Asianet Suvarna News Asianet Suvarna News

ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ಗೂ ವಿರಾಟ್ ಕೊಹ್ಲಿ ಗೈರು?

ಟೀಂ ಇಂಡಿಯಾ ಮಾಜಿ ನಾಯಕ ಜನವರಿ 22ರಂದು ಅಯೋಧ್ಯ ರಾಮಮಂದಿರ ಉದ್ಘಾಟನೆಯ ಪ್ರಾಣಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಕೊನೆಯ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಎಲ್ಲೂ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. 

Ind vs Eng Virat Kohli Likely to miss third Test in Rajkot kvn
Author
First Published Feb 2, 2024, 8:49 AM IST

ನವದೆಹಲಿ(ಫೆ.02): ಇಂಗ್ಲೆಂಡ್‌ ವಿರುದ್ಧದ ಸರಣಿಯ ಆರಂಭಿಕ 2 ಪಂದ್ಯಗಳಿಂದ ಹೊರಗುಳಿದಿರುವ ಭಾರತದ ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿ ಸರಣಿಯ 3ನೇ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. 

ಸರಣಿಗೂ ಮುನ್ನ ತಂಡದ ಜೊತೆಗಿದ್ದ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಮೊದಲೆರಡು ಪಂದ್ಯಕ್ಕೆ ಗೈರಾಗಿದ್ದಾರೆ. ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಸದ್ಯ ಭಾರತದಲ್ಲಿ ಇಲ್ಲ. ಅವರು ಯಾವಾಗ ಮರಳುತ್ತಾರೆ ಮತ್ತು ತಂಡ ಕೂಡಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಹೇಳಲಾಗುತ್ತಿದೆ.

ಟೀಂ ಇಂಡಿಯಾ ಮಾಜಿ ನಾಯಕ ಜನವರಿ 22ರಂದು ಅಯೋಧ್ಯ ರಾಮಮಂದಿರ ಉದ್ಘಾಟನೆಯ ಪ್ರಾಣಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಕೊನೆಯ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಎಲ್ಲೂ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. 

Vizag Test: ಟೀಂ ಇಂಡಿಯಾಗೆ ಸರಣಿ ಸಮಬಲದ ಗುರಿ..!

ಇನ್ನು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಹೈದರಾಬಾದ್‌ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು 28 ರನ್ ಅಂತರದ ರೋಚಕ ಸೋಲು ಅನುಭವಿಸಿತ್ತು. ಇಂಗ್ಲೆಂಡ್ ಬೌಲರ್‌ಗಳೆದರು ಎರಡನೇ ಇನಿಂಗ್ಸ್‌ನಲ್ಲಿ ಭಾರತದ ಬ್ಯಾಟರ್‌ಗಳು ದಯನೀಯ ವೈಫಲ್ಯ ಅನುಭವಿಸಿದ್ದು. ಇನ್ನು ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಕೆ ಎಲ್ ರಾಹುಲ್ ಕೂಡಾ ಫಿಟ್ನೆಸ್ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಮೊದಲೇ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿರುವ ಟೀಂ ಇಂಡಿಯಾ, ಇದೀಗ ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಯಾವ ರೀತಿಯ ತಿರುಗೇಟು ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ.

ಟೆಸ್ಟ್‌ ಪಾದಾರ್ಪಣೆ ವೇಳೆ ಹುಟ್ಟೇ ಇರದ ಇಬ್ಬರ ಜತೆ ಆಡಲಿರುವ ಆ್ಯಂಡರ್‌ಸನ್‌!

ವಿಶಾಖಪಟ್ಟಣಂ: ಇಂಗ್ಲೆಂಡ್‌ನ ಹಿರಿಯ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ತಮ್ಮ ಕ್ರಿಕೆಟ್‌ ಬದುಕಿನುದ್ದಕ್ಕೂ ತಮಗಿಂತ ಹಲವು ವರ್ಷ ಕಡಿಮೆ ಪ್ರಾಯದ ಆಟಗಾರರ ಜೊತೆಗೆ ಪಂದ್ಯಗಳನ್ನು ಆಡಿದ್ದಾರೆ. ಆದರೆ ಸದ್ಯ 6ನೇ ಬಾರಿ ಭಾರತ ಪ್ರವಾಸದಲ್ಲಿರುವ 41ರ ಆ್ಯಂಡರ್‌ಸನ್‌, ತಾವು ಟೆಸ್ಟ್‌ಗೆ ಪಾದಾರ್ಪಣೆ ಮಾಡಿದಾಗ ಇನ್ನೂ ಹುಟ್ಟೇ ಇರದ ಇಬ್ಬರು ಆಟಗಾರರ ಜೊತೆ ಭಾರತ ವಿರುದ್ಧದ 2ನೇ ಟೆಸ್ಟ್‌ ಪಂದ್ಯವಾಡಲಿದ್ದಾರೆ.

9 ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗರು ಬಂದಷ್ಟೇ ಬೇಗ ಮರೆಯಾಗಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಆ್ಯಂಡರ್‌ಸನ್‌ 2003ರ ಮೇ ತಿಂಗಳಲ್ಲಿ ಚೊಚ್ಚಲ ಟೆಸ್ಟ್‌ ಪಂದ್ಯ ಆಡಿದ್ದರು. ಆದರೆ ಭಾರತ ವಿರುದ್ಧ 2ನೇ ಟೆಸ್ಟ್‌ನ ತಂಡಲ್ಲಿರುವ ಶೋಯೆಬ್‌ ಬಶೀರ್‌ ಹುಟ್ಟಿದ್ದು 2003ರ ಅಕ್ಟೋಬರ್‌ 13ಕ್ಕೆ. ಮತ್ತೋರ್ವ ಸ್ಪಿನ್ನರ್‌ ರೆಹಾನ್‌ ಅಹ್ಮದ್‌ ಜನ್ಮ ದಿನ 2004ರ ಆಗಸ್ಟ್‌ 13. ಅಂದರೆ ಆ್ಯಂಡರ್‌ಸನ್‌ನ ಟೆಸ್ಟ್‌ ಅನುಭವಕ್ಕಿಂತಲೂ ಇವರಿಬ್ಬರ ವಯಸ್ಸು ಕಡಿಮೆ.

Latest Videos
Follow Us:
Download App:
  • android
  • ios