Asianet Suvarna News Asianet Suvarna News

ICC rankings: ಎರಡನೇ ಸ್ಥಾನಕ್ಕೆ ಕುಸಿದ ವೇಗಿ ಮೊಹಮ್ಮದ್ ಸಿರಾಜ್

ಜಸ್‌ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್‌ ಯಾದವ್‌ ಕ್ರಮವಾಗಿ 4 ಮತ್ತು 5ನೇ ಸ್ಥಾನಗಳಲ್ಲಿದ್ದಾರೆ. ಇದೇ ವೇಳೆ ಬ್ಯಾಟರ್‌ಗಳ ಪಟ್ಟಿಯಲ್ಲಿ ಶುಭ್‌ಮನ್‌ ಗಿಲ್‌ ನಂ.1 ಸ್ಥಾನದಲ್ಲಿ ಮುಂದುವರಿದಿದ್ದು, ವಿರಾಟ್‌ ಕೊಹ್ಲಿ 4ನೇ, ರೋಹಿತ್‌ ಶರ್ಮಾ 5ನೇ ಸ್ಥಾನದಲ್ಲಿದ್ದಾರೆ.

ICC rankings Mohammed Siraj replaced as No 1 ODI bowler by South Africa star Keshav Maharaj kvn
Author
First Published Nov 16, 2023, 3:06 PM IST

ದುಬೈ(ನ.16): ಕಳೆದ ವಾರವಷ್ಟೇ ಐಸಿಸಿ ಏಕದಿನ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದ ಭಾರತದ ತಾರಾ ವೇಗಿ ಮೊಹಮದ್‌ ಸಿರಾಜ್‌, ನಂ.1 ಸ್ಥಾನ ಕಳೆದುಕೊಂಡಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಸಿರಾಜ್‌ 2ನೇ ಸ್ಥಾನಕ್ಕೆ ಕುಸಿದಿದ್ದು, ದ.ಆಫ್ರಿಕಾದ ಕೇಶವ್‌ ಮಹಾರಾಜ್‌ ಅಗ್ರಸ್ಥಾನಕ್ಕೇರಿದ್ದಾರೆ. 

ಜಸ್‌ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್‌ ಯಾದವ್‌ ಕ್ರಮವಾಗಿ 4 ಮತ್ತು 5ನೇ ಸ್ಥಾನಗಳಲ್ಲಿದ್ದಾರೆ. ಇದೇ ವೇಳೆ ಬ್ಯಾಟರ್‌ಗಳ ಪಟ್ಟಿಯಲ್ಲಿ ಶುಭ್‌ಮನ್‌ ಗಿಲ್‌ ನಂ.1 ಸ್ಥಾನದಲ್ಲಿ ಮುಂದುವರಿದಿದ್ದು, ವಿರಾಟ್‌ ಕೊಹ್ಲಿ 4ನೇ, ರೋಹಿತ್‌ ಶರ್ಮಾ 5ನೇ ಸ್ಥಾನದಲ್ಲಿದ್ದಾರೆ.

ಹಾಟ್‌ಸ್ಟಾರಲ್ಲಿ ಏಕಕಾಲಕ್ಕೆ 5.1 ಕೋಟಿ ಮಂದಿ ವೀಕ್ಷಣೆ!

ಮುಂಬೈ: ಡಿಜಿಟಲ್‌ ಲೋಕದಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು, ಬುಧವಾರ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಪಂದ್ಯದ ವೇಳೆ ಏಕಕಾಲಕ್ಕೆ 5.1 ಕೋಟಿ ಮಂದಿ ವೀಕ್ಷಣೆ ಮಾಡಿದರು. ಇದು ಹೊಸ ದಾಖಲೆ. ಕಳೆದ ತಿಂಗಳು ಭಾರತ-ಪಾಕಿಸ್ತಾನ ಪಂದ್ಯವನ್ನು ಏಕಕಾಲಕ್ಕೆ 3.5 ಕೋಟಿ ಮಂದಿ ವೀಕ್ಷಿಸಿದ್ದು ದಾಖಲೆ ಎನಿಸಿತ್ತು. ಬಳಿಕ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಲೀಗ್ ಹಂತದ ಪಂದ್ಯದ ವೇಳೆ ಬರೋಬ್ಬರಿ 4.3 ಕೋಟಿ ಮಂದಿ ಏಕಕಾಲದಲ್ಲಿ ಪಂದ್ಯ ವೀಕ್ಷಿಸಿದ್ದರು. ಆ ದಾಖಲೆ ಬುಧವಾರ ಭಾರತದ ಬ್ಯಾಟಿಂಗ್‌ನ ಕೊನೆ ಓವರ್‌ ವೇಳೆ ಪತನವಾಗಿದೆ.

ICC World Cup 2023: 'ಚೋಕರ್ಸ್‌' ಹಣೆಪಟ್ಟಿ ಕಳಚಿ ಫೈನಲ್‌ಗೇರುತ್ತಾ ಆಫ್ರಿಕಾ?

ಕೊಹ್ಲಿ ಸೆಂಚುರಿಗಳ ಹಾಫ್‌ ಸೆಂಚುರಿ!

ಕೆಲ ವರ್ಷಗಳ ಹಿಂದೆ ಸಚಿನ್‌ ತೆಂಡುಲ್ಕರ್‌ ತಮ್ಮ ದಾಖಲೆಗಳನ್ನು ವಿರಾಟ್‌ ಕೊಹ್ಲಿ ಅಥವಾ ರೋಹಿತ್‌ ಶರ್ಮಾ ಮುರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ‘ಕ್ರಿಕೆಟ್‌ ದೇವರ’ ಭವಿಷ್ಯ ಸುಳ್ಳಾದೀತೆ? ಏಕದಿನ ಕ್ರಿಕೆಟ್‌ನಲ್ಲಿ 50 ಶತಕಗಳ ಮೈಲಿಗಲ್ಲನ್ನು ವಿರಾಟ್‌ ಕೊಹ್ಲಿ ಸ್ಥಾಪಿಸಿದ್ದಾರೆ. ತೆಂಡುಲ್ಕರ್‌ರ 49 ಶತಕಗಳ ದಾಖಲೆಯನ್ನು ಅವರ ಎದುರೇ ಮುರಿದು, ಆ ದಾಖಲೆಯನ್ನು ಅವರಿಗೇ ಅರ್ಪಿಸಿದ್ದಾರೆ.

ಸೆಮೀಸ್‌ನಲ್ಲಿ ಶಮಿಗೆ 7 ವಿಕೆಟ್..! ವಿಶ್ವಕಪ್ ಪಂದ್ಯಕ್ಕೂ ಒಂದು ದಿನ ಮೊದಲೇ ಕನಸು ಕಂಡ ನೆಟ್ಟಿಗ..!

‘ದೇವರಿಗೆ’ ನಮನ!

ಕೊಹ್ಲಿ ತಮ್ಮ 50 ಶತಕಗಳ ಮೈಲಿಗಲ್ಲನ್ನು ಸಚಿನ್‌ ತೆಂಡುಲ್ಕರ್‌ರ ತವರು ವಾಂಖೇಡೆ ಕ್ರೀಡಾಂಗಣದಲ್ಲಿ, ಸ್ವತಃ ಸಚಿನ್‌ರ ಎದುರೇ ಸಾಧಿಸಿದ್ದು ವಿಶೇಷ. ಸೆಂಚುರಿ ಪೂರ್ತಿಗೊಳಿಸಿದ ಬಳಿಕ ಕೊಹ್ಲಿ, ಕ್ರೀಡಾಂಗಣದ ಸ್ಟ್ಯಾಂಡ್‌ನಲ್ಲಿದ್ದ ಸಚಿನ್‌ಗೆ ತಲೆಬಾಗಿ ನಮಿಸಿದರು. ಸಚಿನ್‌ ಕೂಡಾ ಎದ್ದುನಿಂತು ಚಪ್ಪಾಳೆ ಮೂಲಕ ಕೊಹ್ಲಿಯನ್ನು ಅಭಿನಂದಿಸಿದರು. ಇನ್ನಿಂಗ್ಸ್‌ ಮುಕ್ತಾಯಗೊಂಡ ಬಳಿಕ ಮೈದಾನಕ್ಕೆ ಆಗಮಿಸಿ ಕೊಹ್ಲಿಯನ್ನು ಆಲಂಗಿಸಿ ಮತ್ತೊಮ್ಮೆ ಅಭಿನಂದನೆ ಸಲ್ಲಿಸಿ

Follow Us:
Download App:
  • android
  • ios