Asianet Suvarna News Asianet Suvarna News

ಲಂಕಾ ವಿರುದ್ಧ ಮೋಸದಿಂದ ಗೆದ್ದಿತಾ ಪಾಕಿಸ್ತಾನ? ಬೌಂಡರಿ ಗೆರೆ ವಿವಾದಕ್ಕೆ ಗುರಿಯಾದ ಬಾಬರ್ ಸೈನ್ಯ!

ಶ್ರೀಲಂಕಾ ನೀಡಿದ 346 ರನ್ ಟಾರ್ಗೆಟ್ ಚೇಸ್ ಮಾಡಿದ ಪಾಕಿಸ್ತಾನ ವಿಶ್ವಕಪ್‌ನಲ್ಲಿ ದಾಖಲೆ ಬರೆದಿದೆ. ಆದರೆ ಪಾಕ್ ಗೆಲುವಿನ ಮೇಲೆ ಅನುಮಾನ ಕಾಡುತ್ತಿದೆ. ಬೌಂಡರಿ ಗೆರೆಯಲ್ಲಿ ಪಾಕಿಸ್ತಾನ ಮೋಸ ಮಾಡಿದೆ ಅನ್ನೋ ವಿವಾದ ಶುರುವಾಗಿದೆ. ಏನಿದು ಬೌಂಡರಿ ಗೆರೆ ವಿವಾದ?

ICC World cup 2023 Pakistan boundary line controversy erupt after Kusal mendis catch by Imam ul haq ckm
Author
First Published Oct 10, 2023, 11:12 PM IST

ಹೈದರಾಬಾದ್(ಅ.10) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 6 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಶ್ರೀಲಂಕಾ ನೀಡಿದ 346 ರನ್ ಬೃಹತ್ ಮೊತ್ತ ಚೇಸ್ ಮಾಡಿ ಗೆಲುವಿನ ಕೇಕೆ ಹಾಕಿದೆ. ಆದರೆ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಮೋಸದಿಂದ ಪಂದ್ಯ ಗೆದ್ದಿದೆ ಅನ್ನೋ ವಿವಾದ ಶುರುವಾಗಿದೆ. ಶ್ರೀಲಂಕಾ ಬ್ಯಾಟಿಂಗ್ ವೇಳೆ ಪಾಕಿಸ್ತಾನ ಬೌಂಡರಿ ಗೆರೆಯನ್ನು ಮತ್ತಷ್ಟು ದೂರ ತಳ್ಳಿದ್ದಾರೆ ಅನ್ನೋ ವಿವಾದ ಜೋರಾಗಿದೆ. ಇದಕ್ಕೆ ಕುಸಾಲ್ ಮೆಂಡಿಸ್ ಹೊಡೆತವನ್ನು ಬೌಂಡರಿ ಲೈನ್‌ನಲ್ಲಿ ಇಮಾಮ್ ಉಲ್ ಹಕ್  ಕ್ಯಾಚ್ ಹಿಡಿದ ವಿಡಿಯೋ ಈ ಮೋಸದಾಟ ಬಯಲು ಮಾಡಿದೆ.

ಶ್ರೀಲಂಕಾ ಬ್ಯಾಟಿಂಗ್ ವೇಳೆ ಪಾಕಿಸ್ತಾನ ಮೋಸ ಮಾಡಿದೆ ಅನ್ನೋ ವಿವಾದ ಜೋರಾಗುತ್ತಿದೆ. ಸೆಂಚುರಿ ಸಿಡಿಸಿ ಮಿಂಚಿದ ಕುಸಾಲ್ ಮೆಂಡಿಸ್ ಭರ್ಜರಿ ಹೊಡೆತದ ಮೂಲಕ ಸಿಕ್ಸರ್‌ಗೆ ಪ್ರಯತ್ನಿಸಿದ್ದರು. ಆದರೆ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಇಮಾಮ್ ಉಲ್ ಹಕ್ ಕ್ಯಾಚ್ ಹಿಡಿದು ಪೆವಿಲಿಯನ್ ದಾರಿ ತೋರಿಸಿದರು. ಆದರೆ ಈ ವಿಡಿಯೋ ವೈರಲ್ ಆಗಿದೆ. ಕಾರಣ ಬೌಂಡರಿ ಗೆರೆಯನ್ನು ದೂರ ತಳ್ಳಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಸರಿಯಾದ ಜಾಗದಲ್ಲಿ ಬೌಂಡರಿ ಗೆರೆ ಇದ್ದರೆ, ಕುಸಾಲ್ ಮೆಂಡಿಸ್ ಔಟಾಗುತ್ತಿರಲಿಲ್ಲ. ಬೌಂಡರಿ ಗೆರೆಯ ಮಾರ್ಕ್ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.  ಈ ಕಾರಣಕ್ಕೆ ಬೌಂಡರಿ ಗೆರೆ ವಿವಾದ ಪಾಕಿಸ್ತಾನ ತಂಡದ ಮೇಲೆ ಸುತ್ತಿಕೊಂಡಿದೆ.

'ಟೆಸ್ಟ್‌ ಕ್ರಿಕೆಟ್‌ನಂತೆ ಆಡು': ರಾಹುಲ್‌ಗೆ ವರವಾದ ಕಿಂಗ್ ಕೊಹ್ಲಿ ಸಲಹೆ..!

ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ನಿಂತಿದ್ದ ಪಾಕಿಸ್ತಾನ ಆಟಗಾರರು ಗೆರೆಯನ್ನು ದೂರ ತಳ್ಳಿದ್ದಾರೆ ಅನ್ನೋ ಆರೋಪ ಜೋರಾಗುತ್ತಿದೆ. ಆದರೆ ಇದು ಗೊತ್ತಿಲ್ಲದೇ ಆಗಿರುವ ತಪ್ಪೆ? ಮೈದಾನ ಸಿಬ್ಬಂದಿಗಳು ಬೌಂಡರಿ ಲೈನ್ ಹಾಕುವಾಗ ತಮಗೆ ಗೊತ್ತಿಲ್ಲದಂತೆ ದೂರವಿಟ್ಟಿದ್ದಾರಾ ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಪಾಕ್ ತಂಡದ ಮೇಲೆ ಟೀಕೆ ವ್ಯಕ್ತವಾಗುತ್ತಿದೆ.

 

 
 
 
 
 
 
 
 
 
 
 
 
 
 
 

A post shared by ICC (@icc)

 

ಶ್ರೀಲಂಕಾ ವಿರುದ್ದ ದಾಖಲೆ ಮೊತ್ತ ಚೇಸ್ ಮಾಡಿದ ಪಾಕಿಸ್ತಾನ ಏಕದಿನ ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದಿದೆ. ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಮೊತ್ತ ಯಶಸ್ವಿಯಾಗಿ ಚೇಸ್ ಮಾಡಿದ ದಾಖಲೆ ಪಾಕಿಸ್ತಾನದ ಪಾಲಾಗಿದೆ. ಇದುವರೆಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಚೇಸಿಂಗ್ ದಾಖಲೆ ಐರ್ಲೆಂಡ್ ಪಾಲಾಗಿತ್ತು. 2011ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಸಿಡಿಸಿದ 328ರನ್‌ನ್ನು ಐರ್ಲೆಂಡ್ ಚೇಸ್ ಮಾಡಿತ್ತು. ಇದೀಗ ಪಾಕಿಸ್ತಾನ 345 ರನ್ ಚೇಸ್ ಮಾಡಿದೆ.

World Cup 2023 ಆಸೀಸ್ ಎದುರಿನ ಗೆಲುವಿನ ಖುಷಿಯಲ್ಲಿದ್ದ ಟೀಂ ಇಂಡಿಯಾಗೆ ಮತ್ತೊಂದು ಬಿಗ್‌ ಶಾಕ್..!
 

Follow Us:
Download App:
  • android
  • ios