ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಟಿ20 ಸರಣಿ ಇಂದಿನಿಂದ ಆರಂಭಗೊಂಡಿದೆ. ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

ಮೊಹಾಲಿ(ಸೆ.20): ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ಟೀಂ ಇಂಡಿಯಾಗೆ ಇದೀಗ ಆಸ್ಟ್ರೇಲಿಯಾ ಸವಾಲು. ಟಿ20 ವಿಶ್ವಕಪ್‌ಗೂ ಮುನ್ನ ನಡೆಯುತ್ತಿರುವ ದ್ವಿಪಕ್ಷೀಯ ಸರಣಿ ಆರಂಭಗೊಂಡಿದೆ. ಮೊಹಾಲಿಯಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಆಸ್ಟ್ರೇಲಿಯಾ ತಂಡಕ್ಕೆ ಟಿಮ್ ಡೇವಿಡ್ ಪದಾರ್ಪಣೆ ಮಾಡಿದ್ದಾರೆ. ಟೀಂ ಇಂಡಿಗೆ ಯಜುವೇಂದ್ರ ಚಹಾಲ್ ಹಾಗೂ ಅಕ್ಸರ್ ಪಟೇಲ್ ಸೇರಿಕೊಂಡಿದ್ದಾರೆ. ಆದರೆ ರಿಷಬ್ ಪಂತ್ ಹೊರಗುಳಿದಿದ್ದಾರೆ. ಇತ್ತ ಜಸ್ಪ್ರೀತ್ ಬುಮ್ರಾ ಇಂದಿನ ಪಂದ್ಯ ಆಡುತ್ತಿಲ್ಲ. ಎರಡನೇ ಅಥವಾ ಮೂರನೆ ಪಂದ್ಯಕ್ಕೆ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. 

ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯುಜುವೇಂದ್ರ ಚಹಾಲ್

ಆಸ್ಟ್ರೇಲಿಯಾ ಪ್ಲೇಯಿಂಗ್11
ಆ್ಯರೋನ್ ಫಿಂಚ್(ನಾಯಕ), ಕ್ಯಮರೂನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂವೇಡ್, ಪ್ಯಾಟ್ ಕಮಿನ್ಸ್, ನಥನ್ ಎಲ್ಲಿಸ್, ಆ್ಯಡಮ್ ಜಂಪಾ, ಜೋಶ್ ಹೇಜಲ್‌ವುಡ್

ಅಕ್ಟೋಬರ್ 01ರಿಂದ ICC ಹೊಸ ಕ್ರಿಕೆಟ್ ನಿಯಮಗಳು ಜಾರಿ; ಫ್ಯಾನ್ಸ್‌ ತಿಳಿದಿರಬೇಕಾದ ಸಂಗತಿಗಳಿವು..!

ರೋಹಿತ್ ಶರ್ಮಾ(Rohit sharma) ನೇತೃತ್ವದ ಟೀಂ ಇಂಡಿಯಾ(Team India) ಶುಭಾರಂಭದ ವಿಶ್ವಾಸದಲ್ಲಿದೆ. 2007ರ ಟಿ20 ವಿಶ್ವಕಪ್(T20 World cup 2022) ಟೂರ್ನಿ ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ಟಿ20 ವಿಶ್ವಕಪ್, ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಇತರ ತಂಡಗಳಿಗೆ ಹೋಲಿಸಿದರೆ ಟೀಂ ಇಂಡಿಯಾ ಕ್ರಿಕೆಟಿಗರು ಅತೀ ಹೆಚ್ಚು ಟಿ20 ಪಂದ್ಯಗಳನ್ನು ಆಡುತ್ತಿದ್ದಾರೆ. ಆದರೂ ಚುಟುಕು ಕ್ರಿಕೆಟ್‌ನಲ್ಲಿ ಯಶಸ್ಸು ಮಾತ್ರ ಕಾಣುತ್ತಿಲ್ಲ. ಇದೀಗ ಆಸ್ಟ್ರೇಲಿಯಾ(Australia ವಿರುದ್ಧ ದಿಟ್ಟ ಹೋರಾಟ ನೀಡಿ ಟಿ20 ವಿಶ್ವಕಪ್ ಟೂರ್ನಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಮುಂದಾಗಿದೆ. 

ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಸೋಲಿನಿಂದ ಟೀಂ ಇಂಡಯಾ ಕಂಗೆಟ್ಟಿದೆ. ಈ ಬಾರಿಯ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗುವ ವಿಶ್ವಾಸದಿಂದ ಟೂರ್ನಿ ಪ್ರವೇಶಿಸಿದ್ದ ಭಾರತ, ಫೈನಲ್ ಪ್ರವೇಶಿಸಿದೆ ಹೊರಬಿದ್ದಿತ್ತು. ಇದೀಗ ಟೀಂ ಇಂಡಿಯಾ ಅತ್ಯುತ್ತಮ ಕಾಂಬಿನೇಷನ್ ನಿರ್ಧರಿಸಲು ಈ ಸರಣಿ ನೆರವಾಗಲಿದೆ. 

ಟಿ20: ಶಮಿ ಬದಲು ಭಾರತ ತಂಡಕ್ಕೆ ಉಮೇಶ್‌
ಹಿರಿಯ ವೇಗಿ ಮೊಹಮದ್‌ ಶಮಿ ಕೋವಿಡ್‌ಗೆ ತುತ್ತಾಗಿ ಆಸ್ಪ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ಬಳಿಕ ಅವರ ಸ್ಥಾನಕ್ಕೆ ಉಮೇಶ್‌ ಯಾದವ್‌ರನ್ನು ಸೇರ್ಪಡೆಗೊಳಿಸಲಾಗಿದೆ. 2022ರ ಐಪಿಎಲ್‌ನಲ್ಲಿ ಕೆಕೆಆರ್‌ ಪರ ಆಡಿದ್ದ ಉಮೇಶ್‌ ಉತ್ತಮ ಪ್ರದರ್ಶನ ತೋರಿದ್ದರು. ಬಳಿಕ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಮಿಡಲ್‌ಸೆಕ್ಸ್‌ ಪರ ಆಡಿದ್ದ ಅವರು 7 ಲಿಸ್ಟ್‌ ‘ಎ’ ಪಂದ್ಯಗಳಲ್ಲಿ 16 ವಿಕೆಟ್‌ ಕಬಳಿಸಿದ್ದರು.