ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಹಾರ್ದಿಕ್ ಪಾಂಡ್ಯ ಪಡೆತವರಿನಲ್ಲಿ ಸತತ 12 ಟಿ20 ಸರಣಿ ಗೆದ್ದು ಮುನ್ನುಗ್ಗುತ್ತಿರುವ ಟೀಂ ಇಂಡಿಯಾ

ಲಖನೌ(ಜ.29): ನ್ಯೂಜಿಲೆಂಡ್‌ ವಿರುದ್ಧ ಭಾನುವಾರ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ ಭಾರತ ಸುಧಾರಿತ ಪ್ರದರ್ಶನ ತೋರಬೇಕಿದ್ದು, ತವರಿನಲ್ಲಿ ಸತತ 12 ಟಿ20 ಸರಣಿಗಳಲ್ಲಿ ಅಜೇಯವಾಗಿರುವ ತಂಡ ತನ್ನ ದಾಖಲೆ ಮುಂದುವರಿಸಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.

ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಿವೀಸ್‌ನ ಸ್ಪಿನ್‌ ಬಲೆಗೆ ಬಿದ್ದ ಭಾರತ 21 ರನ್‌ ಸೋಲು ಅನುಭವಿಸಿತ್ತು. ಈ ಪಂದ್ಯ ಭಾರತದ ವೇಗದ ಬೌಲಿಂಗ್‌ ಪಡೆಯ ದೌರ್ಬಲ್ಯವನ್ನು ಎತ್ತಿಹಿಡಿದಿತ್ತು. ಎಕ್ಸ್‌ಪ್ರೆಸ್‌ ವೇಗಿ ಉಮ್ರಾನ್‌ ಮಲಿಕ್‌ ಒಂದು ಓವರಲ್ಲಿ 16 ರನ್‌ ಬಿಟ್ಟುಕೊಟ್ಟರೆ, ಇನ್ನಿಂಗ್‌್ಸನ ಕೊನೆ ಓವರಲ್ಲಿ ಅಶ್‌ರ್‍ದೀಪ್‌ 27 ರನ್‌ ಚಚ್ಚಿಸಿಕೊಂಡಿದ್ದು ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿತು.

ಭಾರತದ ಅಗ್ರ ಕ್ರಮಾಂಕವೂ ದಯನೀಯ ವೈಫಲ್ಯ ಕಂಡಿದ್ದರಿಂದ ಗೆಲುವು ಕೈಗೆಟುಕಲಿಲ್ಲ. ಏಕದಿನದಲ್ಲಿ ರೆಡ್‌ ಹಾಟ್‌ ಫಾರ್ಮ್‌ನಲ್ಲಿರುವ ಶುಭ್‌ಮನ್‌ ಗಿಲ್‌ ಟಿ20ಯಲ್ಲಿ ಇನ್ನಷ್ಟೇ ಲಯ ಕಂಡುಕೊಳ್ಳಬೇಕಿದೆ. ಇಶಾನ್‌ ಕಿಶನ್‌ ಹಾಗೂ ದೀಪಕ್‌ ಹೂಡಾ ಬ್ಯಾಟಿಂಗ್‌ ಬಗ್ಗೆ ಟೀಕೆ ಶುರುವಾಗಿದೆ. ರಾಹುಲ್‌ ತ್ರಿಪಾಠಿ ಸಹ ಸಿಕ್ಕಿರುವ ಅವಕಾಶ ಬಳಸಿಕೊಳ್ಳುತ್ತಿಲ್ಲ. ಹೀಗಾಗಿ ಪೃಥ್ವಿ ಶಾಗೆ ಅವಕಾಶ ಸಿಗಬಹುದಾ ಎನ್ನುವ ಕುತೂಹಲವಿದೆ. ಭಾರತ ಸೂರ್ಯಕುಮಾರ್‌ ಯಾದವ್, ಹಾರ್ದಿಕ್‌ ಪಾಂಡ್ಯರ ಬ್ಯಾಟಿಂಗ್‌ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ವಾಷಿಂಗ್ಟನ್‌ರ ಆಲ್ರೌಂಡ್‌ ಪ್ರದರ್ಶನ ತಂಡದ ಆತ್ಮವಿಶ್ವಾಸ ಹೆಚ್ಚಿಸಿರುವುದು ಸುಳ್ಳಲ್ಲ. ಮತ್ತೊಂದೆಡೆ ಉತ್ತಮ ಲಯದಲ್ಲಿರುವ ಕಿವೀಸ್‌ ಭಾರತದಲ್ಲಿ ಅವಿಸ್ಮರಣೀಯ ಸರಣಿ ಗೆಲುವಿಗೆ ಕಾತರಿಸುತ್ತಿದೆ.

ತಾವು ಸಂಪೂರ್ಣ ಫಿಟ್ ಎಂದು ಘೋಷಿಸಿಕೊಂಡ ಸಂಜು ಸ್ಯಾಮ್ಸನ್‌..! ಎಲ್ಲರ ಚಿತ್ತ ಕೇರಳ ಕ್ರಿಕೆಟಿಗನತ್ತ

ನ್ಯೂಜಿಲೆಂಡ್ ತಂಡದ ಪರ ಮೊದಲ ಪಂದ್ಯದಲ್ಲಿ ಡೇರಲ್ ಮಿಚೆಲ್, ಡೆವೊನ್ ಕಾನ್‌ವೇ ಸೇರಿದಂತೆ ಹಲವು ಕ್ರಿಕೆಟಿಗರು ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ಬೌಲಿಂಗ್‌ನಲ್ಲೂ ಕಿವೀಸ್‌ ತಂಡವು ಒಳ್ಳೆಯ ಲಯಕ್ಕೆ ಮರಳಿದ್ದು, ಮಿಚೆಲ್ ಬ್ರಾಸ್‌ವೆಲ್, ನಾಯಕ ಮಿಚೆಲ್ ಸ್ಯಾಂಟ್ನರ್ ಹಾಗೂ ಲಾಕಿ ಫರ್ಗ್ಯೂಸನ್ ಮಾರಕ ದಾಳಿ ನಡೆಸುವ ಮೂಲಕ ಟೀಂ ಇಂಡಿಯಾ ಬ್ಯಾಟರ್‌ಗಳನ್ನು ಕಾಡುತ್ತಿದ್ದಾರೆ. ತವರಿನಲ್ಲಿ ಸತತ 12 ಟಿ20 ಸರಣಿ ಗೆದ್ದು ಮುನ್ನುಗ್ಗುತ್ತಿರುವ ಟೀಂ ಇಂಡಿಯಾ ಗೆಲುವಿನ ನಾಗಾಲೋಟಕ್ಕೆ ಕಿವೀಸ್‌ ಪಡೆ ಬ್ರೇಕ್ ಹಾಕಲು ಎದುರು ನೋಡುತ್ತಿದೆ.

ಸಂಭವನೀಯ ತಂಡ

ಭಾರತ: ಶುಭ್‌ಮನ್‌ ಗಿಲ್‌, ಇಶಾನ್ ಕಿಶನ್‌, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್‌ ಯಾದವ್, ಹಾರ್ದಿಕ್‌ ಪಾಂಡ್ಯ(ನಾಯಕ), ವಾಷಿಂಗ್ಟನ್‌ ಸುಂದರ್, ದೀಪಕ್ ಹೂಡಾ, ಕುಲ್ದೀಪ್‌ ಯಾದವ್, ಶಿವಂ ಮಾವಿ, ಉಮ್ರಾನ್‌ ಮಲಿಕ್, ಅಶ್‌ರ್‍ದೀಪ್‌ ಸಿಂಗ್.

ನ್ಯೂಜಿಲೆಂಡ್‌: ಫಿನ್ ಆ್ಯಲೆನ್‌, ಡೆವೊನ್ ಕಾನ್‌ವೇ, ಡೇರಲ್ ಮಿಚೆಲ್‌, ಮಾರ್ಕ್‌ ಚ್ಯಾಪ್ಮನ್‌, ಗ್ಲೆನ್ ಫಿಲಿಫ್ಸ್‌, ಬ್ರೇಸ್‌ವೆಲ್‌, ಮಿಚೆಲ್ ಸ್ಯಾಂಟ್ನರ್‌(ನಾಯಕ), ಇಶ್‌ ಸೋಧಿ, ಲಾಕಿ ಫಗ್ರ್ಯೂಸನ್‌, ಜೇಕಬ್‌ ಡಫಿ, ಬ್ಲೇರ್‌ ಟಿಕ್ನೆರ್‌.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್