Asianet Suvarna News Asianet Suvarna News

IND vs NZ ಅಂತಿಮ ಹಂತದಲ್ಲಿ ಸುಂದರ್ ಹೋರಾಟ, ಟಿ20ಯಲ್ಲಿ ಭಾರತಕ್ಕೆ ಸೋಲಿನ ಆಘಾತ!

ಸತತ ಗೆಲುವಿನ ಮೂಲಕ ದಾಖಲೆ ಬರೆದಿದ್ದ ಟೀಂ ಇಂಡಿಯಾಗೆ ನ್ಯೂಜಿಲೆಂಡ್ ಶಾಕ್ ನೀಡಿದೆ. ಟಿ20 ಸರಣಿಯಲ್ಲಿ ಭಾರತ ಆರಂಭಿಕ ಆಘಾತ ಎದುರಿಸಿದೆ. ಮೊದಲ ಟಿ20 ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ.

IND vs NZ New zealand thrash team India by 21 runs agan led t20 series by 1-0 ckm
Author
First Published Jan 27, 2023, 10:33 PM IST

ರಾಂಚಿ(ಜ.27):  177 ರನ್ ಟಾರ್ಗೆಟ್ ಭಾರತಕ್ಕೆ ಸಾಧಿಸಲಾಗದೇ ಸವಾಲು ಆಗಿರಲಿಲ್ಲ. ಆದರೆ ನ್ಯೂಜಿಲೆಂಡ್ ದಾಳಿಗೆ ಟೀಂ ಇಂಡಿಯಾ ಬಳಿ ಉತ್ತರವೇ ಇರಲಿಲ್ಲ. ಇದರ ನಡುವೆ ಸೂರ್ಯಕುಮಾರ್ ಯಾದವ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಜೊತೆಯಾಟ ಸಾಕಗಾಲಿಲ್ಲ.  ವಾಶಿಂಗ್ಟನ್ ಸುಂದರ್ ಹೋರಾಡಿದರೂ ಗೆಲುವು ಸಿಗಲಿಲ್ಲ. ನ್ಯೂಜಿಲೆಂಡ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 155 ರನ್ ಸಿಡಿಸಿತು. ಇದರೊಂದಿಗೆ ನ್ಯೂಜಿಲೆಂಡ್ 21 ರನ್ ಗೆಲುವು ದಾಖಲಿಸಿ ಚುಟುಕು ಸರಣಿಯಲ್ಲಿ ಶುಭಾರಂಭ ಮಾಡಿದೆ. 

ಭಾರತ ದಿಟ್ಟ ಬೌಲಿಂಗ್ ಪ್ರದರ್ಶನ ನೀಡಿದರೂ ನ್ಯೂಜಿಲೆಂಡ್ 176 ರನ್ ಸಿಡಿಸಿತು. 177 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾಗೆ ಆರಂಭದಲ್ಲೇ ಹಲವು ಸವಾಲು ಎದುರಾಗಿತ್ತು. ನ್ಯೂಜಿಲೆಂಡ್ ದಾಳಿ ಮುಂದೆ ವಿಕೆಟ್ ಉಳಿಸಿಕೊಂಡು ಹೋರಾಡಬೇಕಾದ ಜವಾಬ್ದಾರಿಯೂ ಇತ್ತು. ಆದರೆ ಟೀಂ ಇಂಡಿಯಾ ಲೆಕ್ಕಾಚಾರ ಉಲ್ಟಾ ಹೊಡೆದಿತ್ತು. ಕಾರಣ ಅತ್ತ ರನ್ ಬರಲಿಲ್ಲ, ಇತ್ತ ವಿಕೆಟ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 10 ರನ್‌ಗಳಿಸುವಷ್ಟರಲ್ಲೇ ಭಾರತ ಮೊದಲ ವಿಕೆಟ್ ಪತನಗೊಂಡಿತು.

ಮತ್ತೆ ಬರ್ತಿದೆಯಾ ಶೋಲೆ: ಜೈ ಹಾಗೂ ವೀರೂ ಆಗಿ ಬದಲಾದ ಧೋನಿ & ಪಾಂಡ್ಯ

ಇಶಾನ್ ಕಿಶನ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ರಾಹುಲ್ ತ್ರಿಪಾಠಿ ವಿಕೆಟ್ ಪತನಗೊಂಡಿತು. ತ್ರಿಪಾಠಿ ಶೂನ್ಯ ಸುತ್ತಿದರು. ಇನ್ನೇನು ಟೀಂ ಇಂಡಿಯಾ ಚೇತರಿಸಿಕೊಳ್ಳಬೇಕು ಅನ್ನುಷ್ಟರಲ್ಲೇ ಶುಬಮನ್ ಗಿಲ್ ಕೂಡ ವಿಕೆಟ್ ಕೈಚೆಲ್ಲಿದರು. ಗಿಲ್ 7 ರನ್ ಸಿಡಿಸಿ ಔಟಾದರು.

15 ರನ್‌ಳಿಗೆ ಟೀಂ ಇಂಡಿಯಾ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕ ಸಿಲುಕಿತು. ಸೂರ್ಯಕುಮಾರ್ ಯಾದವ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಮೇಲೆ ಒತ್ತಡ ಹೆಚ್ಚಾಯಿತು. ಆದರೆ ಈ ಜೋಡಿ ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಮೂಲಕ ಆತಂಕ ದೂರ ಮಾಡಲು ಯತ್ನಿಸಿದರು. ಸೂರ್ಯಕುಮಾರ್ ಯಾದವ್ ಹಾಗೂ ಪಾಂಡ್ಯ ಜೊತೆಯಾಟದಿಂದ ಭಾರತ ಚೇತರಿಸಿಕೊಂಡಿತು.

ಸೂರ್ಯಕುಮಾರ್ ಯಾದವ್ 47 ರನ್ ಸಿಡಿಸಿ ನಿರ್ಗಮಿಸಿದರು.ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ 21 ರನ್ ಸಿಡಿಸಿ ಔಟಾದರು. ಇಬ್ಬರ ವಿಕೆಟ್ ಪತನ ಟೀಂ ಇಂಡಿಯಾ ಸಂಕಷ್ಟ ಹೆಚ್ಚಿಸಿತು. ಮತ್ತೆ ದಿಢೀರ್ ವಿಕೆಟ್ ಪತನ ಟೀಂ ಇಂಡಿಯಾವನ್ನು ಸೋಲಿನ ಸುಳಿಗೆ ತಳ್ಳಿತು. ವಾಶಿಂಗ್ಟನ್ ಸುಂದರ್ ಹೋರಾಟದ ಸೂಚನೆ ನೀಡಿದರೆ, ದೀಪಕ್ ಹೂಡ ಅಬ್ಬರಿಸಲಿಲ್ಲ. ಶಿವಂ ಮಾವಿ 2 ರನ್ ಸಿಡಿಸಿ ಔಟಾದರು.

ವಾಶಿಂಗ್ಟನ್ ಸುಂದರ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇದರ ಪರಿಣಾಮ ಅಂತಿಮ ಗೆಲುವಿಗೆ 6 ಎಸೆತದಲ್ಲಿ 33 ರನ್ ಅವಶ್ಯತೆ ಇತ್ತು. ಇತ್ತ ಸುಂದರ್ 25 ಎಸೆತದಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಅಂತಿಮ ಓವರ್‌ನಲ್ಲಿ ನಿರೀಕ್ಷಿತ ರನ್ ಹರಿದುಬರಲಿಲ್ಲ. 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಸುಂದರ್, 3,4,5 ಎಸತದಲ್ಲಿ ರನ್ ಕಲೆ ಹಾಕಲಿಲ್ಲ. ಇದರ ನಡುವೆ ನ್ಯೂಜಿಲೆಂಡ್ ಕ್ಯಾಚ್ ಕೈಚೆಲ್ಲಿತು. ಭಾರತ 9 ವಿಕೆಟ್ ನಷ್ಟಕ್ಕೆ 155 ರನ್ ಸಿಡಿಸಿತು. ಈ ಮೂಲಕ ನ್ಯೂಜಿಲೆಂಡ್ 21 ರನ್ ಗೆಲುವು ದಾಖಲಿಸಿ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. 

ನಿಧಾನಗತಿ ಬ್ಯಾಟಿಂಗ್‌: ಧೋನಿ ಮೇಲೆ ಸಿಟ್ಟಾಗಿದ್ದ ರವಿಶಾಸ್ತ್ರಿ..!

ನ್ಯೂಜಿಲೆಂಡ್ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿತು. ಫಿನ್ ಅಲೆನ್ 35 ರನ್ ಕಾಣಿಕೆ ನೀಡಿದರು. ಇತ್ತ ಡೇವೋನ್ ಕಾನ್ವೇ 35 ಎಸೆತದಲ್ಲಿ 52 ರನ್ ಸಿಡಿಸಿದರು. ಗ್ಲೆನ್ ಫಿಲಿಪ್ಸ್ ಹಾಗೂ ಚಾಪ್‌ಮಾನ್ ನಿರೀಕ್ಷಿತ ಹೋರಾಟ ನೀಡಲಿಲ್ಲ. ಡರಿಲ್ ಮಿಚೆಲ್ ಹೋರಾಟ ನ್ಯೂಜಿಲೆಂಡ್ ತಂಡಕ್ಕೆ ನೆರವಾಯಿತು. ಡರಿಲ್ ಮಿಚೆಲ್ 30 ಎಸೆತದಲ್ಲಿ ಅಜೇ 59 ರನ್ ಸಿಡಿಸಿದರು. ಇನ್ನು ನಾಯಕ ಮಿಚೆಲ್ ಸ್ಯಾಂಟ್ನರ್, ಮಿಚೆಲ್ ಬ್ರೇಸ್‌ವೆಲ್ ಅಬ್ಬರಿಸಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್ 176 ರನ್  ಸಿಡಿಸಿತು.
 

Follow Us:
Download App:
  • android
  • ios