ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಅದರಲ್ಲೂ ಸಹೋದರ ಹಾರ್ದಿಕ್ ಪಾಂಡ್ಯರಿಂದ ಡೆಬ್ಯೂ ಕ್ಯಾಪ್ ಪಡೆದ ಕ್ರುನಾಲ್ ಪಾಂಡ್ಯ ಭಾವುಕರಾಗಿದ್ದರು. ಆದರೆ ಕ್ರುನಾಲ್ ಅಬ್ಬರಕ್ಕೆ ಹಲವು ದಾಖಲೆ ಪುಡಿ ಪುಡಿಯಾಗಿದೆ.

ಪುಣೆ(ಮಾ.23): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾಗೆ ಇಬ್ಬರು ಕ್ರಿಕೆಟಿಗರು ಪಾದರ್ಪಾಣೆ ಮಾಡಿದ್ದಾರೆ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಾಗೂ ಆಲ್ರೌಂಡರ್ ಕ್ರುನಾಲ್ ಪಾಂಡ್ಯ. ಕ್ರುನಾಲ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮೂಲಕ ಕೆಲ ದಾಖಲೆ ಬರೆದಿದ್ದಾರೆ.

ಧವನ್, ಕೃನಾಲ್‌, ರಾಹುಲ್ ಅಬ್ಬರ; ಇಂಗ್ಲೆಂಡ್‌ಗೆ ಕಠಿಣ ಗುರಿ

ಸಹೋದರ ಹಾರ್ದಿಕ್ ಪಾಂಡ್ಯರಿಂದ ಡೆಬ್ಯೂ ಕ್ಯಾಪ್ ಸ್ವೀಕರಿಸಿದ ಕ್ರುನಾಲ್ ಭಾವುಕರಾಗಿದ್ದರು. ಹಾರ್ದಿಕ್ ಬಿಗಿದಪ್ಪಿ ಮೈದಾನದಲ್ಲಿ ಭಾವುಕರಾಗಿದ್ದರು. ಆದರೆ ಬ್ಯಾಟಿಂಗ್ ಇಳಿದ ಕ್ರುನಾಲ್, ಇಂಗ್ಲೆಂಡ್ ಬೌಲರ್‌ಗಳ ಬೆಂಡೆತ್ತಿದ್ದಾರೆ. ಕೇವಲ 26 ಎಸೆತದಲ್ಲಿ ಅರ್ಧಶತಕ ಪೂರೈಸಿ ವಿಶ್ವ ದಾಖಲೆ ಬರೆದಿದ್ದಾರೆ.

Scroll to load tweet…

ಪದಾರ್ಪಣಾ ಪಂದ್ಯದಲ್ಲಿ ಅತೀ ಕಡಿಮೆ ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದ ವಿಶ್ವದ ಕ್ರಿಕೆಟಿಗ ಅನ್ನೋ ದಾಖಲೆಗೆ ಕ್ರುನಾಲ್ ಪಾಂಡ್ಯ ಪಾತ್ರರಾಗಿದ್ದಾರೆ. 31 ಎಸೆತದ ಎದುರಿಸಿದ ಕ್ರುನಾಲ್ ಅಜೇಯ 58 ರನ್ ಸಿಡಿಸಿದರು. ಡೆಬ್ಯೂ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಭಾರತದ 15ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೂ ಕ್ರುನಾಲ್ ಪಾತ್ರರಾಗಿದ್ದಾರೆ.

7ನೇ ಹಾಗೂ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಹಾಫ್ ಸೆಂಚುರಿ ಸಿಡಿಸಿದ ಭಾರತದ 3ನೇ ಆಟಗಾರ ಅನ್ನೋ ಹೆಗ್ಗಳಿಕೆಗೆ ಕ್ರುನಾಲ್ ಪಾತ್ರರಾಗಿದ್ದಾರೆ

7ನೇ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ 50+ ಸ್ಕೋರ್ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ವಿವರ:
55 ಸಾಬಾ ಕರೀಮ್ v ಸೌತ್ ಆಫ್ರಿಕಾ, 1997
60* ರವೀಂದ್ರ ಜಡೇಜಾ v ಶ್ರೀಲಂಕಾ, 2009
58* ಕ್ರುನಾಲ್ ಪಾಂಡ್ಯ v ಇಂಗ್ಲೆಂಡ್, 2021