ನನ್ನ ಮಗ ಯುವರಾಜ್ ಸಿಂಗ್, 2011ರ ವಿಶ್ವಕಪ್ ಆಡುವ ವೇಳೆ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರೆ ನಾನು ಹೆಮ್ಮೆಪಡುತ್ತಿದ್ದೆ ಎಂದು ಯುವಿ ತಂದೆ ಯೋಗರಾಜ್ ಸಿಂಗ್ ಹೇಳಿದ್ದಾರೆ. ಸ್ಫೋಟಕ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ.

ನವದೆಹಲಿ(ಜ.12) 2011ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಟ್ರೋಫಿ ಗೆದ್ದು ಸಂಭ್ರಮಿಸಲು ಮುಖ್ಯ ಕಾರಣ ಯುವರಾಜ್ ಸಿಂಗ್. ಆದರೆ ಯುವಿ ಕ್ಯಾನ್ಸರ್‌ನಿಂದ ತೀವ್ರ ಅಸ್ವಸ್ಥಗೊಂಡಿದ್ದರೂ ಕೆಚ್ಚೆದೆಯ ಹೋರಾಟ ನೀಡಿದ್ದರು. ಪಂದ್ಯದ ನಡುವೆ ರಕ್ತ ಉಗುಳುತ್ತಿದ್ದರೂ ಯುವಿ ಹೋರಾಟಕ್ಕೆ ಬ್ರೇಕ್ ಬಿದ್ದಿರಲಿಲ್ಲ. ಆದರೆ ವಿಶ್ವಕಪ್ ಗೆಲುವಿನ ಹಾಗೂ ಯುವರಾಜ್ ಸಿಂಗ್ ಹೋರಾಟದ ಬಗ್ಗೆ ಮಾತನಾಡಿರುವ ಯೋಗರಾಜ್ ಸಿಂಗ್, ಅಂದು ಯುವರಾಜ್ ಸಿಂಗ್ ಪಂದ್ಯ ಆಡುತ್ತಾ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರೆ ನಾನು ಹೆಮ್ಮೆ ಪಡುತ್ತಿದ್ದೆ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಹೋರಾಟ ಹೇಗಿತ್ತು ಅನ್ನೋದು ಎಲ್ಲರಿಗೂ ತಿಳಿದಿದೆ. ಯುವಿ ಹೋರಾಟದ ಬಗ್ಗೆ ನನಗೆ ಹೆಮ್ಮೆ ಇದೆ. ಒಂದು ವೇಳೆ ದಿಟ್ಟ ಪ್ರದರ್ಶನ ನೀಡಿದ ಯುವರಾಜ್ ಸಿಂಗ್ ಕ್ಯಾನ್ಸರ್‌ನಿಂದ ಟೂರ್ನಿ ನಡುವೆ ಮೃತಪಟ್ಟಿದ್ದರೆ ನಾನು ಮತ್ತಷ್ಟು ಹೆಮ್ಮೆ ಪಡುತ್ತಿದ್ದೆ. ದೇಶಕ್ಕಾಗಿ ಯುವರಾಜ್ ಸಿಂಗ್ ನೀಡಿದ ಹೋರಾಟ ನನ್ನ ಅಚ್ಚಳಿಯದ ಟೂರ್ನಿ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ. ಈ ಮಾತನ್ನು ನಾನು ಫೋನ್ ಮೂಲಕ ಯುವರಾಜ್ ಸಿಂಗ್‌ಗೆ ಹೇಳಿದ್ದೆ ಎಂದು ಯೋಗರಾಜ್ ಹೇಳಿದ್ದಾರೆ.

ಯುವಿ ಕ್ರಿಕೆಟ್ ಬದುಕು ಬೇಗ ಮುಗಿದಿದ್ದು ಧೋನಿಯಿಂದಲ್ಲ, ಈ ಕ್ಯಾಪ್ಟನಿಂದ: ಹೊಸ ಬಾಂಬ್ ಸಿಡಿಸಿದ ಉತ್ತಪ್ಪ

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ ಬ್ಯಾಟಿಂಗ್ ಮಾಡುತ್ತಿದ್ದ. ಕ್ಯಾನ್ಸರ್ ಕಾರಣದಿಂದ ಬೇಗನೆ ಅಸ್ವಸ್ಥನಾಗುತ್ತಿದ್ದ. ಪಂದ್ಯದ ನಡುವೆ ಮೈದನಾನದಲ್ಲಿ ರಕ್ತ ಉಗುಳಿದ್ದ. ಈ ಪಂದ್ಯದ ಬಳಿಕ ನಾನು ಯುವಿ ಬಳಿ ಒಂದು ಮಾತು ಹೇಳಿದ್ದೆ. ನೀನು ಭಯಪಡಬೇಡ, ನಿನಗೆ ಏನಾಗುವುದಿಲ್ಲ, ಸಾಯುವುದಿಲ್ಲ. ದೇಶಕ್ಕಾಗಿ ವಿಶ್ವಕಪ್ ಗೆಲ್ಲಿಸಿಕೊಡು ಎಂದಿದ್ದೆ ಎಂದಿದ್ದಾರೆ.

2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಯುವಿಯ ಅಸಲಿ ಆಟ ಪ್ರದರ್ಶನ ಮೊದಲು ಕ್ಯಾನ್ಸರ್ ತುತ್ತಾಗಿದ್ದ. ಕ್ಯಾನ್ಸರ್ ಬಳಿಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರೂ ಯುವರಾಜ್ ಸಿಂಗ್ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. 2 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾನೆ. ಆದರೆ ಯುವಿ ಸಾಮರ್ಥ್ಯ ಅದಕ್ಕಿಂತ ಹೆಚ್ಚಿತ್ತು ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.

2011ರ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 8 ಇನ್ನಿಂಗ್ಸ್‌ನಲ್ಲಿ ಯುವರಾಜ್ ಸಿಂಗ್ 362 ರನ್ ಸಿಡಿಸಿದ್ದಾರೆ. ಯುವರಾಜ್ ಸಿಂಗ್ ಬ್ಯಾಟಿಂಗ್ ಸರಾಸರಿ 90.50. ಇನ್ನು ಸ್ಟ್ರೈಕ್‌ರೇಟ್ 86.19. ಪ್ರತಿ ಪಂದ್ಯದಲ್ಲೂ ಯುವರಾಜ್ ಸಿಂಗ್ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಪಂದ್ಯ ಗಲ್ಲಿಸಿ ಭಾರತವನ್ನು ಫೈನಲ್ ಪ್ರವೇಶಿಸುವಂತೆ ಮಾಡಿದ್ದರು. ಲೀಗ್ ಹಂತದಿಂದ ಫೈನಲ್ ವರೆಗೆ ಪ್ರತಿ ಪಂದ್ಯದಲ್ಲಿ ಯುವರಾಜ್ ಸಿಂಗ್ ಕೊಡುಗೆ ಮಹತ್ವದ್ದಾಗಿತ್ತು. ಬೌಲಿಂಗ್‌ನಲ್ಲು ಯುವಿ ಕಮಾಲ್ ಮಾಡಿದ್ದರು. 15 ವಿಕೆಟ್ ಕಬಳಿಸಿದ್ದರು. 

ಪಂದ್ಯದ ನಡುವೆ ಯುವಿ ಅಸ್ವ್ಥರಾಗುತ್ತಿದ್ದರು. ಆದರೆ ಕ್ಯಾನ್ಸರ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಅನ್ನೋ ಸುಳಿವು ಯುವರಾಜ್ ಸಿಂಗ್‌ಗೆ ಆಗಲಿ, ಕುಟುಂಬಸ್ಥರಿಗಾಗಲಿ ಯಾರಿಗೂ ಇರಲಿಲ್ಲ. ವಿಶ್ವಕಪ್ ಟೂರ್ನಿಯ 8 ತಿಂಗಳ ಬಳಿಕ ಯುವರಾಜ್ ಸಿಂಗ್ ಅಸ್ವಸ್ಥರಾಗುತ್ತಿದ್ದಕ್ಕೆ ಕಾರಣ ಪತ್ತೆಯಾಗಿತ್ತು. ಯುವರಾಜ್ ಸಿಂಗ್‌ ದೇಹದಲ್ಲಿ ಕ್ಯಾನ್ಸರ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಅನ್ನೋದು ಪತ್ತೆಯಾಗಿತ್ತು. ಬಳಿಕ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಮರಳಿದ್ದರು.

ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಯುವರಾಜ್‌ ಸಿಂಗ್‌ಗೆ ಬಿಸಿಸಿಐನಿಂದ ಸಿಗುವ ತಿಂಗಳ ಪೆನ್ಷನ್ ಎಷ್ಟು?