ಕಿವೀಸ್ ಎದುರು 7 ವಿಕೆಟ್ ಕಬಳಿಸಿದ ಶಮಿ ಕೈಗೆ ಮುತ್ತಿಕ್ಕಿದ ಅಶ್ವಿನ್..! ವಿಡಿಯೋ ವೈರಲ್
ಭಾರತ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ ಇತಿಹಾಸದಲ್ಲಿ 12 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆಯಿಟ್ಟಿದೆ. 2011ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಂ ಇಂಡಿಯಾ, ಇದೀಗ ಮತ್ತೊಮ್ಮೆ ವಿಶ್ವಕಪ್‌ಗೆ ಮುತ್ತಿಕ್ಕುವ ಕನಸು ಕಾಣಲಾರಂಭಿಸಿದೆ. ಇನ್ನು ಪಂದ್ಯ ಮುಕ್ತಾಯದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರ ಸಂಭ್ರಮಾಚರಣೆ ಮುಗಿಲು ಮುಟ್ಟಿತು.
ಮುಂಬೈ(ನ.16): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, 2023ರ ಐಸಿಸಿ ಏಕದಿನ ವಿಶ್ವಕಪ್ ಸೆಮೀಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 70 ರನ್‌ಗಳಿಂದ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. 7 ವಿಕೆಟ್ ಕಬಳಿಸಿ ಮಿಂಚಿದ ಅನುಭವಿ ವೇಗಿ ಮೊಹಮ್ಮದ್ ಶಮಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಪಂದ್ಯ ಮುಕ್ತಾಯದ ಬಳಿಕ ಡ್ರೆಸ್ಸಿಂಗ್ ರೂಂಗೆ ಬಂದ ಶಮಿ ಅವರ ಕೈಗೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಿಸ್ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆಯಿತು. ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟರ್‌ಗಳು ಉತ್ತಮ ರನ್ ಕಾಣಿಕೆ ನೀಡಿದರು. ರೋಹಿತ್ ಶರ್ಮಾ ಸ್ಪೋಟಕ 47 ರನ್ ಸಿಡಿಸಿದರೆ, ಶುಭ್‌ಮನ್ ಗಿಲ್ ಅಜೇಯ 80 ರನ್ ಬಾರಿಸಿದರು. ಇನ್ನು ವಿರಾಟ್ ಕೊಹ್ಲಿ 117 ಹಾಗೂ ಶ್ರೇಯಸ್ ಅಯ್ಯರ್ ಸ್ಪೋಟಕ 105 ರನ್ ಸಿಡಿಸಿದರು. ಪರಿಣಾಮ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 397 ರನ್ ಬಾರಿಸಿತು.
ICC rankings: ಎರಡನೇ ಸ್ಥಾನಕ್ಕೆ ಕುಸಿದ ವೇಗಿ ಮೊಹಮ್ಮದ್ ಸಿರಾಜ್
ಇನ್ನು ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಆರಂಭಿಕ ಆಘಾತ ಅನುಭವಿಸಿತಾದರೂ, ಆ ಬಳಿಕ ಡೇರಲ್ ಮಿಚೆಲ್ ಹಾಗೂ ಕೇನ್ ವಿಲಿಯಮ್ಸನ್ ಶತಕದ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಪಾಳಯದಲ್ಲಿ ಸೋಲಿನ ಭೀತಿ ಮೂಡುವಂತೆ ಮಾಡಿದರು. ಆದರೆ ಮಾರಕ ದಾಳಿ ನಡೆಸಿದ ಅನುಭವಿ ವೇಗಿ ಶಮಿ 9.5 ಓವರ್‌ಗಳಲ್ಲಿ ಕೇವಲ 57 ರನ್ ನೀಡಿ 7 ವಿಕೆಟ್ ಕಬಳಿಸುವ ಮೂಲಕ ಏಕಾಂಗಿಯಾಗಿ ತಂಡವನ್ನು ಭಾರತದ ಪಾಲಾಗುವಂತೆ ಮಾಡಿದರು.
ಭಾರತ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ ಇತಿಹಾಸದಲ್ಲಿ 12 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆಯಿಟ್ಟಿದೆ. 2011ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಂ ಇಂಡಿಯಾ, ಇದೀಗ ಮತ್ತೊಮ್ಮೆ ವಿಶ್ವಕಪ್‌ಗೆ ಮುತ್ತಿಕ್ಕುವ ಕನಸು ಕಾಣಲಾರಂಭಿಸಿದೆ. ಇನ್ನು ಪಂದ್ಯ ಮುಕ್ತಾಯದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರ ಸಂಭ್ರಮಾಚರಣೆ ಮುಗಿಲು ಮುಟ್ಟಿತು.
ಸೆಮೀಸ್‌ನಲ್ಲಿ ಶಮಿಗೆ 7 ವಿಕೆಟ್..! ವಿಶ್ವಕಪ್ ಪಂದ್ಯಕ್ಕೂ ಒಂದು ದಿನ ಮೊದಲೇ ಕನಸು ಕಂಡ ನೆಟ್ಟಿಗ..!
ಬಿಸಿಸಿಐ ಈ ಕುರಿತಂತೆ ವಿಡಿಯೋ ಹಂಚಿಕೊಂಡಿದ್ದು, ಈ ಸಂದರ್ಭದಲ್ಲಿ ಆಟಗಾರರು ಒಬ್ಬರನ್ನೊಬ್ಬರು ಹಗ್ ಮಾಡಿಕೊಳ್ಳುವ ದೃಶ್ಯಾವಳಿಗಳು ಕಂಡು ಬಂದಿವೆ. ಇನ್ನು ಸಂದರ್ಭದಲ್ಲಿ ರವಿಚಂದ್ರನ್ ಅಶ್ವಿನ್, 7 ವಿಕೆಟ್ ಕಬಳಿಸಿದ ಶಮಿ ಕೈಗೆ ಮುತ್ತಿಕ್ಕಿದ ದೃಶ್ಯಾವಳಿಗಳು ಕಂಡು ಬಂದಿದ್ದು, ಆ ಕ್ಷಣದ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಸೆಮೀಸ್‌ಗೆ ಪಿಚ್ ಬದಲಾವಣೆ: ವಿವಾದ!
ಮುಂಬೈ: ಭಾರತ- ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯ ‘ಪಿಚ್ ಬದಲಾವಣೆ’ ವಿವಾದಕ್ಕೆ ಗುರಿಯಾಗಿದೆ. ಪಂದ್ಯಕ್ಕೆ ಈಗಾಗಲೇ ಬಳಕೆಯಾಗಿದ್ದ ಪಿಚ್ ಆಯ್ಕೆ ಮಾಡಿದ್ದು, ಭಾರತಕ್ಕೆ ಅನುಕೂಲವಾಗಲೆಂದು ಈ ರೀತಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೊದಲು ಸೆಮೀಸ್‌ಗೆ ಟೂರ್ನಿಯಲ್ಲಿ ಈ ವರೆಗೂ ಬಳಕೆಯಾಗದ ಪಿಚ್ ಬಳಸುವುದು ನಿಗದಿಯಾಗಿತ್ತು. ಆದರೆ ಲೀಗ್ ಹಂತದ 2 ಪಂದ್ಯಗಳಿಗೆ ಬಳಕೆಯಾಗಿದ್ದ ಪಿಚ್ ಅನ್ನು ಸೆಮೀಸ್‌ಗೆ ಬಳಸಲಾಗಿದೆ.
ಈ ಪಿಚ್‌ನಲ್ಲಿ ಟೂರ್ನಿಯಲ್ಲಿ ಆಡಿಸಲಾದ 2 ಪಂದ್ಯಗಳಲ್ಲಿ ತಂಡಗಳು ಬೃಹತ್ ಅಂತರದ ಜಯಗಳಿಸಿದ್ದವು. ಈ ಸಂಬಂಧ ಐಸಿಸಿ ಪಿಚ್ ಕ್ಯುರೇಟರ್ ಆ್ಯಂಡಿ ಆಟ್ಕಿನ್ಸನ್ ಕೊನೆ ಕ್ಷಣದ ಪಿಚ್ ಬದಲಾವಣೆ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ ವಿವಾದದ ಬಗ್ಗೆ ಐಸಿಸಿ ಸ್ಪಷ್ಟನೆ ನೀಡಿದ್ದು, ಸ್ಥಳೀಯ ಕ್ಯುರೇಟರ್ ಸಲಹೆ ಮೇರೆಗೆ ಬದಲಿಸಲಾಗಿದೆ ಎಂದಿದೆ. ಪಿಚ್ ಬದಲಿಸುವುದು ಹೊಸದೇನಲ್ಲ ಎಂದಿದೆ.