ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಊರ್ವಿಲ್ ಪಟೇಲ್, ಇದೀಗ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಇಂದೋರ್‌: 6 ದಿನಗಳ ಹಿಂದಷ್ಟೇ 28 ಎಸೆತಗಳಲ್ಲಿ ಶತಕ ಸಿಡಿಸಿ, ಭಾರತೀಯ ಆಟಗಾರನಿಂದ ಅತಿವೇಗದ ಟಿ20 ಶತಕದ ದಾಖಲೆ ಬರೆದಿದ್ದ ಗುಜರಾತ್‌ನ ಊರ್ವಿಲ್‌ ಪಟೇಲ್‌, ಇದೀಗ ಮತ್ತೊಂದು ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಉತ್ತರಾಖಂಡ ವಿರುದ್ಧ ಮಂಗಳವಾರ ನಡೆದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಪಂದ್ಯದಲ್ಲಿ ಕೇವಲ 36 ಎಸೆತದಲ್ಲಿ ಶತಕ ಬಾರಿಸಿದರು.

ಈ ಮೂಲಕ 40ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಶತಕ ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ ಕೇವಲ 2ನೇ ಆಟಗಾರ ಎನ್ನುವ ದಾಖಲೆ ಬರೆದರು. ದ.ಆಫ್ರಿಕಾದ ಡೇವಿಡ್‌ ಮಿಲ್ಲರ್‌ 35 ಹಾಗೂ 38 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಉತ್ತರಾಖಂಡ 7 ವಿಕೆಟ್‌ಗೆ 182 ರನ್‌ ಗಳಿಸಿತು. ಊರ್ವಿಲ್‌ 41 ಎಸೆತದಲ್ಲಿ 11 ಸಿಕ್ಸರ್‌, 8 ಬೌಂಡರಿಯೊಂದಿಗೆ ಔಟಾಗದೆ 115 ರನ್‌ ಸಿಡಿಸಿದ ಪರಿಣಾಮ ಗುಜರಾತ್‌ 13.1 ಓವರಲ್ಲೇ 2 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಸಯ್ಯದ್ ಮುಷ್ತಾಕ್‌ ಅಲಿ ಟಿ20ಯಿಂದ ಕರ್ನಾಟಕ ಔಟ್‌!

ಐಪಿಎಲ್‌ ಹರಾಜಿನಲ್ಲಿ ಬಿಕರಿಯಾಗದ ಊರ್ವಿಲ್‌!

ಕಳೆದ ವಾರ ಸೌದಿಯ ಜೆದ್ದಾದಲ್ಲಿ ನಡೆದಿದ್ದ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಊರ್ವಿಲ್‌ ಪಟೇಲ್‌ ಹರಾಜಾಗದೆ ಉಳಿದಿದ್ದರು. 30 ಲಕ್ಷ ರು. ಮೂಲಬೆಲೆ ಹೊಂದಿದ್ದ ಊರ್ವಿಲ್‌ರನ್ನು ಖರೀದಿಸಲು ಯಾವ ಫ್ರಾಂಚೈಸಿಯು ಆಸಕ್ತಿ ತೋರಲಿಲ್ಲ. ಕಳೆದ ವರ್ಷ ಗುಜರಾತ್‌ ಟೈಟಾನ್ಸ್‌ ತಂಡದಲ್ಲಿದ್ದರೂ, ಊರ್ವಿಲ್‌ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ.

ಜಿಂಬಾಬ್ವೆ 57ಕ್ಕೆ ಪತನ: ಪಾಕ್‌ಗೆ 10 ವಿಕೆಟ್‌ ಜಯ

ಬುಲವಾಯೋ: 2ನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆಯನ್ನು ಕೇವಲ 57 ರನ್‌ಗೆ ಆಲೌಟ್‌ ಮಾಡಿದ ಪಾಕಿಸ್ತಾನ, ಸುಲಭ ಗುರಿಯನ್ನು 5.3 ಓವರಲ್ಲಿ ವಿಕೆಟ್‌ ನಷ್ಟವಿಲ್ಲದೆ ಬೆನ್ನತ್ತಿ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದು, ಸರಣಿ ವಶಪಡಿಸಿಕೊಂಡಿದೆ. 

ಟೀಂ ಇಂಡಿಯಾ, ಆಸ್ಟ್ರೇಲಿಯಾಗೆ ಏಕಕಾಲದಲ್ಲಿ ಶಾಕ್ ಕೊಟ್ಟ ದಕ್ಷಿಣ ಆಫ್ರಿಕಾ!

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 12.4 ಓವರಲ್ಲಿ ಸರ್ವಪತನ ಕಂಡಿತು. ಆರಂಭಿಕರಾದ ಬ್ರಿಯಾನ್‌ ಬೆನ್ನೆಟ್‌ (21) ಹಾಗೂ ತಡವಾನಾಶೆ ಮರುಮಾನಿ (16) ಹೊರತುಪಡಿಸಿ ಉಳಿದ ಯಾವ ಬ್ಯಾಟರ್‌ ಕೂಡ ಎರಡಂಕಿ ಮೊತ್ತ ತಲುಪಲಿಲ್ಲ. ಪಾಕ್‌ ಪರ ಎಡಗೈ ಸ್ಪಿನ್ನರ್‌ ಸೂಫಿಯಾನ್‌ ಮುಕೀಮ್‌ 2.4 ಓವರಲ್ಲಿ 3 ರನ್‌ಗೆ 5 ವಿಕೆಟ್‌ ಕಿತ್ತರು. ಪಾಕ್‌ ಆರಂಭಿಕರಾದ ಒಮೈರ್‌ ಯೂಸುಫ್‌ 22, ಸೈಯಂ ಆಯುಬ್‌ 36 ರನ್‌ ಸಿಡಿಸಿದರು.