Asianet Suvarna News Asianet Suvarna News

Ind vs NZ Test Series: ಕಿವೀಸ್ ಎದುರಿನ ಟೆಸ್ಟ್‌ ಸರಣಿಗೆ ರೋಹಿತ್ ಶರ್ಮಾಗೆ ವಿಶ್ರಾಂತಿ..?

* ಕಿವೀಸ್ ಎದುರಿನ ಟೆಸ್ಟ್‌ ಸರಣಿಗೆ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯುವ ಸಾಧ್ಯತೆ

* ವಿರಾಟ್ ಕೊಹ್ಲಿ, ರೋಹಿತ್ ಅನುಪಸ್ಥಿತಿಯಲ್ಲಿ ರಹಾನೆಗೆ ನಾಯಕ ಪಟ್ಟ?

* ಈಗಾಗಲೇ ಸೀಮಿತ ಓವರ್‌ಗಳ ಸರಣಿಯಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ

Ind vs NZ Rohit Sharma likely to skip Tests Ajinkya Rahane to lead in first Test against New Zealand kvn
Author
Bengaluru, First Published Nov 12, 2021, 7:01 AM IST

ನವದೆಹಲಿ(ನ.12): ಮುಂಬರುವ ನ್ಯೂಜಿಲೆಂಡ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿಯಿಂದ ಹೊರಗುಳಿಯಲು ರೋಹಿತ್‌ ಶರ್ಮಾ (Rohit Sharma) ಬಿಸಿಸಿಐ ಬಳಿ ಅನುಮತಿ ಕೋರಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ, ತಂಡದ ನಾಯಕ ವಿರಾಟ್‌ ಕೊಹ್ಲಿ (Virat Kohli) ಮೊದಲ ಟೆಸ್ಟ್‌ನಿಂದ ವಿಶ್ರಾಂತಿ ಪಡೆಯಲು ಇಚ್ಛಿಸಿದ್ದಾರೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಆಟಗಾರರು ಈಗಾಗಲೇ ಹಲವು ತಿಂಗಳುಗಳ ಕಾಲ ಬಯೋಬಬಲ್‌ನಲ್ಲಿ ಸಮಯ ಕಳೆದಿದ್ದು, ಅಲ್ಲದೇ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸರಣಿಯನ್ನೂ ಆಡಬೇಕಿದೆ. ಹೀಗಾಗಿ ಕಿವೀಸ್‌ ವಿರುದ್ಧ ಟಿ20 ಸರಣಿಗೆ ನಾಯಕರಾಗಿರುವ ರೋಹಿತ್‌, 2 ಪಂದ್ಯಗಳ ಟೆಸ್ಟ್‌ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅವರು ಈ ಬಗ್ಗೆ ಬಿಸಿಸಿಐ (BCCI) ಬಳಿ ಅನುಮತಿ ಕೋರಿದ್ದಾರೆ ಎಂದು ವರದಿಯಾಗಿದೆ.

Ind vs NZ Test: ಟೀಂ ಇಂಡಿಯಾ ಎದುರಿನ ಟೆಸ್ಟ್‌ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ

ಇನ್ನು, ಟಿ20 ಸರಣಿಗೆ ವಿಶ್ರಾಂತಿ ಪಡೆದಿರುವ ಕೊಹ್ಲಿ ಮೊದಲ ಟೆಸ್ಟ್‌ ಪಂದ್ಯದಿಂದ ಹೊರಗುಳಿಯಲು ಇಚ್ಛಿಸಿದ್ದು, 2ನೇ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇವರಿಬ್ಬರು ಗೈರಾದರೆ ಮೊದಲ ಟೆಸ್ಟ್‌ ಪಂದ್ಯಕ್ಕೆ ಅಜಿಂಕ್ಯ ರಹಾನೆ (Ajinkya Rahane) ನಾಯಕರಾಗುವ ನಿರೀಕ್ಷೆ ಇದೆ. ಇನ್ನು ಸತತ ಕ್ರಿಕೆಟ್‌ನಿಂದ ದಣಿದಿರುವ ರಿಷಭ್‌ ಪಂತ್‌ (Rishabh Pant), ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ ಹಾಗೂ ಶಾರ್ದೂಲ್‌ ಠಾಕೂರ್‌ಗೆ ಟೆಸ್ಟ್‌ ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. 

ನವೆಂಬರ್ 17ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ನವೆಂಬರ್ 17ರಂದು ಜೈಪುರದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಇದಾದ ಬಳಿಕ ನವೆಂಬರ್ 19ರಂದು ರಾಂಚಿಯಲ್ಲಿ ಹಾಗೂ ನವೆಂಬರ್ 21ರಂದು ಕೋಲ್ಕತದ ಈಡನ್‌ ಗಾರ್ಡನ್‌ ಮೈದಾನದಲ್ಲಿ ಕೊನೆಯ ಟಿ20 ಪಂದ್ಯ ನಡೆಯಲಿದೆ. ಇದಾದ ಬಳಿಕ ಕಿವೀಸ್ ತಂಡವು ಭಾರತ ವಿರುದ್ದ 2 ಪಂದ್ಯಗಳ ಟೆಸ್ಟ್ ಚಾಂಪಿಯನ್‌ನಲ್ಲಿ ಪಾಲ್ಗೊಳ್ಳಲಿದ್ದು, ಮೊದಲ ಟೆಸ್ಟ್ ನವೆಂಬರ್ 25ರಿಂದ 29ರವರೆಗೆ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆದರೆ, ಡಿಸೆಂಬರ್ 03ರಿಂದ 07ರವರೆಗೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.

Ind vs NZ ಕ್ರಿಕೆಟ್ ಸರಣಿ: ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟ BCCI..!

ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ಅಜಿಂಕ್ಯ ರಹಾನೆ ಫಾರ್ಮ್ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಇದೀಗ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆಗೆ ಮತ್ತೊಮ್ಮೆ ಹಂಗಾಮಿ ಪಟ್ಟ ಕಟ್ಟುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇನ್ನು ಕೆ. ಎಲ್. ರಾಹುಲ್ (KL Rahul) ಜತೆಗೆ ಶುಭ್‌ಮನ್ ಗಿಲ್ ಇಲ್ಲವೇ ಮಯಾಂಕ್ ಅಗರ್‌ವಾಲ್ ಟೀಂ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ, ಹನುಮ ವಿಹಾರಿ ತಂಡಕ್ಕೆ ಬಲ ತುಂಬಲಿದ್ದಾರೆ. ಇನ್ನು ವೃದ್ದಿಮಾನ್ ಸಾಹ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್‌ ಆಗಿ ಅಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಟೆಸ್ಟ್‌ ಉಪನಾಯಕ ಸ್ಥಾನಕ್ಕೆ ರೋಹಿತ್‌-ರಹಾನೆ ನಡುವೆ ಸ್ಪರ್ಧೆ

ನವದೆಹಲಿ: ಭಾರತ ಟಿ20 ತಂಡದ ನೂತನ ನಾಯಕರಾಗಿ ನೇಮಕಗೊಂಡಿರುವ ರೋಹಿತ್‌ ಶರ್ಮಾ ಟೆಸ್ಟ್‌ ತಂಡದ ಉಪನಾಯಕರಾಗುವ ಸಾಧ್ಯತೆ ಇದೆ. ವಿರಾಟ್‌ ಕೊಹ್ಲಿ ಜೊತೆ ಹಲವು ವರ್ಷಗಳಿಂದ ಉಪನಾಯಕನಾಗಿ ಕಾರ‍್ಯನಿರ್ವಹಿಸುತ್ತಿರುವ ಅಜಿಂಕ್ಯ ರಹಾನೆಯನ್ನು ಆ ಸ್ಥಾನದಲ್ಲಿ ಮುಂದುವರಿಸುವ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಉಪನಾಯಕನ ನೇಮಕ ವಿಚಾರದಲ್ಲಿ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಭಿನ್ನಾಭಿಪ್ರಾಯಗಳಿದ್ದು, ಬಿಸಿಸಿಐನ ಹಿರಿಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸುವ ಸಾಧ್ಯತೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Follow Us:
Download App:
  • android
  • ios