ವಿಶ್ವಕಪ್‌ನಿಂದ ಹೊರಬಿದ್ದರೂ ಪಾಕಿಸ್ತಾನಕ್ಕೆ ಸಿಗಲಿದೆ ಕೋಟಿ ಕೋಟಿ ರೂ ಪ್ರಶಸ್ತಿ ಮೊತ್ತ!
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಲೀಗ್ ಹಂತದಿಂದ ಹೊರಬಿದ್ದಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದೆ. ಟೂರ್ನಿಯಿಂದ ಹೊರಬಿದ್ದರೂ ಪಾಕಿಸ್ತಾನ ತಂಡಕ್ಕೆ ಕೋಟಿ ರೂಪಾಯಿ ಪ್ರಶಸ್ತಿ ಮೊತ್ತ ಸಿಗಲಿದೆ. ಪಾಕಿಸ್ತಾನ ತಂಡ ಪಡೆಯಲಿರುವ ಪ್ರೈಜ್ ಮನಿ ಇಲ್ಲಿದೆ.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ನೀರಸ ಪ್ರದರ್ಶನಕ್ಕೆ ಭಾರಿ ಟೀಕೆ, ಟ್ರೋಲ್ ವ್ಯಕ್ತವಾಗುತ್ತಿದೆ. ಬಾಬರ್ ಅಜಮ್ ನಾಯಕತ್ವ, ಕಳಪೆ ಪ್ರದರ್ಶನಕ್ಕೆ ಪಾಕಿಸ್ತಾನ ಅಭಿಮಾನಿಗಳೇ ಟ್ರೋಲ್ ಮಾಡುತ್ತಿದ್ದಾರೆ.
ಐಸಿಸಿ ವಿಶ್ವಕಪ್ 2023ರಲ್ಲಿ ಪಾಕಿಸ್ತಾನ 9 ಲೀಗ್ ಪಂದ್ಯದಲ್ಲಿ ಕೇವಲ 4 ಗೆಲುವು 5 ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದೆ.
ಪಾಕಿಸ್ತಾನ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದೆ. ಆದರೆ ಪಾಕ್ ತಂಡ ಕೂಡ ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆಯಲಿದೆ. ಪಾಕಿಸ್ತಾನ ಒಟ್ಟು 260,000 ಡಾಲರ್ ಅಂದರೆ 2,16,57,779 ರೂಪಾಯಿ ಹಣ ಬಹುಮಾನವಾಗಿ ಪಡೆಯಲಿದೆ.
ಗ್ರೂಪ್ ಹಂತದಲ್ಲಿ ತಂಡದ ಪ್ರತಿ ಗೆಲುವಿಗೆ ಐಸಿಸಿ 40,000 ಅಮೆರಿಕನ್ ಡಾಲರ್ ಮೊತ್ತ ನೀಡಲಿದೆ. ಪಾಕಿಸ್ತಾನ ಲೀಗ್ ಹಂತದಲ್ಲಿ ಒಟ್ಟು 4 ಗೆಲುವು ದಾಖಲಿಸಿದೆ.
ಇನ್ನು ಗ್ರೂಪ್ ಹಂತದಿಂದ ಹೊರಬೀಳುವ ತಂಡಕ್ಕೆ ಐಸಿಸಿ $100,000 ಮೊತ್ತ ಬಹುಮಾನವಾಗಿ ನೀಡಲಿದೆ. ಅಂದರೆ ಒಟ್ಟು ಪಾಕಿಸ್ತಾನ $260,000 ಹಣ ಬಹುಮಾನವಾಗಿ ಪಡೆಯಲಿದೆ.
ಇನ್ನೂ ಇಂಗ್ಲೆಂಡ್ ತಂಡ ಲೀಗ್ ಹಂತದಲ್ಲಿ ಆಡಿದ 9 ಪಂದ್ಯದಲ್ಲಿ 3 ಗೆಲುವು ಕಂಡಿದೆ. ಹೀಗಾಗಿ ಒಟ್ಟು 220,000 ಅಮೆರಿಕನ್ ಡಾಲರ್ ಮೊತ್ತವನ್ನು ಇಂಗ್ಲೆಂಡ್ ಬಹುಮಾನವಾಗಿ ಪಡೆಯಲಿದೆ.
ಪಾಕಿಸ್ತಾನ ತಂಡದ ಸೋಲು, ವಿಶ್ವಕಪ್ ಟೂರ್ನಿಯಿಂದ ನಿರ್ಗಮನವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಟೀಕಿಸಿದ್ದಾರೆ. ಪಾಕಿಸ್ತಾನಕ್ಕಿಂತ ಆಫ್ಘಾನಿಸ್ತಾನ ತಂಡ ಉತ್ತಮ ಪ್ರದರ್ಶನ ನೀಡಿದೆ ಎಂದಿದ್ದಾರೆ.
ಇತ್ತ ಬಾಬರ್ ಅಜಮ್ ನಾಯಕತ್ವ ಬದಲಾವಣೆ ಮಾತುಗಳು ಚರ್ಚೆಯಾಗುತ್ತಿದೆ. ಅಜಮ್ ನಾಯಕತ್ವ ಕೂಡ ಪಾಕಿಸ್ತಾನ ಸೋಲಿಗೆ ಕಾರಣ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.