Asianet Suvarna News Asianet Suvarna News

Ind vs Eng Leeds Test ಭಾರತ ಎದುರು ಇಂಗ್ಲೆಂಡ್‌ ರನ್‌ ಪರ್ವತ..!

* ಇಂಗ್ಲೆಂಡ್ ಬಿಗಿ ಹಿಡಿತದಲ್ಲಿ ಟೀಂ ಇಂಡಿಯಾ

* ಲೀಡ್ಸ್‌ ಟೆಸ್ಟ್‌ನಲ್ಲಿ ಎರಡನೇ ದಿನವೇ ಪ್ರಾಬಲ್ಯ ಮೆರೆದ ಇಂಗ್ಲೆಂಡ್‌

* ಎರಡನೇ ದಿನದಂತ್ಯಕ್ಕೆ 345 ರನ್‌ಗಳ ಮುನ್ನಡೆ ಸಂಪಾದಿಸಿದ ಇಂಗ್ಲೆಂಡ್

Ind vs Eng Joe Root Century Puts England Strong position over Team India in Leeds Test on Day 2 kvn
Author
Leeds, First Published Aug 27, 2021, 8:41 AM IST

ಲೀಡ್ಸ್(ಆ.27)‌: ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಇನ್ನಿಂಗ್ಸ್‌ ಸೋಲು ಖಚಿತವಾದಂತೆ ಗೋಚರಿಸುತ್ತಿದೆ. ಆತಿಥೇಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 423 ರನ್‌ ಬಾರಿಸಿದ್ದು 345 ರನ್‌ಗಳ ಮುನ್ನಡೆ ಸಂಪಾದಿಸಿದೆ. 2ನೇ ದಿನವಾದ ಗುರುವಾದ ಇಡೀ ದಿನ ಬ್ಯಾಟ್‌ ಮಾಡಿದ ಇಂಗ್ಲೆಂಡ್‌, ಭಾರತೀಯ ಬೌಲರ್‌ಗಳನ್ನು ಹೈರಾಣಾಗಿಸಿದರು.

ನಾಯಕ ಜೋ ರೂಟ್‌ ಸರಣಿಯಲ್ಲಿ 3ನೇ ಶತಕ ಬಾರಿಸಿದ್ದು, ಭಾರತೀಯರಿಗೆ ಮತ್ತೊಮ್ಮೆ ಕಂಟಕರಾಗಿದ್ದಾರೆ. ಹಸೀಬ್‌ ಹಮೀದ್‌, ಡೇವಿಡ್‌ ಮಲಾನ್‌, ಜಾನಿ ಬೇರ್‌ಸ್ಟೋವ್‌ ನಾಯಕನಿಗೆ ಉತ್ತಮ ಬೆಂಬಲ ನೀಡಿದರು.

ಮೊದಲ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 120 ರನ್‌ ಗಳಿಸಿದ್ದ ಇಂಗ್ಲೆಂಡ್‌ 2ನೇ ದಿನ ರೋರಿ ಬನ್ಸ್‌ರ್‍(61) ವಿಕೆಟ್‌ ಅನ್ನು ಬೇಗನೆ ಕಳೆದುಕೊಂಡಿತು. ಹಸೀಬ್‌ ಹಮೀದ್‌ 68 ರನ್‌ ಗಳಿಸಿ ಔಟಾದರು. 3ನೇ ವಿಕೆಟ್‌ಗೆ ಜೊತೆಯಾದ ರೂಟ್‌ ಹಾಗೂ ಮಲಾನ್‌, ವೇಗವಾಗಿ ರನ್‌ ಕಲೆಹಾಕಿದರು. ನಿರೀಕ್ಷೆಯಂತೆ 2ನೇ ದಿನ ಪಿಚ್‌ ಬ್ಯಾಟಿಂಗ್‌ಗೆ ಹೆಚ್ಚು ಸಹಕಾರ ನೀಡಿತು. ಈ ಇಬ್ಬರು ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

Ind vs Eng ಲೀಡ್ಸ್‌ ಟೆಸ್ಟ್‌: ಇಂಗ್ಲೆಂಡ್‌ಗೆ ಶತಕದ ಮುನ್ನಡೆ

ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದ ರೂಟ್‌ ಹಾಗೂ ಮಲಾನ್‌ ತಂಡದ ಮೊತ್ತವನ್ನು 300ರ ಗಡಿಗೆ ತಂದರು. 70 ರನ್‌ ಗಳಿಸಿದ್ದಾಗ ಮಲಾನ್‌, ಮೊಹಮದ್‌ ಸಿರಾಜ್‌ಗೆ ವಿಕೆಟ್‌ ನೀಡಿದರು. ಡಿಆರ್‌ಎಸ್‌ ಸಹಾಯದಿಂದ ಮಲಾನ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದ ಭಾರತ, ರೂಟ್‌ ಅಬ್ಬರ ತಡೆಯುವಲ್ಲಿ ವಿಫಲವಾಯಿತು.

23ನೇ ಶತಕ: 124 ಎಸೆತಗಳಲ್ಲಿ ಶತಕ ಪೂರೈಸಿದ ರೂಟ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ 23ನೇ ಶತಕ ದಾಖಲಿಸಿದರು. 80ಕ್ಕೂ ಹೆಚ್ಚು ಸ್ಟ್ರೈಕ್‌ರೇಟ್‌ನಲ್ಲಿ ರೂಟ್‌ ಬ್ಯಾಟ್‌ ಬೀಸಿದ್ದು ವಿಶೇಷ. ಇಂಗ್ಲೆಂಡ್‌ ನಾಯಕನ ಓಟಕ್ಕೆ ಭಾರತೀಯರ ಬಳಿ ಯಾವುದೇ ಉತ್ತರಗಳು ಇರಲಿಲ್ಲ. ರೂಟ್‌ 165 ಎಸೆತಗಳನ್ನು ಎದುರಿಸಿ 14 ಬೌಂಡರಿಗಳ ನೆರವಿನಿಂದ 121 ರನ್‌ ಗಳಿಸಿ ಜಸ್‌ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು.

ಕ್ಯಾಲೆಂಡರ್‌ ವರ್ಷದಲ್ಲಿ ಜೋ ರೂಟ್‌ 6 ಶತಕ!

2021ರಲ್ಲಿ ಜೋ ರೂಟ್‌ ಬಾರಿಸಿದ 6ನೇ ಟೆಸ್ಟ್‌ ಶತಕವಿದು. ಈ ಸಾಧನೆ ಮಾಡಿದ ಇಂಗ್ಲೆಂಡ್‌ನ 3ನೇ ಆಟಗಾರ ಎನ್ನುವ ಹಿರಿಮೆಗೆ ಅವರು ಪಾತ್ರರಾದರು. ಈ ಮೊದಲು 1947ರಲ್ಲಿ ಡೆನಿಸ್‌ ಕಾಂಪ್ಟನ್‌, 2002ರಲ್ಲಿ ಮೈಕಲ್‌ ವಾನ್‌ ಈ ಸಾಧನೆ ಮಾಡಿದ್ದರು. ಪಾಕಿಸ್ತಾನದ ಮೊಹಮದ್‌ ಯೂಸುಫ್‌ 2006ರಲ್ಲಿ 9 ಶತಕ ಬಾರಿಸಿದ್ದು ವಿಶ್ವ ದಾಖಲೆಯಾಗಿ ಉಳಿದುಕೊಂಡಿದೆ.

ಕ್ಯಾಲೆಂಡರ್‌ ವರ್ಷದಲ್ಲಿ ರೂಟ್‌ ಗರಿಷ್ಠ ರನ್‌ ದಾಖಲೆ?

ಜೋ ರೂಟ್‌ ಭರ್ಜರಿ ಲಯದಲ್ಲಿದ್ದು, ಈಗಾಗಲೇ ಭಾರತ ವಿರುದ್ಧದ ಸರಣಿಯಲ್ಲಿ 500ಕ್ಕೂ ಅಧಿಕ ರನ್‌ ಕಲೆಹಾಕಿದ್ದಾರೆ. 2021ರಲ್ಲಿ 11ನೇ ಟೆಸ್ಟ್‌ ಆಡುತ್ತಿರುವ ರೂಟ್‌ 1400 ರನ್‌ ಗಳಿಸಿದ್ದು, ಕ್ಯಾಲೆಂಡರ್‌ ವರ್ಷದಲ್ಲಿ ಗರಿಷ್ಠ ರನ್‌ ಬಾರಿಸಿದ ವಿಶ್ವ ದಾಖಲೆ ಬರೆಯುವ ಗುರಿ ಹೊಂದಿದ್ದಾರೆ. ಈ ವರ್ಷ ಭಾರತ ವಿರುದ್ಧ ಇನ್ನೂ 2 ಹಾಗೂ ಆಸ್ಪ್ರೇಲಿಯಾ ವಿರುದ್ಧ 3 ಟೆಸ್ಟ್‌ಗಳು ಬಾಕಿ ಇವೆ. 2006ರಲ್ಲಿ ಪಾಕಿಸ್ತಾನದ ಮೊಹಮದ್‌ ಯೂಸುಫ್‌ 11 ಟೆಸ್ಟ್‌ಗಳ 19 ಇನ್ನಿಂಗ್ಸ್‌ಗಳಲ್ಲಿ 1788 ರನ್‌ ಕಲೆಹಾಕಿದ್ದು ಈಗಲೂ ದಾಖಲೆಯಾಗಿ ಉಳಿದುಕೊಂಡಿದೆ. ಆ ದಾಖಲೆ ಮೇಲೆ ರೂಟ್‌ ಕಣ್ಣಿಟ್ಟಿದ್ದಾರೆ.

ವರ್ಷದಲ್ಲಿ 2 ಬಾರಿ ಸತತ 3 ಟೆಸ್ಟ್‌ಗಳಲ್ಲಿ ರೂಟ್‌ ಶತಕ!

ಒಂದೇ ವರ್ಷದಲ್ಲಿ 2 ಬಾರಿ ಸತತ 3 ಟೆಸ್ಟ್‌ಗಳಲ್ಲಿ ಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆಯನ್ನು ರೂಟ್‌ ಬರೆದಿದ್ದಾರೆ. ಈ ವರ್ಷ ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ 228, 186, ಭಾರತ ವಿರುದ್ಧ ಚೆನ್ನೈನಲ್ಲಿ 218 ರನ್‌ ಗಳಿಸಿದ್ದ ರೂಟ್‌, ಇದೀಗ ನಾಟಿಂಗ್‌ಹ್ಯಾಮ್‌, ಲಂಡನ್‌ ಹಾಗೂ ಲೀಡ್ಸ್‌ ಟೆಸ್ಟ್‌ಗಳಲ್ಲಿ ಶತಕ ಬಾರಿಸಿದ್ದಾರೆ.
 

Follow Us:
Download App:
  • android
  • ios