ಪಾಕ್ ವಿರುದ್ದ ಆಫ್ಘಾನಿಸ್ತಾನ ಗೆಲುವು ಸಂಭ್ರಮಿಸಿದ ಭಾರತ, ರಶೀದ್ - ಇರ್ಫಾನ್ ಭರ್ಜರಿ ಸ್ಟೆಪ್ಸ್!
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ತನ್ನ ಸಾಮರ್ಥ್ಯ ಮತ್ತೆ ಸಾಬೀತು ಪಡಿಸಿದೆ. ಪಾಕಿಸ್ತಾನ ತಂಡವನ್ನೇ ಬಗ್ಗು ಬಡಿದು ಸಂಭ್ರಮಾಚರಣೆ ನಡೆಸಿದೆ. ಆಫ್ಘಾನಿಸ್ತಾನ ಗೆಲುವನ್ನು ಭಾರತೀಯರು ಸಂಭ್ರಮಿಸಿದ್ದಾರೆ. ಇತ್ತ ಮೈದಾನದಲ್ಲಿ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ರಶೀದ್ ಖಾನ್ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.
ಚೆನ್ನೈ(ಅ.23) ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ಮತ್ತೊಂದು ಇತಿಹಾಸ ರಚಿಸಿದೆ. ಪಾಕಿಸ್ತಾನದ ವಿರುದ್ದ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್ ಸೋತಿದ್ದ ಆಫ್ಘಾನಿಸ್ತಾನ ದಿಟ್ಟ ಹೋರಾಟ ನೀಡಿ ಪಾಕಿಸ್ತಾನ ಮಣಿಸಿದೆ. ಬಳಿಕ ಭರ್ಜರಿ ಸಂಭ್ರಮಾಚರಣೆ ಮಾಡಿದೆ. ಇತ್ತ ಆಫ್ಘಾನಿಸ್ತಾನದ ಗೆಲುವನ್ನು ಭಾರತ ಸಂಭ್ರಮಿಸಿದೆ. ಚೆನ್ನೈ ಕ್ರೀಡಾಂಗಣದಲ್ಲಿ ಬಹುತೇಕ ಭಾರತದ ಕ್ರಿಕೆಟ್ ಅಭಿಮಾನಿಗಳು ಆಫ್ಘಾನಿಸ್ತಾನಕ್ಕೆ ಬೆಂಬಲ ನೀಡಿದ್ದರು. ಆಫ್ಘಾನ್ ಗೆಲುವಿನ ಕೇಕೆ ಹಾಕುತ್ತಿದ್ದಂತೆ ಸಂಭ್ರಮಾಚರಣೆ ಜೋರಾಗಿದೆ.
ಮೈದಾನದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ , ಆಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಜೊತೆ ಸೇರಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಇರ್ಫಾನ್ ಹಾಗೂ ರಶೀದ್ ಡ್ಯಾನ್ಸ್ ಇದೀಗ ವೈರಲ್ ಆಗಿದೆ. ಈ ವಿಡಿಯೋ ಪಾಕಿಸ್ತಾನ ಅಭಿಮಾನಿಗಳ ಆಕ್ರೋಶ ಮತ್ತಷ್ಟು ಹೆಚ್ಚಿಸಿದೆ.
ಗಾಜಾಗೆ ಶತಕ ಅರ್ಪಿಸಿದ ಬಳಿಕ ಮೂರಕ್ಕೆ 3 ಪಂದ್ಯ ಸೋತ ಪಾಕ್ ತಂಡ ಫುಲ್ ಟ್ರೋಲ್!
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ಗೆದ್ದಿದ್ದು 3 ಪಂದ್ಯ. ಆದರೆ ಮೂರರಲ್ಲಿ 2 ಗೆಲುವು ಬಲಾಢ್ಯ ತಂಡದ ವಿರುದ್ಧ ಅನ್ನೋದು ದಾಖಲೆ. ಇದೇ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು 69 ರನ್‌ಗಳಿಂದ ಆಫ್ಘಾನಿಸ್ತಾನ ಮಣಿಸಿತ್ತು. ಇದೀಗ ಪಾಕ್ ವಿರುದ್ಧ 8 ವಿಕೆಟ್ ಗೆಲುವು ಕಂಡಿದೆ.
ಏಕದಿನ ವಿಶ್ವಕಪ್‌ನಲ್ಲಿ ಆಫ್ಘಾನಿಸ್ತಾನದ ಗೆಲುವು
ಸ್ಕಾಟ್‌ಲೆಂಡ್ ವಿರುದ್ಧ 1 ವಿಕೆಟ್ ಗೆಲುವು, 2015
ಇಂಗ್ಲೆಂಡ್ ವಿರುದ್ಧ 69 ರನ್ ಗೆಲುವು, 2023
ಪಾಕಿಸ್ತಾನ ವಿರುದ್ಧ 8 ವಿಕೆಟ್ ಗೆಲುವು, 2023
ಪಾಕಿಸ್ತಾನ ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಚೇಸ್ ಮಾಡಿ ಗೆದ್ದ ದಾಖಲೆ ಇದೀಗ ಆಫ್ಘಾನಿಸ್ತಾನದ ಪಾಲಾಗಿದೆ.
ದಿಲ್ ದಿಲ್ ಉಡೀಸ್, ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮಣಿಸಿ ದಾಖಲೆ ಬರೆದ ಆಫ್ಘಾನಿಸ್ತಾನ!
ಪಾಕ್ ವಿರುದ್ಧ ಏಕದಿನ ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಯಶಸ್ವಿ ಚೇಸ್
ಪಾಕ್ ವಿರುದ್ಧ 283 ರನ್ ಚೇಸ್ ಮಾಡಿದ ಅಫ್ಘಾನಿಸ್ತಾನ, 2023
ಪಾಕ್ ವಿರುದ್ಧ 274 ರನ್ ಚೇಸ್ ಮಾಡಿದ ಭಾರತ, 2003
ಪಾಕ್ ವಿರುದ್ಧ 267 ರನ್ ಚೇಸ್ ಮಾಡಿದ ವೆಸ್ಟ್ ಇಂಡೀಸ್, 1975
ಪಾಕ್ ವಿರುದ್ದ 243 ರನ್ ಚೇಸ್ ಮಾಡಿದ ಸೌತ್ ಆಫ್ರಿಕಾ
275ಕ್ಕಿಂತ ಅಧಿಕ ರನ್ ಸಿಡಿಸಿದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಪ್ರತಿ ಬಾರಿ ಗೆಲುವಿನ ಯಶಸ್ಸು ಸಿಕ್ಕಿತ್ತು. ಆದರೆ ಪಾಕ್ ಬೃಹತ್ ಮೊತ್ತದ ಖಚಿತ ಗೆಲುವನ್ನು ಆಫ್ಘಾನಿಸ್ತಾನ ಕಸಿದುಕೊಂಡಿದೆ. ವಿಶ್ವಕಪ್‌ನಲ್ಲಿ ಪಾಕಿಸ್ತಾನ 275ಕ್ಕೂ ಅಧಿಕ ರನ್ ಸಿಡಿಸಿದ 14 ಪಂದ್ಯಗಳ ಪೈಕಿ 13 ರಲ್ಲಿ ಗೆಲುವು ಕಂಡಿದ್ದರೆ, 1 ಪಂದ್ಯ ಅಂದರೆ ಆಫ್ಘಾನಿಸ್ತಾನ ವಿರುದ್ಧ ಸೋಲು ಕಂಡಿದೆ.