ಪಿಚ್ ಬಳಿಕ ಟಾಸ್ ವಿವಾದ, ನಾಯಕ ರೋಹಿತ್ ಮೇಲೆ ಆರೋಪ ಹೊರಿಸಿದ ಪಾಕಿಸ್ತಾನ X ಕ್ರಿಕೆಟರ್ಸ್!
ಸಮಿಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ಐಸಿಸಿ ವಿಶ್ವಕಪ್ ಫೈನಲ್ ಪ್ರವೇಶಿಸಿದೆ.ಸತತ 10 ಪಂದ್ಯ ಗೆದ್ದು ಫೈನಲ್ ಲಗ್ಗೆ ಇಟ್ಟ ಭಾರತದ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಲಾಗುತ್ತಿದೆ. ಸೆಮೀಸ್ ಪಂದ್ಯದ ವೇಳೆ ಪಿಚ್ ಬದಲಾವಣೆ ಷಡ್ಯಂತ್ರ ಮಾಡಲಾಗಿತ್ತು. ಇದೀಗ ನಾಯಕ ರೋಹಿತ್ ಶರ್ಮಾ ಮೇಲೆ ಟಾಸ್ ವಿವಾದ ಹೊರಿಸಲಾಗಿದೆ. ಪಾಕಿಸ್ತಾನ ಮಾಜಿ ಕ್ರಿಕೆಟಿಗರು, ಕೆಲ ಅಭಿಮಾನಿಗಳು ಗಂಭೀರ ಆರೋಪ ಮಾಡಿದ್ದಾರೆ.
ಮುಂಬೈ(ನ.16) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿದ ಇತಿಹಾಸ ರಚಿಸಿದೆ. ಅದ್ಭುತ ಪ್ರದರ್ಶನದ ಮೂಲಕ ಪ್ರತಿ ಪಂದ್ಯದಲ್ಲಿ ಭಾರತ ಎದುರಾಳಿಗಳ ಮೇಲೆ ಸವಾರಿ ಮಾಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅದ್ಭುತ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ದಾಳಿ ಮೂಲಕ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ. ಭಾರತದ ಯಶಸ್ಸು ಹಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೇಲಿಂದ ಮೇಲೆ ಆರೋಪಗಳು ಎದುರಾಗುತ್ತಿದೆ. ಸೆಮಿಫೈನಲ್ ಪಂದ್ಯದ ವೇಳೆ ಭಾರತ ತಂಡಕ್ಕೆ ಪೂರಕವಾಗಿ ಪಿಚ್ ಬದಲಿಸಲಾಗಿದೆ ಅನ್ನೋ ಆರೋಪ ಮಾಡಲಾಗಿತ್ತು. ಇದೀಗ ಟಾಸ್ ವಿವಾದ ಶುರುವಾಗಿದೆ. ರೋಹಿತ್ ಶರ್ಮಾ ಹಾಗೂ ಬಿಸಿಸಿಐ ಟಾಸ್ ಷಡ್ಯಂತ್ರ ಮಾಡಿ ಪ್ರತಿ ಪಂದ್ಯದಲ್ಲಿ ಟಾಸ್ ಗೆಲ್ಲುವಂತೆ ಮಾಡಲಾಗಿದೆ ಅನ್ನೋ ಆರೋಪವನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಮಾಡಿದ್ದಾರೆ. ಇದೇ ಆರೋಪವನ್ನು ಪಾಕಿಸ್ತಾನದ ಹಲವು ಟ್ವಿಟರ್ ಖಾತೆಯಲ್ಲೂ ಚರ್ಚೆಯಾಗುತ್ತಿದೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಿಕಂದರ್ ಭಕ್ತ್ ಹೊಸ ಆರೋಪ ಮಾಡಿದ್ದಾರೆ. ಬಿಸಿಸಿಐ ಹಾಗೂ ರೋಹಿತ್ ಶರ್ಮಾ ಹಿಂದಿನ ಟಾಸ್ ಷಡ್ಯಂತ್ರವೇ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಭಾರತದ ಟಾಸ್ ವಿಡಿಯೋಗಳನ್ನು ನೀಡಲಾಗಿದೆ. ನಾಯಕ ರೋಹಿತ್ ಶರ್ಮಾ ಉದ್ದೇಶಪೂರ್ವಕವಾಗಿ ಟಾಸ್ ನಾಣ್ಯವನ್ನು ನಿಗದಿತ ಸ್ಥಳಕ್ಕಿಂತ ದೂರ ಚಿಮ್ಮಿಸುತ್ತಾರೆ. ಇದರಿಂದ ಎದುರಾಳಿ ನಾಯಕ ಅಷ್ಟು ದೂರ ಹೋಗಿ ಪರಿಶೀಲಿಸುವುದಿಲ್ಲ. ಇತ್ತ ಮ್ಯಾಚ್ ರೆಫ್ರಿ ದೂರದಿಂದಲೇ ರೋಹಿತ್ ಶರ್ಮಾ ಟಾಸ್ ಗೆದ್ದಿದ್ದಾರೆ ಎನ್ನುತ್ತಾರೆ. ಈ ಮೂಲಕ ರೋಹಿತ್ ಗೆದ್ದರೋ ಬಿಟ್ಟರೋ ಅನ್ನೋದು ರೆಫ್ರಿಗೆ ಬಿಟ್ಟು ಮತ್ಯಾರಿಗೂ ಗೊತ್ತಾಗುವುದಿಲ್ಲ. ಈ ಮೂಲಕ ಬಿಸಿಸಿಐ ಹಾಗೂ ರೋಹಿತ್ ಶರ್ಮಾ ಟಾಸ್ ಷಡ್ಯಂತ್ರ ನಡೆಸಲಾಗಿದೆ ಅನ್ನೋ ಆರೋಪವನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಿಕಂದರ್ ಭಕ್ತ್ ಮಾಡಿದ್ದಾರೆ.
ಕೊಹ್ಲಿ-ಅಯ್ಯರ್ ಶತಕ ಸಂಭ್ರಮ ನಡುವೆ ವಿವಾದ,ಅಂತಿಮ ಕ್ಷಣದಲ್ಲಿ ಪಿಚ್ ಬದಲಿಸಿದ ಆರೋಪ!
ಪಾಕಿಸ್ತಾನದ ಖಾಸಗಿ ವಾಹಿನಿಯಲ್ಲಿನ ಕಾರ್ಯಕ್ರಮದಲ್ಲಿ ಸಿಕಂದರ್ ಭಕ್ತ್ ಈ ಆರೋಪ ಮಾಡಿದ್ದಾರೆ. ರೋಹಿತ್ ಶರ್ಮಾ ಈ ಟೂರ್ನಿಯ ಪ್ರತಿ ಪಂದ್ಯದಲ್ಲೂ ನಾಣ್ಯವನ್ನು ದೂರಕ್ಕೆ ಚಿಮ್ಮಿಸುತ್ತಾರೆ. ಇಲ್ಲೇ ಅತೀ ಷಡ್ಯಂತ್ರ ಅಡಗಿದೆ. ಟಾಸ್ ಚಿಮ್ಮಿಸಲು ಹಾಗೂ ನಾಣ್ಯ ಬೀಳುವ ಸ್ಥಳ ನಿಗದಿ ಮಾಡಲಾಗಿರುತ್ತದೆ. ಇದರಿಂದ ಎದುರಾಳಿ ನಾಯಕನಿಗೂ ಟಾಸ್ ಏನಾಗಿದೆ ಅನ್ನೋದು ಸ್ಪಷ್ಟವಾಗಲಿದೆ. ಆದರೆ ರೋಹಿತ್ ಶರ್ಮಾ ದೂರಕ್ಕೆ ನಾಣ್ಯ ಚಿಮ್ಮಿಸಿ ಎಲ್ಲರ ಕಣ್ಣು ತಪ್ಪಿಸುತ್ತಾರೆ. ಮ್ಯಾಚ್ ರೆಫ್ರಿ ಬಿಸಿಸಿಐ ಅಣತಿಯಂತೆ ರೋಹಿತ್ ಶರ್ಮಾ ಟಾಸ್ ಗೆದ್ದಿದ್ದಾರೆ ಎಂದು ಘೋಷಿಸುತ್ತಾರ ಎಂದು ಸಿಕಂದರ್ ಭಕ್ತ್ ಹೇಳಿದ್ದಾರೆ.
ಪಾಕಿಸ್ತಾನ ಟೂರ್ನಿ ಆರಂಭದಿಂದಲೇ ಇಲ್ಲ ಸಲ್ಲದ ಆರೋಪ ಮಾಡುತ್ತಲೇ ಬಂದಿದೆ. ಭಾರತದ ಅದ್ಭುತ ಬೌಲಿಂಗ್ ದಾಳಿ ಸಹಿಸದ ಪಾಕಿಸ್ತಾನ ಮಾಜಿ ಕ್ರಿಕೆಟಿಗರು, ಭಾರತದ ಬೌಲಿಂಗ್ ವೇಳೆ ಬೇರೆ ಚೆಂಡು ನೀಡುತ್ತಿದ್ದಾರೆ ಅನ್ನೋ ಆರೋಪ ಮಾಡಲಾಗಿತ್ತು. ಇನ್ನು ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಭಾರತ ತಂಡಕ್ಕೆ ಸಹಕಾರಿಯಾಗುವ ಪಿಚ್ ಆಯ್ಕೆ ಮಾಡಿಕೊಂಡಿದೆ. ಇದಕ್ಕಾಗಿ ಐಸಿಸಿ ಆಯ್ಕೆ ಮಾಡಿದ ಪಿಚ್‌ನ್ನು ಅಂತಿಮ ಕ್ಷಣದಲ್ಲಿ ಬದಲಿಸಿದೆ ಎಂದು ಆರೋಪಿಸಿತ್ತು. ಆದರೆ ಈ ಎಲ್ಲಾ ಆರೋಪಗಳಿಗೆ ಐಸಿಸಿ ಸ್ಪಷ್ಟನೆ ನೀಡುವ ಮೂಲಕ ಕಪಾಳಮೋಕ್ಷ ಮಾಡಿತ್ತು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್‌ಗೆ ವಡಾ ಪಾವ್ ಎಂದ ಬೋಗ್ಲೆ, ಸಿಡಿದೆದ್ದ ಫ್ಯಾನ್ಸ್!