ಪುಣೆ(ಮಾ.23): ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಇಬ್ಬರು ಕ್ರಿಕೆಟಿಗರು ಗಾಯಕ್ಕೆ ತುತ್ತಾಗಿದ್ದಾರೆ. ಶ್ರೇಯಸ್ ಅಯ್ಯರ್ ಭುಜ ಡಿಸ್‌ಲೊಕೆಟ್ ಆಗಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರೋಹಿತ್ ಶರ್ಮಾ ಮೊಣಕೈಗೆ ಗಾಯಗೊಂಡಿದೆ.

ಭಾವುಕರಾಗಿ ಕ್ರೀಸ್‌ಗಿಳಿದ ಕ್ರುನಾಲ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್; ಹಲವು ದಾಖಲೆ ಉಡೀಸ್!.

ಫೀಲ್ಡಿಂಗ್ ವೇಳೆ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದಾರೆ. ಚೆಂಡು ಹಿಡಿಯುವ ವೇಳೆ ನೆಲಕ್ಕುರುಳಿದ ಅಯ್ಯರ್ ಶೋಲ್ಡರ್ ಡಿಸ್‌ಲೊಕೆಟ್ ಆಗಿದೆ. ತಕ್ಷಣವೆ ಟೀಂ ಇಂಡಿಯಾ ಫಿಸಿಯೋ ಪರೀಕ್ಷಿಸಿದ್ದಾರೆ. ಬಳಿಕ ಸ್ಕಾನಿಂಗ್‌ಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ಎಡಭುಜ ಡಿಸ್‌ಲೊಕೆಟ್ ಆಗಿರುವ ಕಾರಣ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ.

 

ಬ್ಯಾಟಿಂಗ್ ವೇಳೆ  ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿದಿಲ್ಲ. ಇಬ್ಬರು ಆಟಗಾರರು ಗಾಯಕ್ಕೆ ತುತ್ತಾಗಿರುವುದು ಟೀಂ ಇಂಡಿಯಾ ಆತಂಕಕ್ಕೆ ಕಾರಣವಾಗಿದೆ.