ವಿಶ್ವಕಪ್ ತಂಡದಲ್ಲಿ ಕೊನೆಯ ಕ್ಷಣದಲ್ಲಿ ಎಂಟ್ರಿ ಕೊಡಬೇಕಿದ್ದರೇ, ರವಿಚಂದ್ರನ್ ಅಶ್ವಿನ್‌ ಇನ್ನುಳಿದ ಎರಡು ಪಂದ್ಯಗಳಲ್ಲಿ ಪರಿಣಾಮಕಾರಿ ದಾಳಿ ನಡೆಸಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಕಮ್‌ಬ್ಯಾಕ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಇನ್ನೊಂದೆಡೆ ಶಾರ್ದೂಲ್ ಠಾಕೂರ್ ಕಳೆದ ಪಂದ್ಯದಲ್ಲಿ ಕೊಂಚ ದುಬಾರಿಯಾಗಿದ್ದರು.ಹೀಗಾಗಿ ಇಂದಿನ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇಂದೋರ್‌(ಸೆ.24): ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಪ್ರಮುಖ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಭಾರತ, ಭಾನುವಾರ ಪ್ರವಾಸಿ ತಂಡದ ವಿರುದ್ಧ 2ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಕೆ.ಎಲ್‌.ರಾಹುಲ್‌ ನಾಯಕತ್ವದ ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಜಯಿಸುವ ನಿರೀಕ್ಷೆಯಲ್ಲಿದೆ.

ವಿಶ್ವಕಪ್‌ಗೆ ಬೇಕಿರುವ ಕೊನೆ ಹಂತದ ಸಿದ್ಧತೆ ನಡೆಸುತ್ತಿರುವ ಭಾರತ ಇನ್ನೂ ಕೆಲ ಸಮಸ್ಯೆಗಳಿಂದ ಹೊರಬಂದಿಲ್ಲ. ಗಾಯದಿಂದ ಚೇತರಿಸಿ ತಂಡಕ್ಕೆ ಮರಳಿರುವ ಶ್ರೇಯಸ್‌ ಅಯ್ಯರ್‌ ಇನ್ನಷ್ಟೇ ಲಯ ಕಂಡುಕೊಳ್ಳಬೇಕಿದ್ದು, ತಂಡ ಅವರಿಂದ ದೊಡ್ಡ ಇನ್ನಿಂಗ್ಸ್‌ ನಿರೀಕ್ಷಿಸುತ್ತಿದೆ. 2ನೇ ಆಯ್ಕೆಯ ವಿಕೆಟ್‌ ಕೀಪರ್‌ ಬ್ಯಾಟರ್‌ ಇಶಾನ್‌ ಕಿಶನ್‌ ಜವಾಬ್ದಾರಿಯುತ ಆಟ ಪ್ರದರ್ಶಿಸಬೇಕಾದ ಅಗತ್ಯವಿದೆ. ಉಳಿದಂತೆ ಆಲ್ರೌಂಡರ್ ಹೊಣೆ ನಿಭಾಯಿಸುತ್ತಿರುವ ರವೀಂದ್ರ ಜಡೇಜಾ ಜೊತೆಗೆ ಆರ್‌.ಅಶ್ವಿನ್‌, ಶಾರ್ದೂಲ್‌ ಠಾಕೂರ್‌ ಕೂಡಾ ಪರಿಣಾಮಕಾರಿ ಆಟ ಪ್ರದರ್ಶಿಸಬೇಕಿದೆ.

ಈ ಎರಡು ತಂಡಗಳಲ್ಲೊಂದು ತಂಡ ವಿಶ್ವಕಪ್ ಗೆಲ್ಲಲಿದೆ: ಅಚ್ಚರಿಯ ಭವಿಷ್ಯ ನುಡಿದ ಕುಮಾರ ಸಂಗಕ್ಕರ..!

ವಿಶ್ವಕಪ್ ತಂಡದಲ್ಲಿ ಕೊನೆಯ ಕ್ಷಣದಲ್ಲಿ ಎಂಟ್ರಿ ಕೊಡಬೇಕಿದ್ದರೇ, ರವಿಚಂದ್ರನ್ ಅಶ್ವಿನ್‌ ಇನ್ನುಳಿದ ಎರಡು ಪಂದ್ಯಗಳಲ್ಲಿ ಪರಿಣಾಮಕಾರಿ ದಾಳಿ ನಡೆಸಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಕಮ್‌ಬ್ಯಾಕ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಇನ್ನೊಂದೆಡೆ ಶಾರ್ದೂಲ್ ಠಾಕೂರ್ ಕಳೆದ ಪಂದ್ಯದಲ್ಲಿ ಕೊಂಚ ದುಬಾರಿಯಾಗಿದ್ದರು.ಹೀಗಾಗಿ ಇಂದಿನ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಆಸೀಸ್‌ಗೆ ಸಮಬಲದ ಗುರಿ: ಇನ್ನು ಭಾರತದಲ್ಲೆ ನಡೆಯಲಿರುವ ವಿಶ್ವಕಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಬೇಕಿರುವ ಆಸೀಸ್‌ಗೆ ಈ ಪಂದ್ಯದಲ್ಲಿ ಸಮಬಲ ಸಾಧಿಸುವ ಅನಿವಾರ್ಯತೆಯಿದೆ. ತಂಡದ ತಾರಾ ಆಟಗಾರರದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಿಚೆಲ್‌ ಸ್ಟಾರ್ಕ್‌ ಹಾಗೂ ಜೋಶ್ ಹೇಜಲ್‌ವುಡ್‌ ಈ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಹೆಚ್ಚು. ಉಳಿದಂತೆ ವಾರ್ನರ್‌, ಲಬುಶೇನ್‌, ಸ್ಟೀವ್‌ ಸ್ಮಿತ್‌ ಭಾರತದ ಬೌಲರ್‌ಗಳಿಗೆ ಮತ್ತೊಮ್ಮೆ ಸವಾಲಾಗಿ ಪರಿಣಮಿಸಬಹುದು.

2024ರ ಟಿ20 ವಿಶ್ವಕಪ್‌ಗೆ ಕೆರಿಬಿಯನ್‌ನ 7 ನಗರಗಳ ಆತಿಥ್ಯ..!

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಶುಭ್‌ಮನ್ ಗಿಲ್‌, ಋತುರಾಜ್ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್‌ ಕಿಶನ್, ಕೆ ಎಲ್ ರಾಹುಲ್‌(ನಾಯಕ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್‌, ಮೊಹಮ್ಮದ್ ಶಮಿ, ಶಾರ್ದೂಲ್‌ ಠಾಕೂರ್, ಜಸ್ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್‌, ಮಿಚೆಲ್ ಮಾರ್ಷ್‌, ಸ್ಟೀವ್ ಸ್ಮಿತ್‌, ಮಾರ್ನಸ್ ಲಬುಶೇನ್‌, ಕ್ಯಾಮರೋನ್ ಗ್ರೀನ್‌, ಜೋಶ್ ಇಂಗ್ಲಿಸ್‌, ಮಾರ್ಕಸ್ ಸ್ಟೋಯ್ನಿಸ್‌, ಪ್ಯಾಟ್ ಕಮಿನ್ಸ್‌(ನಾಯಕ), ಮ್ಯಾಥ್ಯೂ ಶಾರ್ಟ್‌, ಶಾನ್ ಅಬೋಟ್‌, ಆಡಂ ಜಂಪಾ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟೋರ್ಟ್ಸ್‌ 18, ಜಿಯೋ ಸಿನಿಮಾ