ಭಾರತದ ದಾಳಿಗೆ ನ್ಯೂಜಿಲೆಂಡ್ ಧೂಳೀಪಟ, ಭರ್ಜರಿ ಗೆಲುವಿನೊಂದಿಗೆ ಹಾರ್ದಿಕ್ ಸೈನ್ಯಕ್ಕೆ ಟಿ20 ಕಿರೀಟ!
ಶುಭಮನ್ ಗಿಲ್ ಶತಕದ ಅಬ್ಬರದ ಬಳಿಕ ಭಾರತದ ಬೌಲಿಂಗ್ ದಾಳಿಗೆ ನ್ಯೂಜಿಲೆಂಡ್ ಕಂಗಾಲಾಗಿದೆ. ಕೇವಲ 66 ರನ್‌ಗಳಿಗೆ ನ್ಯೂಜಿಲೆಂಡ್ ಆಲೌಟ್ ಆಗಿದೆ. ಅಂತಿಮ ಟಿ20 ಪಂದ್ಯದಲ್ಲಿ ಭಾರತ 168 ರನ್ ಗೆಲುವು ದಾಖಲಿಸಿ ಟಿ20 ಸರಣಿ ಕೈವಶ ಮಾಡಿದೆ.

ಅಹಮ್ಮದಬಾದ್(ಫೆ.01): ಸ್ಫೋಟಕ ಬ್ಯಾಟಿಂಗ್, ಶುಬಮನ್ ಗಿಲ್ ಸೆಂಚುರಿ ಬಳಿಕ ಭಾರತದ ಬೌಲಿಂಗ್ ದಾಳಿಗೆ ನ್ಯೂಜಿಲೆಂಡ್ ಹೈರಾಣಾಗಿದೆ. 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ಕೇವಲ 66 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಭಾರತ 168 ರನ್ ಭರ್ಜರಿ ಗೆಲುವು ದಾಖಲಿಸಿದೆ. ಭಾರತ 3 ಪಂದ್ಯದ ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿದೆ.
ನ್ಯೂಜಿಲೆಂಡ್ ತಂಡ ಶುಭಮನ್ ಗಿಲ್ ಬ್ಯಾಟಿಂಗ್ ಅಬ್ಬರಕ್ಕೆ ಬೆಚ್ಚಿ ಬಿದ್ದಿತ್ತು. ಗಿಲ್ ಅಜೇಯ 126 ರನ್ ಸಿಡಿಸಿದರೆ ಭಾರತ 235 ರನ್ ಟಾರ್ಗೆಟ್ ನೀಡಿತ್ತು. ಬೃಹತ್ ಮೊತ್ತ ಪಡೆದ ನ್ಯೂಜಿಲೆಂಡ್ ಆತಂಕದಿಂದಲೇ ಬ್ಯಾಟಿಂಗ್ ಆರಂಭಿಸಿತು. ಇದರ ಪರಿಣಾಮ ಆರಂಭದಿಂದಲೇ ವಿಕೆಟ್ ಪತನ ಆರಂಭಗೊಂಡಿತು. ಫಿನ್ ಅಲೆನ್ ಕೇವಲ 3 ರನ್ ಸಿಡಿಸಿ ಔಟಾದರು ನ್ಯೂಜಿಲೆಂಡ್ 4 ರನ್ ಗಳಿಸಿ ಮೊದಲ ವಿಕೆಟ್ ಪತನಗೊಂಡಿತು.
Ind vs NZ: ಲಖನೌ ಕಳಪೆ ಪಿಚ್ ತಯಾರಿಸಿದ ಪಿಚ್ ಕ್ಯೂರೇಟರ್ ತಲೆದಂಡ..!
ಡೇವೋನ್ ಕಾನ್ವೇ ಹಾಗಾ ಮಾರ್ತ್ ಚಾಪ್‌ಮ್ಯಾನ್ ಹೋರಾಟ ಹೆಚ್ಚು ಹೊತ್ತು ಇರಲಿಲ್ಲ. ಕಾನ್ವೇ 1 ರನ್ ಸಿಡಿಸಿ ನಿರ್ಗಮಿಸಿದರೆ, ಮಾರ್ಕ್ ಚಾಪ್‌ಮಾನ್ ಡಕೌಟ್ ಆದರು. ಕೇವಲ 5 ರನ್ ಸಿಡಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಗ್ಲೆನ್ ಪಿಲಿಪ್ಸ್ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು.
ಡರಿಲ್ ಮಿಚೆಲ್ ಹೋರಾಟದ ಸೂಚನೆ ನೀಡಿದರು. ಆದರೆ ಮಿಚೆಲ್ ಬ್ರೇಸ್‌ವೆಲ್ 8 ರನ್ ಸಿಡಿಸಿ ನಿರ್ಗಮಿಸಿದರು. ಡರಿಲ್ ಮಿಚೆಲ್ ಹೊರತು ಪಡಿಸಿದರೆ ಇತರರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿ ಬರಲಿಲ್ಲ. ನಾಯಕ ಮಿಚೆಲ್ ಸ್ಯಾಂಟ್ನರ್ 13 ರನ್ ಸಿಡಿಸಿ ಬೌಂಡರಿ ಲೈನ್‌ನಲ್ಲಿ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಐಶ್ ಸೋಧಿ ಡಕೌಟ್ ಆದರು. 53 ರನ್‌ಗಳಿಗೆ ನ್ಯೂಜಿಲೆಂಡ್ ಪ್ರಮುಖ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಲ್ಯೂಕಿ ಫರ್ಗ್ಯೂಸನ್ ರನ್ ಗಳಿಸದೇ ನಿರ್ಗಮಿಸಿದರು. ಇತ್ತ ಏಕಾಂಗಿ ಹೋರಾಟ ನೀಡಿದ ಡರಿಲ್ ಮಿಚೆಲ್ 25 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು. ಈ ಮೂಲಕ ನ್ಯೂಜಿಲೆಂಡ್ 12.1 ಓವರ್‌ಗಳಲ್ಲಿ ಕೇವಲ 66 ರನ್‌ಗೆ ಆಲೌಟ್ ಆಯಿತು. ಭಾರತ 168 ರನ್ ಭರ್ಜರಿ ಗೆಲುವು ದಾಖಲಿಸಿತು. ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿತು.ಹಾರ್ದಿಕ್ ಪಾಂಡ್ಯ 4 ವಿಕೆಟ್ ಕಬಳಿಸಿದರೆ, ಅರ್ಶದೀಪ್ ಸಿಂಗ್ 2, ಉಮ್ರಾನ್ ಮಲಿಕ್ 2, ಶಿವಂ ಮಾವಿ 2 ವಿಕೆಟ್ ಕಬಳಿಸಿ ಮಿಂಚಿದರು.
ಇದೇ ವಾರದಲ್ಲಿ ರಿಷಭ್ ಪಂತ್ ಆಸ್ಪತ್ರೆಯಿಂದ ಬಿಡುಗಡೆ?
ಭಾರತ ಇನ್ನಿಂಗ್ಸ್
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲಿ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತ್ತು. ಆದರೆ ಶುಭಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಬೃಹತ್ ಮೊತ್ತ ಸಿಡಿಸಿತು. ಗಿಲ್ ಹಾಗೂ ರಾಹುಲ್ ತ್ರಿಪಾಠಿ ಜೊತೆಯಾಟ ಮೂಲಕ ಭಾರತ ತಿರುಗೇಟು ನೀಡಿತು. ತ್ರಿಪಾಠಿ 44 ರನ್ ಕಾಣಿಕೆ ನೀಡಿದರು. ಇತ್ತ ಸೂರ್ಯಕುಮಾರ್ 24 ರನ್ ಕಾಣಿಕೆ ನೀಡಿದರು. ಇತ್ತ ಗಿಲ್ ಸ್ಪೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ಸಿಡಿಸಿದರು. ಇತ್ತ ಹಾರ್ದಿಕ್ ಪಾಂಡ್ಯ 30 ರನ್ ಕಾಣಿಕೆ ನೀಡಿದರು.
ಶುಬಮನ್ ಗಿಲ್ 63 ಎಸೆತದಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್ ಮೂಲಕ ಅಜೇಯ 126 ರನ್ ಸಿಡಿಸಿದರು. ಈ ಮೂಲಕ ಭಾರತ 4 ವಿಕೆಟ್ ನಷ್ಟಕ್ಕೆ 234 ರನ್ ಸಿಡಿಸಿತು. ಬೃಹತ್ ಮೊತ್ತ ನ್ಯೂಜಿಲೆಂಡ್ ತಲೆನೋವು ಹೆಚ್ಚಿಸಿತು. ಇದರ ಪರಿಣಾಮ ದಿಟ್ಟ ಹೋರಾಟ ನೀಡಲು ನ್ಯೂಜಿಲೆಂಡ್ ವಿಫಲವಾಯಿತು.