ಈ ಸ್ಟ್ಯಾಚುವನ್ನು ಮಹಾರಾಷ್ಟ್ರದ ಅಹಮದ್‌ನಗರದ ನಿವಾಸಿಯಾಗಿರುವ ಪ್ರಮೋದ್ ಕಾಂಬ್ಳೆ ಎನ್ನುವ ಶಿಲ್ಪಿಯು ಅದ್ಭುತವಾಗಿ ಪ್ರತಿಮೆಯನ್ನು ಕೆತ್ತಿದ್ದಾರೆ. ಸಚಿನ್ ತೆಂಡುಲ್ಕರ್ ಅವರು ಲಾಫ್ಟೆಡ್ ಡ್ರೈವ್ ಶಾಟ್ ಹೊಡೆಯುತ್ತಿರುವ ಭಂಗಿಯನ್ನು ಪ್ರತಿಮೆ ನಿರ್ಮಾಣ ಮಾಡಲಾಗಿದೆ.
ಮುಂಬೈ(ಅ.11): ‘ಕ್ರಿಕೆಟ್ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್‌ರ ಪ್ರತಿಮೆಯನ್ನು ಬುಧವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಅನಾವರಣಗೊಳಿಸಲಾಯಿತು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರತಿಮೆ ಅನಾವರಣಗೊಳಿಸಿದರು. ತೆಂಡುಲ್ಕರ್ ತಮ್ಮ ಪತ್ನಿ ಅಂಜಲಿ, ಪುತ್ರಿ ಸಾರಾ, ಸಹೋದರ ಅಜಿತ್ ಜೊತೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಿಸಿಸಿಐ ಹಾಗೂ ಐಸಿಸಿ ಮಾಜಿ ಅಧ್ಯಕ್ಷ ಶರದ್ ಪವಾರ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಸೇರಿ ಇತರ ಗಣ್ಯರು ಉಪಸ್ಥಿತರಿದ್ದರು.
ಈ ಸ್ಟ್ಯಾಚುವನ್ನು ಮಹಾರಾಷ್ಟ್ರದ ಅಹಮದ್‌ನಗರದ ನಿವಾಸಿಯಾಗಿರುವ ಪ್ರಮೋದ್ ಕಾಂಬ್ಳೆ ಎನ್ನುವ ಶಿಲ್ಪಿಯು ಅದ್ಭುತವಾಗಿ ಪ್ರತಿಮೆಯನ್ನು ಕೆತ್ತಿದ್ದಾರೆ. ಸಚಿನ್ ತೆಂಡುಲ್ಕರ್ ಅವರು ಲಾಫ್ಟೆಡ್ ಡ್ರೈವ್ ಶಾಟ್ ಹೊಡೆಯುತ್ತಿರುವ ಭಂಗಿಯನ್ನು ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಕ್ರಿಕೆಟ್ ದಂತಕಥೆ ತಮ್ಮ ತವರು ಮೈದಾನವಾದ ವಾಂಖೇಡೆಯಲ್ಲಿ ತಮ್ಮ ಕಟ್ಟಕಡೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿ ಸುಮಾರು 10 ವರ್ಷಗಳ ಬಳಿಕ ಐತಿಹಾಸಿಕ ವಾಂಖೇಡೆ ಮೈದಾನದಲ್ಲಿ ಇದೀಗ ತೆಂಡುಲ್ಕರ್ ಪ್ರತಿಮೆ ಅನಾವರಣವಾಗಿದೆ. ಸಚಿನ್ ತೆಂಡುಲ್ಕರ್ 2013ರ ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ಎದುರು ತಮ್ಮ ಕಟ್ಟಕಡೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ್ದರು.
ಮಹಾರಾಷ್ಟ್ರ ಮೂಲದ ಸಚಿನ್ ತೆಂಡುಲ್ಕರ್ ಏಪ್ರಿಲ್ 24, 1973ರಲ್ಲಿ ಮುಂಬೈನಲ್ಲಿ ಜನಿಸಿದ್ದರು. ಇನ್ನು ತಮ್ಮ 16ನೇ ವಯಸ್ಸಿನಲ್ಲಿ ಅಂದರೆ ನವೆಂಬರ್ 15, 1989ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಅದೇ ವರ್ಷ ಡಿಸೆಂಬರ್ 18ರಂದು ಭಾರತ ಏಕದಿನ ಕ್ರಿಕೆಟ್ ತಂಡಕ್ಕೂ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಸುಮಾರು ಎರಡೂವರೆ ದಶಕಗಳ ಕಾಲ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್ ಕ್ರಿಕೆಟ್ ಜಗತ್ತನ್ನು ಆಳಿದರು. ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿ ಗರಿಷ್ಠ ಟೆಸ್ಟ್ ಹಾಗೂ ಏಕದಿನ ರನ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಬಾರಿಸಿದ ಮೊದಲ ಹಾಗೂ ಏಕೈಕ ಬ್ಯಾಟರ್ ಎನ್ನುವ ಹೆಗ್ಗಳಿಕೆ ಕೂಡಾ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ.
ಐಸಿಸಿ ಜೊತೆ ಚರ್ಚಿಸಿ ಮಹತ್ವದ ನಿರ್ಧಾರ, ದೆಹಲಿ-ಮುಂಬೈ ಪಂದ್ಯಕ್ಕೆ ಬಿಸಿಸಿಐ ಪ್ರತ್ಯೇಕ ನಿಯಮ!
2014ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದ ದೇಶದ ಮೊದಲ ಕ್ರೀಡಾಪಟು ಎನ್ನುವ ಹಿರಿಮೆಗೆ ಮುಂಬೈಕರ್ ಪಾತ್ರರಾಗಿದ್ದರು. 200 ಟೆಸ್ಟ್ ಪಂದ್ಯಗಳನ್ನಾಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 15, 921 ರನ್ ಬಾರಿಸಿದ್ದಾರೆ. ಇದರಲ್ಲಿ 51 ಶತಕಗಳು ಸೇರಿವೆ. ಇನ್ನು 463 ಏಕದಿನ ಪಂದ್ಯಗಳನ್ನಾಡಿ 19 ಶತಕ ಹಾಗೂ 96 ಅರ್ಧಶತಕ ಸಹಿತ 18,426 ರನ್ ಬಾರಿಸಿದ್ದಾರೆ. ಸಚಿನ್ ತೆಂಡುಲ್ಕರ್ ಭಾರತ ಪರ 6 ಬಾರಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಸಚಿನ್ ತೆಂಡುಲ್ಕರ್ ಕೂಡಾ ಮಹತ್ವದ ಪಾತ್ರ ವಹಿಸಿದ್ದರು. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ಶ್ರೇಯ ಕೂಡಾ ತೆಂಡುಲ್ಕರ್ ಹೆಸರಿನಲ್ಲಿದೆ.
