IND vs NZ : ಕೋಲ್ಕತಾ ಟಿ20 ಪಂದ್ಯಕ್ಕೂ ಮುನ್ನ 11 ಮಂದಿ ಬಂಧನ!

  • ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಅಂತಿಮ ಟಿ20 ಪಂದ್ಯ
  • ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ ಪಂದ್ಯ
  • ಅಕ್ರಮ ಟಿಕೆಟ್ ಮಾರಾಟ, 11 ಮಂದಿ ಬಂಧಿಸಿದ ಪೊಲೀಸ್
IND vs NZ T20 11 arrested for selling tickets illegally Eden Gardens stadium in Kolkata before match ckm

ಕೋಲ್ಕತಾ(ನ.21):  ಭಾರತ(India) ಹಾಗೂ ನ್ಯೂಜಿಲೆಂಡ್(New zealand) ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯ ಆರಂಭಕ್ಕೂ ಮುನ್ನ ಪೊಲೀಸರು(Police) 11 ಮಂದಿಯನ್ನು ಬಂಧಿಸಿದ್ದಾರೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದ(Eden Gardens stadium) ಸನಿಹದಲ್ಲಿ ಅಕ್ರಮವಾಗಿ ಟಿಕೆಟ್ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಪೊಲೀಸರು 11 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದ ಟಿಕೆಟ್ ವಂಚಕರ ಜಾಲ ಇದೀಗ ಪೊಲೀಸರ ಅತಿಥಿಯಾಗಿದೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3ನೇ ಟಿ20 ಪಂದ್ಯಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಕಾರಣ 2-0 ಅಂತರದಲ್ಲಿ ಸರಣಿ ಗೆದ್ದಿರುವ ಟೀಂ ಇಂಡಿಯಾ ಕ್ಲೀನ್ ಸ್ಪೀಪ್ ಮಾಡಲು ತುದಿಗಾಲಲ್ಲಿ ನಿಂತಿದೆ. ಕೊರೋನಾ ಕಾರಣ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆಗೆ ಅವಕಾಶವಿರಲಿಲ್ಲ. ಇದೀಗ ಅಭಿಮಾನಿಗಳಿಗೆ(Fans) ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಇಂದು ಭಾನುವಾರ ಆಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಟಿಕೆಟ್‌ಗೆ(Match Ticket) ಮುಗಿಬಿದ್ದಿದ್ದಾರೆ. 

Ind vs NZ 3rd T20I: ಕಿವೀಸ್ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ ಆಯ್ಕೆ

ಇದೇ ಸಂದರ್ಭವನ್ನು ಬಳಸಿಕೊಂಡ 11 ಮಂದಿ ತಂಡ, 60 ಟಿಕೆಟ್ ಖರೀದಿಸಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿತ್ತು. ಪಂದ್ಯ ನೋಡಲೇಬೇಕು ಎಂದು ಕ್ರೀಡಾಂಣದ ಟಿಕೆಟ್ ಕೌಂಟರ್‌ಗೆ ಆಗಮಿಸಿದ ಅಭಿಮಾನಿಗಳಿಗೆ ಟಿಕೆಟ್ ಸಿಗದೆ ನಿರಾಸೆಯಾಗಿದ್ದಾರೆ. ವ್ಯವಸ್ಥಿತವಾಗಿ ಈ ಜಾಲ ಟಿಕೆಟ್ ಸಿಗದೆ ನಿರಾಸೆಯಾಗಿರುವ ಅಭಿಮಾನಿಗಳನ್ನು ಸಂಪರ್ಕಿಸಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಟಿಕೆಟ್ ಮಾರಾಟ ಮಾಡಿದ್ದಾರೆ.

ಹಲವು ಅಭಿಮಾನಿಗಳು ಹೆಚ್ಚಿನ ಹಣ ನೀಡಿ ಟಿಕೆಟ್ ಖರೀದಿಸಿದ್ದಾರೆ. ಒಂದೊಂದು ಟಿಕೆಟ್ ಮೇಲೆ 4 ರಿಂದ 6,000 ವರಗೆ ಹೆಚ್ಚಿನ ಹಣ ಪಡೆದುಕೊಂಡಿದ್ದಾರೆ. ಕೋಲ್ಕತಾದಲ್ಲಿ ಹೆಚ್ಚಿನ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಹಾಗೂ ಭದ್ರತಾ ಪಡೆಯನ್ನು ನಿಯೋಜನೆ ಮಾಡಿದೆ. ಮುಫ್ತಿಯಲ್ಲಿದ್ದ ಪೊಲೀಸರು ಅಕ್ರಮ ಟಿಕೆಟ್ ಮಾರಾಟ ದಂಧೆಯನ್ನು ಪತ್ತೆ ಹಚ್ಚಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು 11 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರೀಡಾಂಗಣ ಸುತ್ತ 2,000 ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಡೆಪ್ಯೂಟಿ ಕಮಿಷನರ್, ಅಸಿಸ್ಟೆಂಟ್ ಕಮಿಷನರ್ ಕೂಡ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಯದಂತೆ ಹದ್ದಿನ ಕಣ್ಣಿಡಲಾಗಿದೆ. 

ಕೋಲ್ಕತಾ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.  ಆರಂಭಿಕ ಎರಡು ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಇದೀಗ 3ನೇ ಪಂದ್ಯ ಗೆದ್ದು 3- ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಲು ತುದಿಗಾಲಲ್ಲಿ ನಿಂತಿದೆ. ಜೈಪುರದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಸೈನ್ಯ 5 ವಿಕೆಟ್ ಗೆಲುವು ಕಂಡಿತ್ತು. ರಾಂಚಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ 7 ವಿಕೆಟ್ ಗೆಲುವು ಕಂಡಿತ್ತು.  ಮೂಲಕ ಸರಣಿ ಕೈವಶ ಮಾಡಿತ್ತು.

MS Dhoni IPL 2022 ಟೂರ್ನಿ ಆಡ್ತಾರಾ? ಮಿಲಿಯನ್ ಡಾಲರ್ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ CSK ನಾಯಕ..!

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೊನೆಯದಾಗಿ ನಾಯಕತ್ವ ವಹಿಸಿದ ವಿರಾಟ್ ಕೊಹ್ಲಿ ಇನ್ನು ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಮಾತ್ರ ನಾಯಕನಾಗಿ ಮುಂದುವರಿಯಲಿದ್ದಾರೆ. ಸತತ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಿಲ್ಲ. ಟಿ20 ಮಾದರಿಯಲ್ಲಿ ನಾಯಕತ್ವನ್ನು ರೋಹಿತ್ ಶರ್ಮಾಗೆ ನೀಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿ ಮೂಲಕ ಕೋಚ್ ರವಿ ಶಾಸ್ತ್ರಿ ಅವದಿ ಅಂತ್ಯಗೊಂಡಿದೆ. ನ್ಯೂಜಿಲೆಂಡ್ ಸರಣಿಯಿಂದ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದ ಮೊದಲ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. 

Latest Videos
Follow Us:
Download App:
  • android
  • ios