IND vs PAK ಪೆವಿಲಿಯನ್ ರೈಡ್ ಸಹಾಯಕ್ಕಿದೆ ಹೆಕ್ಟರ್, ಪಾಕಿಸ್ತಾನ ಬ್ಯಾಟಿಂಗ್ ಕುಟುಕಿದ ಎಂಜಿ ಮೋಟಾರ್ಸ್!
ಪಾಕಿಸ್ತಾನ ಅಂತಿಮ 8 ವಿಕೆಟ್ ಪತನ ತೀವ್ರ ಟೀಕೆಗೆ ಗುರಿಯಾಗಿದೆ. ಪಾಕಿಸ್ತಾನ ಬ್ಯಾಟ್ಸ್‌ಮನ್ ಪೆವಿಲಿಯನ್ ಪರೇಡ್‌ನ್ನು ಎಂಜಿ ಮೋಟಾರ್ಸ್ ಕುಟುಕಿದೆ. 8 ಮಂದಿ ಪೆವಿಲಿಯನ್ ಪರೇಡ್‌ನ್ನು ಎಂಜಿ ಮೋಟಾರ್ಸ್ ಕುಟುಕಿದೆ. ನಿಮ್ಮ ಪೆವಿಲಿಯನ್ ರೈಡ್ ಹೆಕ್ಟರ್ ಸಹಾಯ ನೀಡಲಿದೆ ಎಂದಿದೆ. ಎಂಜಿ ಮೋಟಾರ್ಸ್ ಟ್ವೀಟ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಅಹಮ್ಮದಾಬಾದ್(ಅ.14) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತ ಅದ್ಬುತ ಬೌಲಿಂಗ್ ದಾಳಿಗೆ ಅಭಿಮಾನಿಗಳು ಡಬಲ್ ಖುಷಿಯಾಗಿದ್ದಾರೆ. ಆರಂಭಿಕ ಹಂತದಲ್ಲಿ ದಿಟ್ಟ ಹೋರಾಟ ನೀಡಿ ಆತಂಕ ಸೃಷ್ಟಿಸಿದ್ದ ಪಾಕ್ ತಂಡವನ್ನು ಭಾರತೀಯ ಬೌಲರ್ಸ್ ಕಟ್ಟಿ ಹಾಕಿದ್ದಾರೆ. 155 ರನ್‌ಗೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಪಾಕಿಸ್ತಾನ 191 ರನ್‌ಗೆ ಆಲೌಟ್ ಆಗಿದೆ. 36 ರನ್‌ಗೆ 8 ವಿಕೆಟ್ ಕಳೆದುಕೊಂಡು ಆಲೌಟ್ ಆಗಿತ್ತು. ಪಾಕಿಸ್ತಾನ ಬ್ಯಾಟ್ಸ್‌ಮನ್ ಪೆವಿಲಿಯನ್ ಪರೇಡ್‌ನ್ನು ಎಂಜಿ ಮೋಟಾರ್ಸ್ ಕುಟುಕಿದೆ. ಎಂಜಿ ಹೆಕ್ಟರ್ ಕಾರಿನ ಫೋಟೋವನ್ನು ಟ್ವೀಟ್ ಮಾಡಿರುವ ಎಂಜಿ ಮೋಟಾರ್ಸ್, ಪಾಕಿಸ್ತಾನ ಬ್ಯಾಟ್ಸ್‌ಮನ್ ಪೆವಿಲಿಯನ್ ಪರೇಡ್‌ಗೆ ಹೆಕ್ಟರ್ ಸಹಾಯ ನೀಡಲಿದೆ ಎಂದು ಟ್ವೀಟ್ ಮಾಡಿದೆ. ಈ ಟ್ವೀಟ್ ಭಾರಿ ಸಂಚಲನ ಸೃಷ್ಟಿಸಿದೆ.
ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳಿಗೆ ಪೆವಲಿಯನ್ ರೈಡ್ ಬೇಕಿದ್ದರೆ ನಾವು ಸಹಾಯ ಮಾಡುತ್ತೇವೆ. ಸೂಚನೆ, ಎಂಜಿ ಹೆಕ್ಟರ್ ಒಂದೇ ಬಾರಿಗೆ 7 ಮಂದಿಯನ್ನು ಕರೆದೊಯ್ಯಲು ಸಾಧ್ಯ ಎಂದು ಎಂಜಿ ಮೋಟಾರ್ಸ್ ಟ್ವೀಟ್ ಮಾಡಿದೆ.ಎಂಜಿ ಮೋಟಾರ್ಸ್ ಟ್ವೀಟ್‌ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ.
IND vs PAK ಪಂದ್ಯದ ನಡುವೆ ಕಾಣಿಸಿಕೊಂಡ ಸ್ಟಾಂಡ್ ವಿಥ್ ಇಸ್ರೇಲ್ ಪ್ಲಕಾರ್ಡ್, ಪ್ರತಿಕ್ರಿಯಿಸಿದ ಸರ್ಕಾರ!
ಪಾಕಿಸ್ತಾನ ವಿಕೆಟ್ ಪತನಕ್ಕೆ ಸೂಕ್ತವಾಗಿ ಟ್ವೀಟ್ ಮಾಡಿ ಭಾರತೀಯರ ಹೃದಯ ಗೆದ್ದಿದ್ದೀರಿ. ಇಷ್ಟೇ ಅಲ್ಲ ಅತ್ಯುತ್ತಮ ಮಾರ್ಕೆಟಿಂಗ್ ಕೂಡ ಮಾಡಿದ್ದೀರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ರೋಸ್ಟ್ ಮಾಡುವುದು ಎಂದರೇ ಇದೆ ಎಂದು ಇತರ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಮೋಟಾರ್ಸ್ ಕೂಡ ಮಜಾ ತೆಗೆದುಕೊಳ್ಳುತ್ತಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. 155 ರನ್‌ಗೆ 2 ವಿಕೆಟ್ ಕಳೆದುಕೊಂಡು ಉತತಮ ಸ್ಥಿತಿಯಲ್ಲಿದ್ದ ಪಾಕಿಸ್ತಾನ ಏಕಾಏಕಿ 36 ರನ್‌ಗೆ 8 ವಿಕೆಟ್ ಕಳೆದುಕೊಂಡಿದೆ ಎಂದರೆ ನಮ್ಮಲ್ಲಿ ಬ್ಯಾಟಿಂಗ್ ಪ್ರತಿಭೆಗಳಿಲ್ಲ ಎಂದು ಮಾಜಿ ವೇಗಿ ಶೋಯೆಬ್ ಅಕ್ತರ್ ಟೀಕಿಸಿದ್ದಾರೆ. ಪಾಕಿಸ್ತಾನ ಪಂದ್ಯ ಆರಂಭಕ್ಕೂ ಮುನ್ನವೇ ಸೊಲೊಪ್ಪಿಕೊಂಡಿದೆ ಎಂದು ಪಾಕ್ ಅಭಿಮಾನಿಗಳು ಟೀಕಿಸಿದ್ದಾರೆ.
36 ರನ್‌ಗೆ 8 ವಿಕೆಟ್..! ಭಾರತದ ಬೌಲಿಂಗ್‌ಗೆ ದಿಕ್ಕೆಟ್ಟ ಪಾಕ್ 191ಕ್ಕೆ ಆಲೌಟ್!
ನಾಯಕ ಬಾಬರ್ ಅಜಮ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದರೆ, ಮೊಹಮ್ಮದ್ ರಿಜ್ವಾನ್ 49 ರನ್ ಸಿಡಿಸಿದ್ದರು. ಇನ್ನು ಇಮಾಮ್ ಉಲ್ ಹಕ್ 36 ರನ್ ಕಾಣಿಕೆ ನೀಡಿದ್ದರು. ಇನ್ನುಳಿದ ಬ್ಯಾಟ್ಸ್‌ಮನ್ ದಿಟ್ಟ ಹೋರಾಟ ನೀಡಲು ಸಾಧ್ಯವಾಗಿಲ್ಲ.