Asianet Suvarna News Asianet Suvarna News

2011ರ ವಿಶ್ವಕಪ್ ಗೆಲುವಿಗೆ ಧೋನಿ ಪಠಿಸಿದ್ದ ಮಂತ್ರ ಬಹಿರಂಗ ಪಡಿಸಿದ ಸೆಹ್ವಾಗ್!

ಟೀಮ್‌ ಇಂಡಿಯಾ ವಿಶ್ವಕಪ್‌ ಆಡಲು ರೆಡಿಯಾಗುತ್ತಿದೆ. ಆಸೀಸ್‌ ವಿರುದ್ಧ ಸರಣಿ ಗೆದ್ದ ಸಂಭ್ರಮದಲ್ಲಿರುವ ಟೀಮ್‌ ಇಂಡಿಯಾಕ್ಕೆ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್‌, ಸ್ಪೂರ್ತಿದಾಯಕ ಮಾತುಗಳನ್ನು ಆಡಿದ್ದಾರೆ. 2011ರ ವಿಶ್ವಕಪ್‌ ವೇಳೆ ಧೋನಿ ಆಡಿದ ಮಾತನ್ನು ನೆನಪಿಸಿದ್ದಾರೆ.

former India opener Virender Sehwag epic 2011 motivation for Rohit and co for 2023 ODI World cup san
Author
First Published Sep 28, 2023, 5:46 PM IST

ಬೆಂಗಳೂರು (ಸೆ.28): ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1 ರಿಂದ ಗೆಲುವು ಕಂಡಿದೆ. ಬುಧವಾರ ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್‌ ಇಂಡಿಯಾ 66 ರನ್‌ಗಳ ಸೋಲು ಕಂಡಿದೆ. ಆದರೆ, ವಿಶ್ವಕಪ್‌ ಟೂರ್ನಿಗೆ ಅಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಸಾಧಿಸಿದ ವಿಶ್ವಾಸದೊಂದಿಗೆ ಆಟವಾಡಲಿದೆ. ವಿಶ್ವಕಪ್‌ ಆಡುವ ಮುನ್ನ ಟೀಮ್ ಇಂಡಿಯಾ ಇಂಗ್ಲೆಂಡ್‌ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಸೆಪ್ಟೆಂಬರ್‌ 30 ರಂದು ಈ ಪಂದ್ಯ ನಡೆಯಲಿದೆ. ಆ ಬಳಿಕ ತವರಿನಲ್ಲಿಯೇ ನಡೆಯಲಿರುವ ಪ್ರಮುಖ ಟೂರ್ನಿಗಾಗಿ ಟೀಮ್‌ ಇಂಡಿಯಾ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ ತಂಡಕ್ಕೆ ಅಮೂಲ್ಯ ಸಲಹೆ ನೀಡಿದ್ದಾರೆ. ಸೆಹ್ವಾಗ್ 2011 ರಲ್ಲಿ ಎಂಎಸ್‌ ಧೋನಿಯ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಇಡೀ ಟೂರ್ನಿಯಲ್ಲಿ ವೀರೇಂದ್ರ ಸೆಹ್ವಾಗ್‌ ಅವರ ಆಟ ತಂಡಕ್ಕೆ ನಿರ್ಣಾಯಕವಾಗಿತ್ತು. ಟೂರ್ನಿಯ ಉದ್ಧಕ್ಕೂ ಪ್ರಮುಖ ಪಂದ್ಯಗಳಲ್‌ಲಿ ಸೆಹ್ವಾಗ್‌ ತಂಡಕ್ಕೆ ಸ್ಪೋಟಕ ಆರಂಭವನ್ನು ನೀಡುತ್ತಿದ್ದರು. ಢಾಕಾದಲ್ಲಿ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅವರು 175 ರನ್‌ ಸಿಡಿಸಿ ಮಿಂಚಿದ್ದರು. ಇದೇ ವೇಳೆ 2011ರ ವಿಶ್ವಕಪ್‌ ವೇಳೆ ತಂಡದ ಸ್ಫೂರ್ತಿದಾಯಕ ಪ್ರಯಾಣವನ್ನು ಅವರು ನೆನಪಿಸಿಕೊಂಡಿದ್ದಾರೆ.

2011ರ ವಿಶ್ವಕಪ್‌ನಲ್ಲೂ ಆಡಿ ಈ ಬಾರಿಯ ವಿಶ್ವಕಪ್‌ನಲ್ಲೂ ಇರುವ ಏಕೈಕ ಆಟಗಾರ ವಿರಾಟ್‌ ಕೊಹ್ಲಿ. ಅವರ ಹೊರತಾಗಿ ಮತ್ಯಾವ ಆಟಗಾರ ಕೂಡ 2011ರ ವಿಶ್ವಕಪ್‌ ತಂಡದಲ್ಲಿ ಇದ್ದಿರಲಿಲ್ಲ. ಈ ನಡುವೆ 2011ರ ವಿಶ್ವಕಪ್‌ ಅಭಿಯಾನದ ನೆನಪುಗಳನ್ನು ಸೆಹ್ವಾಗ್‌ ಹಂಚಿಕೊಂಡು ಹಾಲಿ ತಂಡಕ್ಕೆ ಸ್ಪೂರ್ತಿ ತುಂಬಿದ್ದಾರೆ. 'ಟೀಮ್‌ ಮೀಟಿಂಗ್‌ ಆದ ಬಳಿಕ ನಾವು ಮಾಡಿದ ಮೊದಲ ನಿರ್ಧಾರ ಏನೆಂದರೆ, ಯಾವುದೇ ಕಾರಣಕ್ಕೂ ನ್ಯೂಸ್‌ ಪೇಪರ್‌ಗಳು ಓದಬಾರದು ಎಂದು ತೀರ್ಮಾನಿಸಿದೆವು. ಹೊರಗಡೆಯ ಯಾವುದೇ ಗದ್ದಲಗಳು ನಮ್ಮ ಕಿವಿಗೆ ಬೀಳಬಾರದು.
ಇದು ನಮ್ಮ ಮೇಲೆ ಅತಿಯಾದ ಒತ್ತಡಕ್ಕೆ ಕಾರಣವಾಗುತ್ತದೆ ಎನ್ನುವ ಕಾರಣಕ್ಕೆ ಇವುಗಳಿಂದ ದೂರ ಇದ್ದೆವು. ಇದೊಂದು ನಿರ್ಧಾರವನ್ನು ಬಹುತೇಕ ತಂಡದಲ್ಲಿರುವ ಎಲ್ಲರೂ ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದರು. ನಾವು ಒಟ್ಟಾಗಿ ಇದ್ದೆವು. ಟೀಮ್‌ ಅನ್ನು ಒಗ್ಗಟ್ಟಾಗಿಸುವ ವ್ಯಾಯಾಮಗಳನ್ನು ಆನಂದಿಸುತ್ತಿದ್ದೆವು. ಇಂಥವುಗಳನ್ನು ಮಾಡುತ್ತಿದ್ದರೆ, ದೀರ್ಘ ಟೂರ್ನಿಯ ಒತ್ತಡಗಳು ನಮ್ಮಲ್ಲಿ ಮರೆಯಾಗುತ್ತದೆ. ಕೋಚ್‌ ಗ್ಯಾರಿ ಕಸ್ಟರ್ನ್‌ ಹಾಗೂ ಎಂಎಸ್‌ ಧೋನಿ ಇಡೀ ತಂಡ ಒಗ್ಗಟ್ಟಾಗಿರುವ ನಿಟ್ಟಿನಲ್ಲಿ ಬಹಳ ಕೆಲಸ ಮಾಡಿದ್ದರು' ಎಂದು ಸೆಹ್ವಾಗ್‌ ಹೇಳಿದ್ದಾರೆ.

ಪಂದ್ಯಕ್ಕೂ ಮುನ್ನ ಹಾಗೂ ಪಂದ್ಯವಾದ ಬಳಿಕ ನಾವು ಜೊತೆಯಲ್ಲೇ ಕೆಲ ಸಮಯ ಕಳೆಯುತ್ತಿದ್ದೆವು. ಈ ಹಂತದಲ್ಲಿ ಹೆಚ್ಚಾಗಿ ಕ್ರಿಕೆಟ್‌ ಬಗ್ಗೆಯೇ ಮಾತನಾಡುತ್ತಿದ್ದೆವು. ಊಟದ ಟೇಬಲ್‌ನಲ್ಲೂ ಕ್ರಿಕೆಟ್‌ನ ತಂತ್ರಗಳೇ ನಮ್ಮ ಟಾಪಿಕ್‌ ಆಗಿರುತ್ತಿದ್ದವು. ನಾನು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೆ. ಇದೇ ವಿಶ್ವಕಪ್‌ ಗೆಲುವಿಗೆ ಬಹುದೊಡ್ಡ ಕಾರಣ ಎನಿಸಿತ್ತು. ನಮಗೂ ಕೂಡ ಒತ್ತಡವಿತ್ತು. ನಾವು ವಿಮಾನದಲ್ಲಿ ಹೋಗುವಾಗ, ಸಿಐಎಸ್‌ಎಫ್‌ ಅಧಿಕಾರಿಗಳು, ಹೋಟೆಲ್‌ನಲ್ಲಿ ಅಲ್ಲಿನ ಸಿಬ್ಬಂದಿ, ಮ್ಯಾನೇಜರ್‌, ವೇಟರ್‌ ಎಲ್ಲರೂ ಕೂಡ ನೀವು ವಿಶ್ವಕಪ್‌ ಗೆಲ್ಲಬೇಕು ಎನ್ನುತ್ತಿದ್ದರು. ಆದರೆ, ನಮ್ಮ ಕ್ಯಾಪ್ಟನ್‌ ಎಂಎಸ್‌ ಧೋನಿ ಮಾತ್ರ ಇಡೀ ಟೂರ್ನಿಯಲ್ಲಿ ಒಂದೇ ಲೈನ್‌ ಅನ್ನು ಹೇಳುತ್ತಿದ್ದರು, ಫೋಕಸ್‌ ಆನ್‌ ದ ಪ್ರೊಸೆಸ್‌ (ನಿಮ್ಮ ಪ್ರೊಸೆಸ್‌ನ ಬಗ್ಗೆ ಗಮನವಿರಲಿ). ನಮ್ಮ ಪ್ರೊಸೆಸ್‌ಗಳು ಉತ್ತಮವಾಗಿದ್ದದು. ಅದಕ್ಕಾಗಿ ಗೆಲುವು ಸಾಧಿಸಿದೆವು' ಎಂದು ಟೀಮ್‌ ಇಂಡಿಯಾ ಮಾಜಿ ಆಟಗಾರ ಹೇಳಿದ್ದಾರೆ.

'ರಿಷಬ್‌ ಪಂತ್‌ ಹೆಗಲ ಮೇಲಿದ್ದ ಕೈ ಯಾರದ್ದು?' 4 ವರ್ಷಗಳ ಬಳಿಕ ಬಹಿರಂಗವಾಯ್ತು ಚಿತ್ರದ ರಹಸ್ಯ!

ವಿಶ್ವಕಪ್‌ಗೆ ಮುನ್ನ ಭಾರತ ತನ್ನ ಅಂತಿಮ ಏಕದಿನ ಪಂದ್ಯದಲ್ಲಿ ಸೋಲು ಕಂಡಿರಬಹುದು. ಆದರೆ ರೋಹಿತ್ ಶರ್ಮಾ ಪ್ರಮುಖ ಪಂದ್ಯಾವಳಿಯ ತಂಡದ ಸಿದ್ಧತೆಗಳ ಬಗ್ಗೆ ಸಕಾರಾತ್ಮಕವಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆಲ್ಲುವ ಮುನ್ನ ಏಷ್ಯಾಕಪ್‌ನಲ್ಲೂ ತಂಡ ಗೆಲುವು ಕಂಡಿತ್ತು.

'ರೋಹಿತ್‌ ಶರ್ಮ ತರ ಇರ್ಬೇಕು..' ವಿಶ್ವಕಪ್‌ಗೂ ಮುನ್ನ ಶುರುವಾಯ್ತು ಬಾಂಗ್ಲಾ ಟೀಮ್‌ನಲ್ಲಿ ಕಿತ್ತಾಟ!

Follow Us:
Download App:
  • android
  • ios