'ಟೆಸ್ಟ್‌ ಕ್ರಿಕೆಟ್‌ನಂತೆ ಆಡು': ರಾಹುಲ್‌ಗೆ ವರವಾದ ಕಿಂಗ್ ಕೊಹ್ಲಿ ಸಲಹೆ..!

4ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ವಿರಾಟ್ ಹಾಗೂ ರಾಹುಲ್ ತಮ್ಮ ಹೆಗಲ ಮೇಲಿದ್ದ ಬೃಹತ್ ಜವಾಬ್ದಾರಿಯನ್ನು ಬಹಳ ತಾಳ್ಮೆಯಿಂದ ನಿರ್ವಹಿಸಿದರು. ಈ ನಡುವೆ ಮಾರ್ಷ್ ಕ್ಯಾಚ್ ಕೈಚೆಲ್ಲಿ ಕೊಹ್ಲಿಗೆ ಜೀವದಾನ ನೀಡಿದ್ದು, ಭಾರತಕ್ಕೇ ಜೀವದಾನ ನೀಡಿದಂತಾಯಿತು. ತಂಡವನ್ನು ಗೆಲ್ಲಿಸಬೇಕು ಎನ್ನುವ ಬದ್ಧತೆಯೊಂದಿಗೆ ಬ್ಯಾಟ್ ಮಾಡಿದ ಈ ಜೋಡಿ ಅಚ್ಚುಕಟ್ಟಾದ ಇನ್ನಿಂಗ್‌ಸ್ ಕಟ್ಟಿತು.

World Cup 2023 KL Rahul reveals chat with Virat Kohli during Australia clash kvn

ಚೆನ್ನೈ(ಅ.09): ಭಾರತ ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರಿಟ್ ಏಕೆ ಎನ್ನುವುದನ್ನು ಮೊದಲ ಪಂದ್ಯದಲ್ಲೇ ಪ್ರದರ್ಶಿಸಿದೆ. ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ರ ಸಾಹಸ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ ತಂದುಕೊಟ್ಟಿತು. ಮಾರಕ ಬೌಲಿಂಗ್ ದಾಳಿ, 2 ರನ್‌ಗೆ 3 ವಿಕೆಟ್ ಕಳೆದುಕೊಂಡರೂ ಪುಟಿದೆದ್ದ ಪರಿ ವಿಶ್ವಕಪ್‌ನ ಕಳೆ ಹೆಚ್ಚಿಸಿದೆ.

ಚೆಪಾಕ್ ಕ್ರೀಡಾಂಗಣ ಲೋ ಸ್ಕೋರಿಂಗ್ ಪಂದ್ಯಕ್ಕೆ ಸಾಕ್ಷಿಯಾದರೂ, ರೋಚಕತೆಗೆ ಕೊರತೆ ಇರಲಿಲ್ಲ. ಭಾರತೀಯ ಬೌಲರ್‌ಗಳ ಮಾರಕ ದಾಳಿ, ಆಸ್ಟ್ರೇಲಿಯಾದ ವೇಗಿಗಳ ಆರಂಭಿಕ ಸ್ಪೆಲ್, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಸೊಬಗು, ಕನ್ನಡಿಗ ರಾಹುಲ್‌ರ ಹೋರಾಟ ಎಲ್ಲವೂ ಕ್ರಿಕೆಟ್ ಅಭಿಮಾನಿಗಳ ಮನರಂಜಿಸಿತು. ಆಸ್ಟ್ರೇಲಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 49.3 ಓವರಲ್ಲಿ 199 ರನ್‌ಗೆ ಆಲೌಟ್ ಆದರೆ, ಕೊಹ್ಲಿ ಹಾಗೂ ರಾಹುಲ್ ನಡುವಿನ 165 ರನ್ ಜೊತೆಯಾಟದ ನೆರವಿನಿಂದ ಭಾರತ ಇನ್ನೂ 8.4 ಓವರ್ ಬಾಕಿ ಇರುವಂತೆಗೆಲುವು ಸಾಧಿಸಿತು.

World Cup 2023 ಆಸೀಸ್ ಎದುರಿನ ಗೆಲುವಿನ ಖುಷಿಯಲ್ಲಿದ್ದ ಟೀಂ ಇಂಡಿಯಾಗೆ ಮತ್ತೊಂದು ಬಿಗ್‌ ಶಾಕ್..!

ಭಾರತಕ್ಕೆ ಭಾರಿ ಶಾಕ್!: ಮೊದಲ ಇನ್ನಿಂಗ್ಸಲ್ಲಿ ಪಿಚ್ ವರ್ತಿಸಿದ ರೀತಿ ಗಮನಿಸಿದಾಗ ಭಾರತಕ್ಕೂ ರನ್ ಕಲೆಹಾಕಲು ಕಷ್ಟವಾಗಬಹುದು ಎಂದು ಅಂದಾಜಿಸಲಾಗಿತ್ತು. ಸ್ಟಾರ್ಕ್ ಹಾಗೂ ಹೇಜಲ್‌ವುಡ್ ಹೊಸ ಚೆಂಡಿನ ಸಂಪೂರ್ಣ ಲಾಭವೆತ್ತಿ ಕಿಶನ್ ಹಾಗೂ ರೋಹಿತ್ ಇಬ್ಬರಿಗೂ ಖಾತೆ ತೆರೆಯಲು ಬಿಡಲಿಲ್ಲ. ಪರಿಸ್ಥಿತಿಯ ಅರಿವೇ ಇಲ್ಲದಂತೆ ಬೇಜವಾಬ್ದಾರಿಯಿಂದ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್(0) ಔಟಾದಾಗ ತಂಡದ ಮೊತ್ತ 2 ರನ್‌ಗೆ 3 ವಿಕೆಟ್.

ಕೊಹ್ಲಿ, ರಾಹುಲ್ ಸಾಹಸ: 4ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ವಿರಾಟ್ ಹಾಗೂ ರಾಹುಲ್ ತಮ್ಮ ಹೆಗಲ ಮೇಲಿದ್ದ ಬೃಹತ್ ಜವಾಬ್ದಾರಿಯನ್ನು ಬಹಳ ತಾಳ್ಮೆಯಿಂದ ನಿರ್ವಹಿಸಿದರು. ಈ ನಡುವೆ ಮಾರ್ಷ್ ಕ್ಯಾಚ್ ಕೈಚೆಲ್ಲಿ ಕೊಹ್ಲಿಗೆ ಜೀವದಾನ ನೀಡಿದ್ದು, ಭಾರತಕ್ಕೇ ಜೀವದಾನ ನೀಡಿದಂತಾಯಿತು. ತಂಡವನ್ನು ಗೆಲ್ಲಿಸಬೇಕು ಎನ್ನುವ ಬದ್ಧತೆಯೊಂದಿಗೆ ಬ್ಯಾಟ್ ಮಾಡಿದ ಈ ಜೋಡಿ ಅಚ್ಚುಕಟ್ಟಾದ ಇನ್ನಿಂಗ್‌ಸ್ ಕಟ್ಟಿತು. ಕೊಹ್ಲಿ ಮತ್ತೊಂದು ಏಕದಿನ ಶತಕ ಬಾರಿಸಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾದರೂ, ಅವರು 85 ರನ್ ಗಳಿಸಿ ಔಟಾಗುವ ವೇಳೆಗೆ ಭಾರತ ಜಯದ ಹೊಸ್ತಿಲು ತಲುಪಿತು. 116 ಎಸೆತಗಳ ಅವರ ಇನ್ನಿಂಗ್ಸಲ್ಲಿ 6 ಬೌಂಡರಿಗಳಿದ್ದವು. ವಿರಾಟ್ ಔಟಾದ ಬಳಿಕ ಹಾರ್ದಿಕ್‌ರನ್ನು ಜೊತೆಯಿರಿಸಿಕೊಂಡು ರಾಹುಲ್ ತಂಡವನ್ನು ಜಯದ ದಡ ಸೇರಿಸಿದರು. ರಾಹುಲ್ 115 ಎಸೆತದಲ್ಲಿ 8 ಬೌಂಡರಿ, 2 ಸಿಕ್ಸರ್‌ನೊಂದಿಗೆ 97 ರನ್ ಗಳಿಸಿ ಔಟಾಗದೆ ಉಳಿದರು.

ಕೊಹ್ಲಿ-ರಾಹುಲ್ ಹೋರಾಟಕ್ಕೆ ತಲೆಬಾಗಿದ ಆಸ್ಟ್ರೇಲಿಯಾ, ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ!

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಕೆ ಎಲ್ ರಾಹುಲ್, ನಿಜ ಹೇಳಬೇಕೆಂದರೆ, ಮೈದಾನದಲ್ಲಿ ಕೊಹ್ಲಿ ಹಾಗೂ ನನ್ನ ನಡುವೆ ಹೆಚ್ಚು ಮಾತುಕತೆಯಾಗಲಿಲ್ಲ. ನಾನು ಸ್ನಾನ ಮುಗಿಸಿ ಹೊರಗೆ ಬಂದಿದ್ದೆ ಅಷ್ಟೇ, ನನಗೆ ಏನಿಲ್ಲವೆಂದರೂ ಒಂದೂವರೆಗಂಟೆ ವಿಶ್ರಾಂತಿ ಸಿಗಲಿದೆ ಅಂದುಕೊಂಡಿದ್ದೆ. ಆದರೆ ನನಗೆ ಸಮಯವೇ ಸಿಗಲಿಲ್ಲ. ಬ್ಯಾಟಿಂಗ್ ಮಾಡುತ್ತಲೇ ಮೈದಾನ ಪ್ರವೇಶಿಸಿದೆ ಎಂದು ಕೆ ಎಲ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಇನ್ನು ಮೈದಾನದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ವಿರಾಟ್ ಕೊಹ್ಲಿ ನೀಡಿದ ಸಲಹೆ ತುಂಬಾ ಪ್ರಯೋಜನಕ್ಕೆ ಬಂದಿತು. ಈ ವಿಕೆಟ್ ನಮಗೆ ನೆರವಾಗುತ್ತಿದೆ. ನಾವು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವಂತೆ ಸರಿಯಾದ ಶಾಟ್‌ಗಳನ್ನು ಆಡೋಣ. ಆಮೇಲೆ ಅದೇ ರೀತಿ ಮುಂದುವರೆಯೋಣ ಎಂದರು. ನಾವು ಅಂದುಕೊಂಡಿದ್ದು ಸಾಧಿಸಿದ್ದಕ್ಕೆ ಖುಷಿಯಾಗುತ್ತಿದೆ ಎಂದು ಕೆ ಎಲ್ ರಾಹುಲ್ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios