ಕೊಹ್ಲಿ ಗುರಿಯಾಗಿಸಿ ಬಾಲ್ ಎಸೆದ್ರಾ ಮ್ಯಾಕ್ಸ್‌ವೆಲ್? ಫೈನಲ್ ಪಂದ್ಯದ ಘಟನೆ ವೈರಲ್!

ವಿರಾಟ್ ಕೊಹ್ಲಿ ಹಾಗೂ ಗ್ಲೆನ್‌ಮ್ಯಾಕ್ಸ್‌ವೆಲ್ ಆರ್‌ಸಿಬಿ ಪರ ಜೊತೆಯಾಗಿ ಆಡುತ್ತಾರೆ. ಆದರೆ ದೇಶ ಪ್ರತಿನಿಧಿಸುವಾಗ ಎದುರಾಳಿಗಳು. ಇಂದಿನ ಫೈನಲ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಕೊಹ್ಲಿಯನ್ನು ಗಾಯಗೊಳಿಸುವ ಉದ್ದೇಶದಿಂದ ಚೆಂಡು ಎಸೆದ್ರಾ? ಇದೀಗ ಈ ಘಟನೆ ಬಾರಿ ಚರ್ಚೆಯಾಗುತ್ತಿದೆ.

ICC World Cup 2023 Glenn maxwell throw hit virat kohli during India vs Australia final video goes viral ckm

ಅಹಮ್ಮದಾಬಾದ್(ನ.19) ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದಲ್ಲಿ ಭಾರತ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆದರೆ ದಿಟ್ಟ ಹೋರಾಟ ನೀಡುವ ಮೂಲಕ ಆಸ್ಟ್ರೇಲಿಯಾ ಲೆಕ್ಕಾಚಾರ ಬದಲಿಸಿದ ವಿರಾಟ್ ಕೊಹ್ಲಿಯನ್ನು ಗಾಯಗೊಳಿಸುವ ಉದ್ದೇಶವಿತ್ತಾ? ಫೈನಲ್ ಪಂದ್ಯದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮ್ಯಾಕ್ಸ್‌‍ವೆಲ್ ಕೀಪರ್ ಎಂಡ್‌ಗೆ ಎಸೆದ ಥ್ರೋ ವಿರಾಟ್ ಕೊಹ್ಲಿಗೆ ಬಡಿದಿದೆ. ಈ ವಿಡಿಯೋ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೂಲಕ ಭಾರತದ ಸತತ ವಿಕೆಟ್ ಪತನಕ್ಕೆ ಬ್ರೇಕ್ ಹಾಕಿ ಹೋರಾಟ ನೀಡಿದ್ದರು. ಇತ್ತ ಪಾಯಿಂಟ್ ಫೀಲ್ಡಿಂಗ್‌ನಲ್ಲಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಚೆಂಡನ್ನು ಕೀಪರ್ ಎಂಡ್‌ನತ್ತ ಎಸೆದಿದ್ದಾರೆ. ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿಯತ್ತ ಚೆಂಡು ತೂರಿ ಬಂದಿದೆ. ಕೊಹ್ಲಿ ಬಗ್ಗಿ ಕುಳಿತು ಕೈ ಅಡ್ಡ ಹಿಡಿದ್ದಾರೆ. ಕೈಗೆ ಬಡಿದ ಚೆಂಡು ಮೈದಾನಕ್ಕೆ ಬಿದ್ದಿದೆ.

INDVAUS ಫೈನಲ್‌ನಲ್ಲಿ ಭಾರತದ ಬ್ಯಾಟಿಂಗ್‌ಗೆ ಜಯ್ ಶಾ, ಸೂರ್ಯಕುಮಾರ್ ಟ್ರೋಲ್!

ತಕ್ಷಣವೇ ಕ್ಷಮೆ ಕೇಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಕೊಹ್ಲಿ ಬಳಿ ತೆರಳಿ, ಕೀಪರ್‌ಗೆ ಎಸೆದ ಚೆಂಡು ಎಂದು ಸ್ಪಷ್ಟನೆ ನೀಡಿದ್ದಾರೆ. ಇಬ್ಬರು ನಸುನಕ್ಕು ಘಟನೆ ತಿಳಿಗೊಳಿಸಿದ್ದಾರೆ. ಮ್ಯಾಕ್ಸ್‌ವೆಲ್ ಎಸೆದ ಚೆಂಡು ತಪ್ಪಿ ಕೊಹ್ಲಿಯತ್ತ ಸಾಗಿದೆ. ಇಲ್ಲಿ ಗಾಯಗೊಳಿಸುವ ಉದ್ದೇಶ ಕಾಣುತ್ತಿಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ.

 

 
 
 
 
 
 
 
 
 
 
 
 
 
 
 

A post shared by ICC (@icc)

 

ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 240 ರನ್ ಸಿಡಿಸಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಹೋರಾಟದಿಂದ ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಇತರ ಬ್ಯಾಟ್ಸ್‌ಮನ್‌ಗಳಿಂದ ಹೋರಾಟ ಮೂಡಿಬರಲಿಲ್ಲ. ರೋಹಿತ್ ಶರ್ಮಾ 47ನ್ ಕಾಣಿಕೆ ನೀಡಿದರು. ವಿರಾಟ್ ಕೊಹ್ಲಿ 54 ರನ್ ಸಿಡಿಸಿದರೆ, ಕೆಎಲ್ ರಾಹುಲ್ 66 ರನ್ ಸಿಡಿಸಿದರು. 

ಮೊಹಮ್ಮದ್ ಶಮಿ ತಾಯಿ ಆಸ್ಪತ್ರೆ ದಾಖಲು, ಫೈನಲ್ ಆರಂಭಗೊಂಡ ಬೆನ್ನಲ್ಲೇ ಅನಾರೋಗ್ಯ!

ಶುಬಮನ್ ಗಿಲ್ 4, ಶ್ರೇಯಸ್ ಅಯ್ಯರ್ 4, ರವೀಂದ್ರ ಜಡೇಜಾ 9, ಸೂರ್ಯಕುಮಾರ್ ಯಾದವ್ 18 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಮೊಹಮ್ಮದ್ ಶಮಿ 6, ಜಸ್ಪ್ರೀತ್ ಬುಮ್ರಾ 1, ಕುಲ್ದೀಪ್ ಯಾದವ್ 10, ಮೊಹಮ್ಮದ್ ಸಿರಾಜ್ 9 ರನ್ ಕಾಣಿಕೆ ನೀಡಿದರು. ಇದರೊಂದಿಗೆ 240 ರನ್‌ಗೆ ಟೀಂ ಇಂಡಿಯಾ ಆಲೌಟ್ ಆಯಿತು.
 

Latest Videos
Follow Us:
Download App:
  • android
  • ios