Asianet Suvarna News Asianet Suvarna News

INDvSL ಸಿರಾಜ್ ದಾಳಿಗೆ ಮೂವರು ಡಕೌಟ್, ಇದು ಏಷ್ಯಾಕಪ್ ಫೈನಲ್ ಅಲ್ಲ ಎಂದ ಫ್ಯಾನ್ಸ್!

ಭಾರತ ಹಾಗೂ ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದ ರೋಟಕ ಹೋರಾಟ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ಬೃಹತ್ ಗುರಿ ಚೇಸಿಂಗ್ ಮಾಡುತ್ತಿರುವ ಲಂಕಾ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಇದರಲ್ಲಿ ಸಿರಾಜ್ ದಾಳಿಗೆ ಮೂವರು ಡಕೌಟ್ ಆಗಿದ್ದಾರೆ. ಇದೀಗ ಅಭಿಮಾನಿಗಳು ಇದು ಏಷ್ಯಾಕಪ್ ಫೈನಲ್ ಪಂದ್ಯ ಅಲ್ಲವೇ ಅಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

ICC World cup 2023 IND vs SL Mohammed Siraj attack rattled Sri lanka Fans trolls ckm
Author
First Published Nov 2, 2023, 7:26 PM IST

ಮುಂಬೈ(ನ.02) ಐಸಿಸಿ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ದಾಳಿ ಅಭಿಮಾನಿಗಳ ಹುಚ್ಚೆದ್ದು ಕುಣಿಸಿದೆ. ಭಾರತ ನೀಡಿದ 358 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಲಂಕಾ ತಂಡಕ್ಕೆ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ದಾಳಿ ಮೂಲಕ ಶಾಕ್ ನೀಡಿದ್ದಾರೆ. ಮೊಹಮ್ಮದ್ ಸಿರಾಜ್ ದಾಳಿಗೆ ಶ್ರೀಲಂಕಾ ಮೂವರು ಬ್ಯಾಟ್ಸ್‌ಮನ್ ಶೂನ್ಯಕ್ಕೆ ಔಟಾಗಿದ್ದಾರೆ. ಶ್ರೀಲಂಕಾ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ ಇದು ಏಷ್ಯಾಕಪ್ ಫೈನಲ್ ಪಂದ್ಯ ಅಲ್ಲ, ವಿಶ್ವಕಪ್ ಪಂದ್ಯ ಎಂದು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

ಶ್ರೀಲಂಕಾ 3.1 ಓವರ್‌ಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಗಳಿಸಿದ್ದು ಕೇವಲ 3 ರನ್ ಮಾತ್ರ. ಇದರಲ್ಲಿ ಮೂವರು ಡಕೌಟ್ ಹಾಗೂ ಕುಸಾಲ್ ಮೆಂಡೀಸ್ 1 ರನ್ ಸಿಡಿಸಿ ಔಟಾಗಿದ್ದಾರೆ. ಇದೇ ರೀತಿ ಮೊಹಮ್ಮದ್ ಸಿರಾಜ್ ಏಷ್ಯಾಕಪ್ ಫೈನಲ್ ಪಂದ್ಯದಲ್ಲೂ ಬೌಲಿಂಗ್ ದಾಳಿ ನಡೆಸಿದ್ದರು. ಹೀಗಾಗಿಯೇ ಇದು ಏಷ್ಯಾಕಪ್ ಫೈನಲ್ ಪಂದ್ಯ ಅಲ್ಲ, ವಿಶ್ವಕಪ್ ಪಂದ್ಯ ಎಂದು ಅಭಿಮಾನಿಗಳು ಟ್ರೋಲ್ ಆರಂಭಿಸಿದ್ದಾರೆ.

ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಮತ್ತೊಂದು ಸಾರ್ವಕಾಲಿಕ ದಾಖಲೆ ಮುರಿದ ವಿರಾಟ್ ಕೊಹ್ಲಿ..!

2023ರ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ದಾಳಿಗೆ ಶ್ರೀಲಂಕಾ ತತ್ತರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಕಣ್ಣು ಮುಚ್ಚಿ ತೆರೆಯುವುದರೊಳಗೆ ಲಂಕಾದ ಇಡೀ ತಂಡ ಪೆವಿಲಿಯನ್ ಸೇರಿತ್ತು. ಈ ಪಂದ್ಯದಲ್ಲಿ ಐವರು ಶ್ರೀಲಂಕಾ ಬ್ಯಾಟ್ಸ್‌ಮನ್ ಡಕೌಟ್ ಆಗಿದ್ದರು. ಮೊಹಮ್ಮದ್ ಸಿರಾಜ್ 6 ವಿಕೆಟ್ ಕಬಳಿಸಿ ಮಿಂಚಿದ್ದರು. 

 

 

ಸಿರಾಜ್ ದಾಳಿಯಿಂದ ಶ್ರೀಲಂಕಾ 15,2 ಓವರ್‌ನಲ್ಲಿ 50 ರನ್ ಸಿಡಿಸಿ ಆಲೌಟ್ ಆಯಿತು. ಭಾರತ ಗುರಿಯನ್ನು 6.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಈ ಮೂಲಕ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿತು. ಭಾರತ ಇದೇ ಪ್ರದರ್ಶನವನ್ನು ಇದೀಗ ವಿಶ್ವಕಪ್ ಟೂರ್ನಿಯಲ್ಲಿ ನೀಡುತ್ತಿದೆ. ಹೀಗಾಗಿ ಅಭಿಮಾನಿಗಳು ಪಂದ್ಯ ನೋಡುತ್ತಿರುವ ಯಾರೂ ಕೂಡ ಗೊಂದಲಕ್ಕೀಡಾಗಬೇಡಿ. ನೀವು ನೋಡುತ್ತಿರುವುದು ಏಷ್ಯಾಕಪ್ ಫೈನಲ್ ಪಂದ್ಯದ ಹೈಲೈಟ್ಸ್ ಅಲ್ಲ. ಇದು ವಿಶ್ವಕಪ್ ಪಂದ್ಯ ಎಂದು ಟ್ರೋಲ್ ಮಾಡಲಾಗುತ್ತಿದೆ.

ವಾಂಖೇಡೆ ಸ್ಟೇಡಿಯಂನಲ್ಲಿ ಸಚಿನ್ ತೆಂಡುಲ್ಕರ್ ಪ್ರತಿಮೆ ಅನಾವರಣ..!


 

Follow Us:
Download App:
  • android
  • ios