Asianet Suvarna News Asianet Suvarna News

ICC ವಿಶ್ವಕಪ್ ಟೂರ್ನಿಯ ಲೀಗ್‌ನ ಎಲ್ಲಾ ಪಂದ್ಯ ಗೆದ್ದು ಹೊಸ ದಾಖಲೆ ಬರೆದ ಭಾರತ!

ಐಸಿಸಿ ವಿಶ್ವಕಪ್ ಟೂರ್ನಿಯ 9 ಲೀಗ್ ಪಂದ್ಯದ ಪೈಕಿ 9ರಲ್ಲೂ ಭಾರತ ಗೆಲುವು ದಾಖಲಿಸಿದೆ. ನೆದರ್ಲೆಂಡ್ ವಿರುದ್ಧ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ 160 ರನ್ ಗೆಲುವು ದಾಖಲಿಸಿದೆ. ಇದರೊಂದಿಗೆ ಹೊಸ ದಾಖಲೆ ನಿರ್ಮಾಣವಾಗಿದೆ.

ICC World cup 2023 Team India thrash Netherland by 160 runs and create history with 9 out of 9 win ckm
Author
First Published Nov 12, 2023, 9:33 PM IST

ಬೆಂಗಳೂರು(ನ.12) ಐಸಿಸಿ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದೆ. ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಭಾರತ 160 ರನ್ ಭರ್ಜರಿ ಗೆಲುವು ದಾಖಲಿಸಿದೆ. ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಸೆಂಚುರಿ ನೆರವಿನಿಂದ ಭಾರತ 410 ರನ್ ಸಿಡಿಸಿತ್ತು. ಈ ಬೃಹತ್ ಗುರಿ ನೋಡಿ ಸುಸ್ತಾದ ನೆದರ್ಲೆಂಡ್ 250 ರನ್‌ಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಮತ್ತೊಂದು ವಿಶೇಷ ಅಂದರೆ ಕೀಪರ್ ಹಾಗೂ ಶ್ರೇಯಸ್ ಅಯ್ಯರ್ ಹೊರತುಪಡಿಸಿ ಇನ್ನೆಲ್ಲರು ಬೌಲಿಂಗ್ ಮಾಡಿದ್ದಾರೆ. ಇಷ್ಟೇ ಅಲ್ಲ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಲಾ ಒಂದೊಂದು ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ನೆದರ್ಲೆಂಡ್ ವಿರುದ್ಧದ ಪಂದ್ಯ ಭಾರತಕ್ಕೆ ಅಭ್ಯಾಸ ಪಂದ್ಯವಾಗಿತ್ತು. ಕಾರಣ ಅಂಪಟ್ಟಿಯಲ್ಲಿ ಭಾರತ ಆಗಲೇ ಮೊದಲ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ನದರ್ಲೆಂಡ್ ವಿರುದ್ದ ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಬೌಲಿಂಗ್ ಪ್ರದರ್ಶನವನ್ನೂ ನೀಡಿತು. ನೆದರ್ಲೆಂಡ್ 47.5 ಓವರ್‌ಗಳಲ್ಲಿ 250 ರನ್ ಸಿಡಿಸಿ ಆಲೌಟ್ ಆಯಿತು.

ವಿಶ್ವಕಪ್‌ನಿಂದ ಹೊರಬಿದ್ದರೂ ಪಾಕಿಸ್ತಾನಕ್ಕೆ ಸಿಗಲಿದೆ ಕೋಟಿ ಕೋಟಿ ರೂ ಪ್ರಶಸ್ತಿ ಮೊತ್ತ!

ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾರತದ ಅದ್ಭುತ ಬೌಲಿಂಗ್ ದಾಳಿ ನೆದರ್ಲೆಂಡ್ ವಿರುದ್ಧವೂ ಮುಂದುವರಿದಿತ್ತು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಕಬಳಿಸಿದರು. ಸ್ಪಿನ್ನರ್ ಪೈಕಿ ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಬಳಿಸಿದ್ದರು. ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಲಾ ಒಂದೊಂದು ವಿಕೆಟ್ ಕಬಳಿಸಿ ನೆದರ್ಲೆಂಡ್ ತಂಡವನ್ನು ಆಲೌಟ್ ಮಾಡಿದರು.

ನೆದರ್ಲೆಂಡ್ ದಿಟ್ಟ ಹೋರಾಟವನ್ನೇ ನೀಡಿದೆ. ತೇಜಾ ನಿಡಮಾನರು ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಸೈಬ್ರಾಂಡ್ ಎಂಜ್ಲೆಬ್ರೆಚ್ 45 ರನ್ ಕಾಣಿಕೆ ನೀಡಿದ್ದಾರೆ. ಕೊಲಿನ್ ಅಕರ್ಮ್ಯಾನ್ 35, ಮ್ಯಾಕ್ಸ್ ಒಡ್ವಾಡ್ 30 ರನ್ ಸಿಡಿಸಿದ್ದಾರೆ. ವಿಶೇಷ ಅಂದರೆ ಭಾರತ ವಿರುದ್ದ ನೆದರ್ಲೆಂಡ್ ಇಂದಿನ ಪಂದ್ಯದಲ್ಲಿ 9 ಸಿಕ್ಸರ್ ಸಿಡಿಸಿದೆ.

ಬೆಂಗಳೂರಲ್ಲಿ ಶ್ರೇಯಸ್ ರಾಹುಲ್ ತಲಾ ನೂರು; ನೆದರ್‌ಲೆಂಡ್ಸ್‌ ಗೆಲ್ಲಲು ಗುರಿ 411

ಲೀಗ್ ಹಂತದ ಎಲ್ಲಾ 9 ಪಂದ್ಯ ಗೆದ್ದ ಭಾರತ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಜೇಯ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ. 2003ರ ವಿಶ್ವಕಪ್‌ನಲ್ಲಿ ಬಾರತ ಸತತ 8  ಪಂದ್ಯ ಗೆದ್ದ ಸಾಧನೆ ಮಾಡಿತ್ತು. ಇದೀಗ 9 ಪಂದ್ಯ ಗೆದ್ದು ದಾಖಲೆ ಬರೆದಿದೆ.

ವಿಶ್ವಕಪ್ ಟೂರ್ನಿಯ ಒಂದು ಆವೃತ್ತಿಯಲ್ಲಿ ಸತತ ಗೆಲುವಿನ ದಾಖಲೆ 
ಆಸ್ಟ್ರೇಲಿಯಾ: 11 ಗೆಲುವಿನ ದಾಖಲೆ(2003)
ಭಾರತ: 9 ಗೆಲುವಿನ ದಾಖಲೆ(2023)
ಭಾರತ: 8 ಗೆಲುವಿನ ದಾಖಲೆ(2003)
ನ್ಯೂಜಿಲೆಂಡ್: 8 ಗೆಲುವಿನ ದಾಖಲೆ(2015) 

Follow Us:
Download App:
  • android
  • ios