Asianet Suvarna News Asianet Suvarna News

Ind vs NZ Test: ಟೀಂ ಇಂಡಿಯಾ ಎದುರಿನ ಟೆಸ್ಟ್‌ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ

* ಭಾರತ ಎದುರಿನ ಟೆಸ್ಟ್ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ

* ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರಾಂಡ್‌ಹೋಮ್‌ಗೆ ವಿಶ್ರಾಂತಿ

* ನವೆಂಬರ್ 25ರಿಂದ 2 ಪಂದ್ಯಗಳ ಟೆಸ್ಟ್ ಸರಣಿ ಆರಂಭ

New Zealand names 15 man Test Squad for India tour Trent Boult and Colin de Grandhomme rested kvn
Author
Bengaluru, First Published Nov 5, 2021, 1:54 PM IST

ಆಕ್ಲೆಂಡ್(ನ.05): ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಮುಕ್ತಾಯಗೊಂಡ ಬಳಿಕ ಭಾರತ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡವು (New Zealand Cricket Team) 2021-2023ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (ICC Test Championship) ಅಭಿಯಾನವನ್ನು ಆರಂಭಿಸಲಿದೆ. 

ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಗಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ನವೆಂಬರ್ 25ರಿಂದ ಭಾರತ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಆ ಸರಣಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ಆಟಗಾರರಾದ ಟ್ರೆಂಟ್ ಬೌಲ್ಟ್ (Trent Boult) ಹಾಗೂ ಕಾಲಿನ್ ಡಿ ಗ್ರಾಂಡ್‌ಹೋಮ್‌ (Colin de Grandhomme) ಅವರಿಗೆ ವಿಶ್ರಾಂತಿ ನೀಡಲಾಗಿದೆ. ಟ್ರೆಂಟ್ ಬೌಲ್ಟ್ ಈ ವರ್ಷದಲ್ಲೇ 60ಕ್ಕೂ ಹೆಚ್ಚು ದಿನಗಳ ಕಾಲ ಕಠಿಣ ಕ್ವಾರಂಟೈನ್‌ನಲ್ಲಿ ಕಳೆದಿದ್ದಾರೆ. ಇನ್ನು ಕಾಲಿನ್ ಡಿ ಗ್ರಾಂಡ್‌ಹೋಮ್ ಕೂಡಾ ಬಿಡುವಿರದಷ್ಟು ಕ್ರಿಕೆಟ್ ಆಡಿ ದಣಿದಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಕೋಚ್‌ ಗ್ಯಾರಿ ಸ್ಟೆಡ್ ತಿಳಿಸಿದ್ದಾರೆ.

T20 World Cup: ನಮ್ಮ ತಂಡದ ಭವಿಷ್ಯ ಆಫ್ಘನ್‌ ಕೈಯಲ್ಲಿದೆ: ರವಿಚಂದ್ರನ್ ಅಶ್ವಿನ್‌!

ಭಾರತದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಾಗಿರುವುದರಿಂದ ಕಿವೀಸ್‌ ಆಯ್ಕೆ ಸಮಿತಿ ಸಾಕಷ್ಟು ಅಳೆದು-ತೂಗಿ ಅಜೀಜ್ ಪಟೇಲ್, ಮಿಚೆಲ್ ಸ್ಯಾಂಟ್ನರ್ ಸೇರಿದಂತೆ ಐವರು ಸ್ಪಿನ್ನರ್‌ಗಳಿಗೆ ತಂಡದಲ್ಲಿ ಮಣೆಹಾಕಲಾಗಿದೆ. ಇನ್ನು ಕೈಲ್ ಜೇಮಿಸನ್, ಟಿಮ್ ಸೌಥಿ (Tim Southee) ಹಾಗೂ ನೀಲ್ ವ್ಯಾಗ್ನರ್ ವೇಗದ ದಾಳಿಯನ್ನು ಸಂಘಟಿಸಲಿದ್ದಾರೆ.

 
 
 
 
 
 
 
 
 
 
 
 
 
 
 

A post shared by BLACKCAPS (@blackcapsnz)

ನಿರೀಕ್ಷೆಯಂತೆಯೇ ಕೇನ್ ವಿಲಿಯಮ್ಸನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನುಳಿದಂತೆ ರಾಸ್ ಟೇಲರ್, ಟಾಮ್ ಲೇಥಮ್, ಟಿಮ್ ಸೌಥಿ ಅವರಂತಹ ಅನುಭವಿ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಾನ್ಪುರದ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದರೆ, ಮುಂಬೈನ ವಾಂಖೆಡೆ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯವು ಜರುಗಲಿದೆ. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡವು ಭಾರತ ಎದುರು 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಟಿ20 ಸರಣಿಯು ನವೆಂಬರ್ 17ರಿಂದ ಆರಂಭವಾಗಲಿದೆ.

Ind vs NZ ಕ್ರಿಕೆಟ್ ಸರಣಿ: ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟ BCCI..!

ನ್ಯೂಜಿಲೆಂಡ್ ತಂಡವು ಹೀಗಿದೆ ನೋಡಿ:

ಕೇನ್ ವಿಲಿಯಮ್ಸನ್‌ (ನಾಯಕ), ಟಾಮ್ ಬ್ಲಂಡೆಲ್, ಡೆವೊನ್ ಕಾನ್ವೆ, ಕೈಲ್ ಜೇಮಿಸನ್, ಟಾಮ್ ಲೇಥಮ್, ಹೆನ್ರಿ ನಿಕೋಲ್ಸ್, ಅಜೀಜ್ ಪಟೇಲ್‌, ಗ್ಲೆನ್ ಫಿಲಿಫ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ವಿಲ್‌ ಸೋಮರ್‌ವಿಲೆ, ಟಿಮ್ ಸೌಥಿ, ರಾಸ್ ಟೇಲರ್, ವಿಲ್‌ ಯಂಗ್, ನೀಲ್‌ ವ್ಯಾಗ್ನರ್.

ಬಿಗ್‌ಬ್ಯಾಶ್‌ನಲ್ಲಿ ಚಂದ್‌ ಕಣಕ್ಕೆ: ಮೊದಲ ಭಾರತೀಯ

ಮೆಲ್ಬರ್ನ್‌: ಅಂಡರ್‌-19 ವಿಶ್ವಕಪ್‌ ವಿಜೇತ ನಾಯಕ ಉನ್ಮುಕ್ತ್ ಚಂದ್‌ ಆಸ್ಪ್ರೇಲಿಯಾದ ಬಿಗ್‌ಬ್ಯಾಶ್‌ ಲೀಗ್‌ ಟಿ20 ಟೂರ್ನಿಯಲ್ಲಿ ಆಡಲಿರುವ ಭಾರತದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ. 

ಮೆಲ್ಬರ್ನ್‌ ರೆನಿಗೇಡ್ಸ್‌ ತಂಡದೊಂದಿಗೆ ಚಂದ್‌ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದ ಚಂದ್‌, ಅಮೆರಿಕ ತಂಡವನ್ನು ಪ್ರತಿನಿಧಿಸಿದ್ದರು. ಭಾರತ ‘ಎ’ ತಂಡಕ್ಕೂ ನಾಯಕರಾಗಿದ್ದ ಚಂದ್‌, ಹಿರಿಯರ ತಂಡದಲ್ಲಿ ಆಡುವ ಅವಕಾಶ ಪಡೆಯಲಿಲ್ಲ. ಐಪಿಎಲ್‌ನಲ್ಲಿ ಡೆಲ್ಲಿ, ಮುಂಬೈ ಹಾಗೂ ರಾಜಸ್ಥಾನ ತಂಡಗಳಲ್ಲಿ ಸ್ಥಾನ ಪಡೆದಿದ್ದರು. ಡಿಸೆಂಬರ್ 5ರಿಂದ ಬಿಗ್‌ಬ್ಯಾಶ್‌ ಆರಂಭಗೊಳ್ಳಲಿದೆ.

Follow Us:
Download App:
  • android
  • ios