Asianet Suvarna News Asianet Suvarna News

2024ರ ಟಿ20 ವಿಶ್ವಕಪ್‌ಗೆ ಕೆರಿಬಿಯನ್‌ನ 7 ನಗರಗಳ ಆತಿಥ್ಯ..!

ಆ್ಯಂಟಿಗಾ ಹಾಗೂ ಬಾರ್ಬುಡಾ, ಬಾರ್ಬಡೋಸ್‌, ಡೊಮಿನಿಕಾ, ಗಯಾನ, ಸೇಂಟ್‌ ಲೂಸಿಯಾ, ಸೇಂಟ್‌ ವಿನ್ಸೆಂಟ್‌, ಟ್ರಿನಿಡಾಡ್‌ ಅಂಡ್‌ ಟೊಬಾಗೊ ಪ್ರಾಂತ್ಯಗಳ ನಗರಗಳು ಆತಿಥ್ಯ ನೀಡಲಿವೆ. ಈ ಪಟ್ಟಿಯಲ್ಲಿ ಜಮೈಕಾಗೆ ಸ್ಥಾನ ಸಿಗದೆ ಇರುವುದು ಅಚ್ಚರಿಗೆ ಕಾರಣವಾಗಿದೆ. 

ICC selects seven venues in Caribbean to host 2024 T20 World Cup kvn
Author
First Published Sep 23, 2023, 10:10 AM IST

ದುಬೈ(ಸೆ.23): 2024ರ ಜೂನ್‌ 4ರಿಂದ 30ರ ವರೆಗೂ ನಡೆಯಲಿರುವ ಟಿ20 ವಿಶ್ವಕಪ್‌ಗೆ ಅಮೆರಿಕದ 3 ನಗರಗಳ ಜೊತೆ ಕೆರಿಬಿಯನ್‌ನ 7 ನಗರಗಳು ಆತಿಥ್ಯ ವಹಿಸಲಿವೆ ಎಂದು ಐಸಿಸಿ ಶುಕ್ರವಾರ ಪ್ರಕಟಿಸಿದೆ. ಆ್ಯಂಟಿಗಾ ಹಾಗೂ ಬಾರ್ಬುಡಾ, ಬಾರ್ಬಡೋಸ್‌, ಡೊಮಿನಿಕಾ, ಗಯಾನ, ಸೇಂಟ್‌ ಲೂಸಿಯಾ, ಸೇಂಟ್‌ ವಿನ್ಸೆಂಟ್‌, ಟ್ರಿನಿಡಾಡ್‌ ಅಂಡ್‌ ಟೊಬಾಗೊ ಪ್ರಾಂತ್ಯಗಳ ನಗರಗಳು ಆತಿಥ್ಯ ನೀಡಲಿವೆ. ಈ ಪಟ್ಟಿಯಲ್ಲಿ ಜಮೈಕಾಗೆ ಸ್ಥಾನ ಸಿಗದೆ ಇರುವುದು ಅಚ್ಚರಿಗೆ ಕಾರಣವಾಗಿದೆ. 

2024ರ ಟಿ20 ವಿಶ್ವಕಪ್‌: ಅಮೆರಿಕದ 3 ನಗರ ಆತಿಥ್ಯ

ದುಬೈ: 2024ರ ಟಿ20 ವಿಶ್ವಕಪ್‌ಗೆ ಅಮೆರಿಕದ 3 ಕ್ರೀಡಾಂಗಣಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಬುಧವಾರ ಅಂತಿಮಗೊಳಿಸಿದೆ. ಬಹುನಿರೀಕ್ಷಿತ ಟೂರ್ನಿಗೆ ಅಮೆರಿಕದ ಜೊತೆ ವೆಸ್ಟ್‌ಇಂಡೀಸ್‌ ಕೂಡಾ ಆತಿಥ್ಯ ವಹಿಸಲಿದ್ದು, ಸದ್ಯ ಅಮೆರಿಕದ 3 ಕ್ರೀಡಾಂಗಣಗಳ ಪಟ್ಟಿ ಪ್ರಕಟಿಸಿದೆ.

ವಿಶ್ವಕಪ್ ಗೆದ್ದರೆ ಸಿಗುತ್ತೆ ಕೋಟಿ-ಕೋಟಿ ಹಣ; ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?

ಇದೇ ಮೊದಲ ಬಾರಿ ಅಮೆರಿಕದಲ್ಲಿ ಟೂರ್ನಿ ಆಯೋಜನೆಗೊಳ್ಳುತ್ತಿದ್ದು, ನ್ಯೂಯಾರ್ಕ್‌, ಡಲ್ಲಾಸ್‌ ಹಾಗೂ ಫ್ಲೋರಿಡಾದಲ್ಲಿ ಪಂದ್ಯಗಳನ್ನು ನಡೆಸಲಾಗುವುದು ಎಂದು ಐಸಿಸಿ ಮಾಹಿತಿ ನೀಡಿದೆ. ಡಲ್ಲಾಸ್‌ ಹಾಗೂ ಫ್ಲೋರಿಡಾದಲ್ಲಿರುವ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಲು ಐಸಿಸಿ ನಿರ್ಧರಿಸಿದೆ. ಇದೇ ವೇಳೆ ನ್ಯೂಯಾರ್ಕ್ ನಗರದ ಪೂರ್ವಕ್ಕೆ ಸುಮಾರು 30 ಮೈಲಿ ದೂರದಲ್ಲಿ 34,000 ಆಸನ ಸಾಮರ್ಥ್ಯವಿರುವ ಕ್ರೀಡಾಂಗಣವನ್ನೂ ವಿಶ್ವಕಪ್‌ಗೆ ಸಜ್ಜುಗೊಳಿಸಲಾಗುತ್ತಿದ್ದು, ಇದೇ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೇ, ವಾಷಿಂಗ್ಟನ್‌ನಲ್ಲಿರುವ ಕ್ರೀಡಾಂಗಣವನ್ನು ಅಭ್ಯಾಸ ಪಂದ್ಯಗಳಿಗಾಗಿ ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದೆ. 2024ರ ಜೂನ್‌ 4ರಿಂದ 30ರ ವರೆಗೂ ವಿಶ್ವಕಪ್‌ ನಡೆಯಲಿದೆ.

ವಿಶ್ವಕಪ್‌ಗಿಲ್ಲ ನಸೀಂ ಶಾ, ಪಾಕ್‌ ತಂಡಕ್ಕೆ ಹಸನ್‌ ಅಲಿ

ಲಾಹೋರ್‌: ಏಷ್ಯಾಕಪ್ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ವೇಗಿ ನಸೀಂ ಶಾ ಪಾಕಿಸ್ತಾನದ ವಿಶ್ವಕಪ್‌ ತಂಡದಿಂದ ಹೊರಬಿದ್ದಿದ್ದಾರೆ. ಅವರ ಬದಲು ಅನುಭವಿ ವೇಗಿ ಹಸನ್‌ ಅಲಿ 15 ಸದಸ್ಯರ ತಂಡ ಸೇರ್ಪಡೆಗೊಂಡಿದ್ದಾರೆ. ಹಸನ್‌ ಕಳೆದ ವರ್ಷ ಜೂನ್‌ನಲ್ಲಿ ಪಾಕ್‌ ಪರ ಕೊನೆಯ ಏಕದಿನ ಪಂದ್ಯವಾಡಿದ್ದರು. ಇದೇ ವೇಳೆ ಹ್ಯಾರಿಸ್‌ ರೌಫ್‌ ತಂಡದಲ್ಲಿ ಉಳಿದುಕೊಂಡಿದ್ದಾರೆ. ಪಾಕ್‌ ತಂಡ ಅ.6ರಂದು ನೆದರ್‌ಲೆಂಡ್ಸ್‌ ವಿರುದ್ಧ ಮೊದಲ ಪಂದ್ಯವಾಡಲಿದೆ.

ಪಂತ್ ಬಳಿಕ ಪಾಕ್ ವೇಗಿ ಮೇಲೆ ಕಣ್ಹಾಕಿದ ಊರ್ವಶಿ; ಆತ ಈಗ ವಿಶ್ವಕಪ್‌ನಿಂದಲೇ ಔಟ್..! ಹಿಡಿಶಾಪ ಹಾಕಿದ ಫ್ಯಾನ್ಸ್

ವಿಶ್ವಕಪ್‌ನಿಂದ ಹೊರಬಿದ್ದ ನೋಕಿಯ, ಮಗಲಾ!

ಜೋಹಾನ್ಸ್‌ಬರ್ಗ್‌: ಏಕದಿನ ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. ತಂಡದ ಪ್ರಮುಖ ವೇಗಿಗಳಾದ ಏನ್ರಿಚ್‌ ನೋಕಿಯ ಹಾಗೂ ಸಿಸಾಂಡ ಮಗಾಲ ಗಾಯದಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ, ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಆಲ್ರೌಂಡರ್‌ ಆ್ಯಂಡಿಲೆ ಫೆಲುಕ್ವಾಯೋ ಹಾಗೂ ಲಿಜಾರ್ಡ್‌ ವಿಲಿಯಮ್ಸ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ನೋಕಿಯ ಬೆನ್ನು ನೋವಿನಿಂದ ಬಳಲುತ್ತಿದ್ದು, ಮಗಾಲ ಎಡಗಾಲಿನ ಮಂಡಿ ಗಾಯಕ್ಕೆ ತುತ್ತಾಗಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಶನಿವಾರ ಭಾರತಕ್ಕೆ ಪ್ರಯಾಣಿಸಲಿದೆ.

Follow Us:
Download App:
  • android
  • ios