ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ, ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯಕ್ಕಾಗಿ ಅಸ್ಸಾಂನ ಗುವಾಹಟಿ ತಲುಪಿದೆ. ಶನಿವಾರ ಅಭ್ಯಾಸ ಪಂದ್ಯ ನಡೆಯಲಿದೆ. ಭಾರತ ತನ್ನ 2ನೇ ಅಭ್ಯಾಸ ಪಂದ್ಯವನ್ನು ಅಕ್ಟೋಬರ್ 3ರಂದು ನೆದರ್‌ಲೆಂಡ್ಸ್‌ ವಿರುದ್ಧ ತಿರುವನಂತಪುರಂನಲ್ಲಿ ಆಡಲಿದೆ.

ನವದೆಹಲಿ(ಸೆ.29): ಐಸಿಸಿ ಏಕದಿನ ವಿಶ್ವಕಪ್‌ಗೆ ದಿನಗಣನೆ ಆರಂಭಗೊಂಡಿದ್ದು, ಶುಕ್ರವಾರದಿಂದ ಅಭ್ಯಾಸ ಪಂದ್ಯಗಳು ಆರಂಭಗೊಳ್ಳಲಿವೆ. ಶುಕ್ರವಾರ 3 ಪಂದ್ಯಗಳು ನಡೆಯಲಿದ್ದು, ಗುವಾಹಟಿಯಲ್ಲಿ ಬಾಂಗ್ಲಾದೇಶ-ಶ್ರೀಲಂಕಾ, ತಿರುವನಂತಪುರಂನಲ್ಲಿ ಅಫ್ಘಾನಿಸ್ತಾನ-ದಕ್ಷಿಣ ಆಫ್ರಿಕಾ, ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್‌-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಎಲ್ಲಾ ಪಂದ್ಯಗಳು ಮಧ್ಯಾಹ್ನ 2ಕ್ಕೆ ಆರಂಭಗೊಳ್ಳಲಿವೆ.

ನಾಳೆ ಇಂಗ್ಲೆಂಡ್‌ ವಿರುದ್ಧ ಅಭ್ಯಾಸ

ಗುವಾಹಟಿ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ, ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯಕ್ಕಾಗಿ ಅಸ್ಸಾಂನ ಗುವಾಹಟಿ ತಲುಪಿದೆ. ಶನಿವಾರ ಅಭ್ಯಾಸ ಪಂದ್ಯ ನಡೆಯಲಿದೆ. ಭಾರತ ತನ್ನ 2ನೇ ಅಭ್ಯಾಸ ಪಂದ್ಯವನ್ನು ಅಕ್ಟೋಬರ್ 3ರಂದು ನೆದರ್‌ಲೆಂಡ್ಸ್‌ ವಿರುದ್ಧ ತಿರುವನಂತಪುರಂನಲ್ಲಿ ಆಡಲಿದೆ.

Danushka Gunathilaka ಲೈಂಗಿಕ ಕಿರುಕುಳ ಕೇಸ್‌ ಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ನಿರ್ದೋಷಿ

ವಿಶ್ವಕಪ್‌ಗೆ ಭಾರತ ತಂಡ: ರೋಹಿತ್‌ ಶರ್ಮಾ(ನಾಯಕ), ಹಾರ್ದಿಕ್‌ ಪಾಂಡ್ಯ(ಉಪನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಸಿರಾಜ್‌, ಕುಲ್ದೀಪ್‌ ಯಾದವ್‌, ಮೊಹಮದ್‌ ಶಮಿ, ಆರ್‌.ಅಶ್ವಿನ್‌, ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌.

ಮಧ್ಯಮ ಕ್ರಮಾಂಕದಲ್ಲಿ ಆಡಲ್ಲ ಎಂದ ತಮೀಮ್‌ ಟೀಂನಿಂದ ಔಟ್‌!

ಢಾಕಾ: ಬಾಂಗ್ಲಾದೇಶ ಕ್ರಿಕೆಟ್‌ ತಂಡದಲ್ಲಿ ಹೈಡ್ರಾಮಾಗಳು ಹೊಸದಲ್ಲ. ಇದೀಗ ವಿಶ್ವಕಪ್‌ಗೂ ಮುನ್ನ ತಂಡದೊಳಗೆ ಮತ್ತೊಂದು ದೊಡ್ಡ ಮಟ್ಟದ ಕಿತ್ತಾಟ ನಡೆದಿದೆ. ವಿಶ್ವಕಪ್‌ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಒಪ್ಪದ ಮಾಜಿ ನಾಯಕ, ಆರಂಭಿಕ ಬ್ಯಾಟರ್‌ ತಮೀಮ್‌ ಇಕ್ಬಾಲ್‌ರನ್ನು ಬಾಂಗ್ಲಾ ಕ್ರಿಕೆಟ್‌ ಮಂಡಳಿ(ಬಿಸಿಬಿ) ತಂಡದಿಂದಲೇ ಕೈಬಿಟ್ಟಿದೆ. 

ಭಾರತಕ್ಕೆ ಹೊರಡುವ ಮುನ್ನ ಬಿಸಿಬಿ ತಮೀಮ್‌ ಹಾಗೂ ಶಕೀಬ್‌ರ ನಡುವೆ ಸಂಧಾನ ಸಭೆಯೊಂದನ್ನು ಕರೆದಿತ್ತು. ಈ ಸಭೆಯಲ್ಲಿ ತಮೀಮ್‌ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಲು ಶಕೀಬ್‌ ಕೇಳಿದರು ಎನ್ನಲಾಗಿದ್ದು, ಅವರು ಒಪ್ಪದ್ದಕ್ಕೆ ಶಕೀಬ್‌ ಸಭೆಯಿಂದ ಹೊರ ನಡೆದರು ಎಂದು ತಿಳಿದುಬಂದಿದೆ. ಬಳಿಕ ಸ್ಥಳೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಶಕೀಬ್‌, ತಮೀಮ್‌ರದ್ದು ಹುಡುಗಾಟಿಕೆಯ ಸ್ವಭಾವ ಎಂದಿದ್ದಾರೆ. ‘ರೋಹಿತ್‌ ಶರ್ಮಾರಂತಹ ಆಟಗಾರ ತಮ್ಮ ವೃತ್ತಿಬದುಕನ್ನು 7ನೇ ಕ್ರಮಾಂಕದಲ್ಲಿ ಆರಂಭಿಸಿ ಎಷ್ಟೋ ವರ್ಷಗಳ ಬಳಿಕ ಆರಂಭಿಕನಾದರು. ಆದರೆ ತಂಡದ ಹಿತದೃಷ್ಟಿಯನ್ನು ಪರಿಗಣಿಸಿ ಕೆಲ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುವಂತೆ ಕೇಳಿಕೊಂಡರೂ ತಮೀಮ್‌ ಕೇಳುತ್ತಿಲ್ಲ. ಇದು ಅವರೆಷ್ಟು ಸ್ವಾರ್ಥಿ ಎನ್ನುವುದನ್ನು ತೋರಿಸುತ್ತದೆ’ ಎಂದಿದ್ದಾರೆ.

2011ರ ವಿಶ್ವಕಪ್ ಗೆಲುವಿಗೆ ಧೋನಿ ಪಠಿಸಿದ್ದ ಮಂತ್ರ ಬಹಿರಂಗ ಪಡಿಸಿದ ಸೆಹ್ವಾಗ್!

ತಮೀಮ್‌ ಕೂಡ ಮಾಧ್ಯಮಗಳ ಜೊತೆ ಮಾತನಾಡಿದ್ದು, ‘ನಿವೃತ್ತಿ ಘೋಷಿಸಿದ್ದ ನನ್ನನ್ನು ಮತ್ತೆ ತಂಡಕ್ಕೆ ಕರೆತರಲಾಯಿತು. ನಾನು ನನ್ನ ಇಷ್ಟು ವರ್ಷಗಳ ಕ್ರಿಕೆಟ್‌ ಬದುಕಿನಲ್ಲಿ ಎಂದಿಗೂ ಆರಂಭಿಕನ ಸ್ಥಾನ ಬಿಟ್ಟು ಬೇರೆ ಕ್ರಮಾಂಕಗಳಲ್ಲಿ ಆಡಿಲ್ಲ. 3ನೇ ಕ್ರಮಾಂಕದಲ್ಲೇ ಆಡಿ ಅಭ್ಯಾಸವಿಲ್ಲ. ನಾನು ವಿಶ್ವಕಪ್‌ ತಂಡದಲ್ಲಿ ಇರಬಾರದೆಂದೇ ನನ್ನ ಬ್ಯಾಟಿಂಗ್ ಕ್ರಮಾಂಕ ಬದಲಿಸುವ ತಂತ್ರ ಹೂಡಲಾಗಿದೆ’ ಎಂದು ಕಿಡಿಕಾರಿದ್ದಾರೆ.