ನಗರದಲ್ಲಿ ಗಾಳಿ ತೀರಾ ಮಲಿನಗೊಂಡಿದ್ದು, ಸೋಮವಾರ ಬೆಳಗ್ಗೆ ರೆಫ್ರಿಗಳು ಗಾಳಿಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲಿದ್ದು, ಬಳಿಕ ಪಂದ್ಯ ನಡೆಸುವುದೋ ಅಥವಾ ಮುಂದೂಡುವುದೋ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ನವದಹೆಲಿ(ನ.11): ಕಳೆದೊಂದು ವಾರದಿಂದ ಅಪಾಯಕಾರಿ ಮಟ್ಟಕ್ಕೆ ತಲುಪಿರುವ ನವದೆಹಲಿ ವಾಯುಮಾಲಿನ್ಯ ವಿಶ್ವಕಪ್‌ನ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಪಂದ್ಯದ ಮೇಲೆ ಕರಿನೆರಳು ಬೀರಿದೆ. ಸೋಮವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಪಂದ್ಯ ನಡೆಯುವುದೇ ಅನುಮಾನ.

ನಗರದಲ್ಲಿ ಗಾಳಿ ತೀರಾ ಮಲಿನಗೊಂಡಿದ್ದು, ಸೋಮವಾರ ಬೆಳಗ್ಗೆ ರೆಫ್ರಿಗಳು ಗಾಳಿಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲಿದ್ದು, ಬಳಿಕ ಪಂದ್ಯ ನಡೆಸುವುದೋ ಅಥವಾ ಮುಂದೂಡುವುದೋ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಗೆಲುವನ್ನು ಸಂಭ್ರಮಿಸಿದ ನವ ದಂಪತಿ: ಮದುವೆ ವೇದಿಕೆಯಲ್ಲಿ ಡಬಲ್‌ ಸಂಭ್ರಮ!

ಸೆಮಿಫೈನಲ್‌ ದೃಷ್ಟಿಯಿಂದ ಈ ಪಂದ್ಯ ಬಾಂಗ್ಲಾಕ್ಕೆ ಹೆಚ್ಚೇನೂ ಮಹತ್ವದ್ದಲ್ಲದಿದ್ದರೂ, ಲಂಕಾಕ್ಕೆ ಗೆಲ್ಲಲೇಬೇಕಿರುವ ಪಂದ್ಯ. ಬಾಂಗ್ಲಾ ಆಡಿರುವ 7ರಲ್ಲಿ ಕೇವಲ 1 ಪಂದ್ಯ ಗೆದ್ದಿದ್ದು, ರೇಸ್‌ನಿಂದ ಹೊರಬಿದ್ದಿದೆ. ಲಂಕಾ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಜಯಗಳಿಸಿದ್ದು, ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ನಾಕೌಟ್‌ ರೇಸ್‌ನಲ್ಲಿ ಉಳಿಯಲಿದೆ.

ತೀವ್ರ ವಾಯುಮಾಲಿನ್ಯದಿಂದಾಗಿ ನವದೆಹಲಿಯಲ್ಲಿ ಇಂದು ನಡೆಯಬೇಕಿರುವ ವಿಶ್ವಕಪ್‌ನ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ ಕರಿನೆರಳು ಆವರಿಸಿದೆ. ದಟ್ಟ ಹೊಗೆಯಿಂದಾಗಿ ಶುಕ್ರವಾರ ಬಾಂಗ್ಲಾದ ಅಭ್ಯಾಸ ಪಂದ್ಯ ರದ್ದಾಗಿದ್ದು, ಶನಿವಾರ ಶ್ರೀಲಂಕಾ ಆಟಗಾರರು ಕೂಡಾ ಮೈದಾನಕ್ಕಿಳಿಯಲಿಲ್ಲ. 

ICC World Cup 2023: ಕಿವೀಸ್‌, ಪಾಕ್‌, ಆಸೀಸ್, ಆಫ್ಘಾನ್ ಸೆಮಿಫೈನಲ್‌ ಲೆಕ್ಕಾಚಾರ ಹೇಗೆ?

ಹೀಗಾಗಿ ಐಸಿಸಿ, ಬಿಸಿಸಿಐ ಅಧಿಕಾರಿಗಳು ಡೆಲ್ಲಿಯ ಪರಿಸ್ಥಿತಿ ಬಗ್ಗೆ ಅವಲೋಕಿಸುತ್ತಿದ್ದು, ಪಂದ್ಯ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಪಂದ್ಯ ಸ್ಥಳಾಂತರಗೊಳಿಸುವ ಸಾಧ್ಯತೆ ಕಡಿಮೆ ಇದ್ದರೂ, ಸೋಮವಾರ ಪಂದ್ಯ ಆಯೋಜಿಸಲು ಸಾಧ್ಯವಿದೆಯೇ ಎಂಬುದರ ಬಗ್ಗೆ ತಜ್ಞರ ವರದಿ ಬಳಿಕ ಐಸಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ಒಟ್ಟು ಮುಖಾಮುಖಿ: 53

ಶ್ರೀಲಂಕಾ: 42

ಬಾಂಗ್ಲಾದೇಶ: 09

ಫಲಿತಾಂಶವಿಲ್ಲ: 02

ಸಂಭವನೀಯ ಆಟಗಾರರ ಪಟ್ಟಿ

ಶ್ರೀಲಂಕಾ: ಪಥುಮ್ ನಿಸ್ಸಾಂಕ, ದೀಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್‌(ನಾಯಕ), ಸದೀರಾ ಸಮರವಿಕ್ರಮ, ಚರಿತ್ ಅಸಲಂಕ, ಏಂಜಲೋ ಮ್ಯಾಥ್ಯೂಸ್‌, ದಶುನ್ ಹೇಮಂತ, ಮಹೀಶ್ ತೀಕ್ಷಣ, ಕಸುನ್ ರಜಿತಾ, ದುಸ್ಮಂತಾ ಚಮೀರ, ದಿಲ್ಷ್ಶಾನ್ ಮಧುಶಂಕ.

ಬಾಂಗ್ಲಾದೇಶ: ಲಿಟನ್‌ ದಾಸ್‌, ತಂಜೀದ್‌ ಹಸನ್, ನಜ್ಮುಲ್‌ ಹೊಸೈನ್ ಶಾಂಟೋ, ಶಕೀಬ್‌ ಅಲ್ ಹಸನ್(ನಾಯಕ), ಮುಷ್ಫಿಕುರ್ ರಹೀಂ, ಮಹ್ಮೂದುಲ್ಲಾ, ತೌಹೀದ್‌ ಹೃದಯ್, ಮೆಹಿದಿ ಹಸನ್, ತಸ್ಕೀನ್‌ ಅಹಮ್ಮದ್, ಮುಸ್ತಾಫಿಜುರ್‌ ರೆಹಮಾನ್, ಶೊರೀಫುಲ್‌ ಹಸನ್.

ಪಂದ್ಯ: ಮಧ್ಯಾಹ್ನ 2ಕ್ಕೆ

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್