ಗಾಜಾಗೆ ಶತಕ ಅರ್ಪಿಸಿದ ಬಳಿಕ ಮೂರಕ್ಕೆ 3 ಪಂದ್ಯ ಸೋತ ಪಾಕ್ ತಂಡ ಫುಲ್ ಟ್ರೋಲ್!
ಆಫ್ಘಾನಿಸ್ತಾನ ವಿರುದ್ಧ ಸೋತ ಪಾಕಿಸ್ತಾನ ತಂಡ ಫುಲ್ ಟ್ರೋಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಒಂದಕ್ಕಿಂತ ಒಂದು ಮಿಗಿಲಾದ ಮೀಮ್ಸ್, ಟ್ರೋಲ್ ಹರಿದಾಡುತ್ತಿದೆ.
ಚೆನ್ನೈ(ಅ.23) ಆಫ್ಘಾನಿಸ್ತಾನ ವಿರುದ್ಧ ಮುಗ್ಗರಿಸಿದ ಪಾಕಿಸ್ತಾನ ತಂಡ ಫುಲ್ ಟ್ರೋಲ್ ಆಗಿದೆ. ಪಾಕ್ ತಂಡ ಮಾತ್ರವಲ್ಲ, ಅಭಿಮಾನಿಗಳು, ಪಾಕ್ ಪರ ಒಲವು ವ್ಯಕ್ತಪಡಿಸುವ ಅಭಿಮಾನಿಗಳನ್ನು ಟ್ರೋಲ್ ಮಾಡಲಾಗಿದೆ. ರಿಜ್ವಾನ್ ಗೆಲುವಿನ ಶತಕವನ್ನು ಹಮಾಸ್ ಉಗ್ರರ ಅಡಗುತಾಣ ಗಾಜಾಗೆ ಅರ್ಪಿಸಿದ್ದರು. ಇದೀಗ ಇದೇ ನೀವು ವಿಶ್ವಕಪ್ ಟೂರ್ನಿಯಲ್ಲಿ ಉಳಿಯಲು ಪ್ರಾರ್ಥಿಸಿ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಎಂದು ಹಮಾಸ್ ಉಗ್ರರು ಹೇಳುತ್ತಿದ್ದಾರೆ ಅನ್ನೋ ಟ್ರೋಲ್‌ಗಳು ಹರಿದಾಡುತ್ತಿದೆ.
ಹಮಾಸ್ ಉಗ್ರರು ಪಾಕಿಸ್ತಾನಕ್ಕೆ ಬರೆದಿರುವ ಪತ್ರ ಎಂದು ಟ್ರೋಲ್ ಮಾಡಲಾಗುತ್ತಿದೆ. ಈ ಪತ್ರದಲ್ಲಿ ಪ್ರೀತಿಯ ಮೊಹಮ್ಮದ್ ರಿಜ್ವಾನ್, ನಿಮ್ಮ ತಂಡ ಚೆನ್ನಾಗಿ ಆಡುತ್ತಿತ್ತು. ಗೆಲುವಿನ ಬಳಿಕ ಶತಕವನ್ನು ನಮಗೆ ಅರ್ಪಿಸಿದ್ದೀರಿ. ನೀವು ಶತಕ ನಮಗೆ ಅರ್ಪಿಸಿದ ಬಳಿಕ ನೀವು ಮೂರಕ್ಕೆ ಮೂರು ಪಂದ್ಯ ಸೋತಿದ್ದೀರಿ. ಇತ್ತ ನಾವು ಕೂಡ ಪ್ರತಿದಾಳಿ ನಡೆಸಲು ಸಾಧ್ಯವಾಗದೆ ಹಿನ್ನಡೆ ಅನುಭವಿಸಿದ್ದೇವೆ. ನಿಮ್ಮ ಅರ್ಪಣೆ ಶತಕವನ್ನು ಹಿಂಪಡೆದುಕೊಳ್ಳಿ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ನಮಗೆ ನಿಮ್ಮ ಪ್ರಾರ್ಥನೆ ಬೇಕಿಲ್ಲ. ಸದ್ಯ ನಿಮ್ಮ ತಂಡ ವಿಶ್ವಕಪ್ ಟೂರ್ನಿಯಲ್ಲಿ ಉಳಿಯಲು ನೀವು ಪ್ರಾರ್ಥಿಸಿ ಎಂದು ಬರೆದಿರುವ ಹಮಾಸ್ ಉಗ್ರರ ಟ್ರೋಲ್ ಪತ್ರ ಹರಿದಾಡುತ್ತಿದೆ.
ದಿಲ್ ದಿಲ್ ಉಡೀಸ್, ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮಣಿಸಿ ದಾಖಲೆ ಬರೆದ ಆಫ್ಘಾನಿಸ್ತಾನ!
ನಿನ್ನೆ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಮಣಿಸಿತು. ಇಂದು ಆಫ್ಘಾನಿಸ್ತಾನ ತಂಡ ಪಾಕಿಸ್ತಾನ ತಂಡವನ್ನು ಸೋಲಿಸಿದೆ. ನಾಳೆ ವಿಜಯದಶಮಿ ಎಂದು ಹಲವು ಟ್ವೀಟ್ ಮಾಡಿದ್ದರೆ. ಇತ್ತ ತಾಲಿಬಾನ್ ಪಡೆ ಗನ್ ಹಿಡಿದು ಸಂಭ್ರಮಿಸುತ್ತಿರುವ ಹಳೇ ವಿಡಿಯೋ ಪೋಸ್ಟ್ ಮಾಡಿ ಇದು ಗೆಲುವಿನ ಸಂಭ್ರಮ ಎಂದು ಮೀಮ್ಸ್ ಮಾಡಲಾಗಿದೆ.
ಇತ್ತ ಪಾಕಿಸ್ತಾನ ಕೋಚ್ ಮಿಕಿ ಆರ್ಥರ್ ಕೂಡ ಟ್ರೋಲ್ ಆಗಿದ್ದಾರೆ. ಈ ಪಂದ್ಯ ಐಸಿಸಿ ಟೂರ್ನಿ ರೀತಿ ಅನಿಸಲಿಲ್ಲ. ಇದು ಆಫ್ಘಾನಿಸ್ತಾನ ಆಯೋಜಿಸಿದ ದ್ವಿಪಕ್ಷೀಯ ಸರಣಿ ರೀತಿ ಕಂಡಿತು. ದಿಲ್ ದಿಲ್ ಪಾಕಿಸ್ತಾನ ಕೇಳಲೇ. ಇತ್ತ ಡಿಜೆ ಮ್ಯೂಸಿಕ್ ಕೂಡ ಆಫ್ಘಾನಿಸ್ತಾನ ಜಿಲೆಬಿ ಹಾಕಲಾಗಿತ್ತು ಎಂದು ಟ್ರೋಲ್ ಮಾಡಲಾಗುತ್ತಿದೆ.
ಆಫ್ಘಾನಿಸ್ತಾನದ ಗೆಲುವನ್ನು ಭಾರತ ಸಂಭ್ರಮಿಸಿದೆ. ಮೈದಾನದಲ್ಲಿ ರಶೀದ್ ಖಾನ್ ಜೊತೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಭರ್ಜರಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ.
ಟೀಂ ಇಂಡಿಯಾ ವಿಶ್ವಕಪ್ ಗೆಲ್ಲದೇ ಇರಲು ಸಾಧ್ಯವೇ ಇಲ್ಲ: ಶೋಯೆಬ್ ಅಖ್ತರ್ ಬಿಚ್ಚು ಮಾತು