಗೆ ಕಾರಣವಾಗಿದೆ. ಆಸ್ಟ್ರೇಲಿಯಾ(India vs Australia) ವಿರುದ್ದದ ಸರಣಿಯಲ್ಲಿ ಆರಂಭಿಕ ಪಂದ್ಯದಲ್ಲಿ ಸುಲಭವಾಗಿ ಭಾರತ ಸೋಲೊಪ್ಪಿಕೊಂಡರೆ, ಉಳಿದೆರಡು ಪಂದ್ಯದಲ್ಲಿನ ಗೆಲುವು ಸುಲಭವಾಗಿರಲಿಲ್ಲ. ಟೀಂ ಇಂಡಿಯಾ ಟಿ20(T20I) ತಂಡ ಎದುರಾಳಿಗೆ ಭಯ ಬೀಳಿಸುವ ಪ್ರದರ್ಶನ ಇನ್ನೂ ನೀಡಿಲ್ಲ. ಅದು ಬ್ಯಾಟಿಂಗ್‌ನಲ್ಲಿ ಆಗಲಿ, ಬೌಲಿಂಗ್ ಇರಲಿ. ಎಲ್ಲವೂ ಹರಸಾಹಸದ ಗೆಲುವಾಗಿದೆ. ಇದೀಗ ಸೌತ್ ಆಫ್ರಿಕಾ(India vs Australia) ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಈ ಎಲ್ಲಾ ಕೊರತೆಗಳಿಗೆ ಫುಲ್ ಸ್ಟಾಪ್ ಇಡಲು ತಯಾರಿ ನಡೆಸಿದೆ.

ವೇಗಿಗಳೇ ಹರಿಣಗಳ ತಂಡದ ದೊಡ್ಡ ಶಕ್ತಿ ಎಂದ ಜಾಕ್ ಕಾಲಿಸ್

ತಿರುವನಂತಪುರಂನಲ್ಲಿ ಮಳೆಯ ಸೂಚನೆ ಇಲ್ಲ. ಹೀಗಾಗಿ ಫುಲ್ ಸೈಡ್ ಮ್ಯಾಚ್ ನಡೆಯಲಿದೆ. ಈ ಪಂದ್ಯಕ್ಕೆ ಹಾರ್ಧಿಕ್ ಪಾಂಡ್ಯ ಲಭ್ಯವಿಲ್ಲ. ಇನ್ನು ರಿಷಬ್ ಪಂತ್ ತಮ್ಮ ಸಾಮರ್ಥ್ಯ ಸಾಬೀತು ಪಡಿಸಬೇಕಿದೆ. ಇತ್ತೀಚಿನ ಎಲ್ಲಾ ಪಂದ್ಯಗಲ್ಲಿ ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಮೊದಲ ಆಯ್ಕೆಯಾಗಿದೆ. 
 

Follow Us:
Download App:
  • android
  • ios