ಗುರುವಾರ ರಾತ್ರಿ ನಗರಕ್ಕೆ ಆಗಮಿಸಿದ ರೋಹಿತ್‌ ಶರ್ಮಾ ಬಳಗ ಶುಕ್ರವಾರ ಬೆಳಗ್ಗೆ ಮೈದಾನಕ್ಕಿಳಿಯಿತು. ರೋಹಿತ್‌ ಅವರು ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ಇತರ ಸಹಾಯಕ ಸಿಬ್ಬಂದಿ ಜೊತೆ ಪಿಚ್‌, ಔಟ್‌ಫೀಲ್ಡ್‌ ಪರಿಶೀಲಿಸಿದರು. ಶನಿವಾರ ಭಾರತ ಕೊನೆಯ ಸುತ್ತಿನ ಅಭ್ಯಾಸ ನಡೆಸಲಿದೆ.

ಅಹಮದಾಬಾದ್(ನ.18): ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ಹಣಾಹಣಿಗೆ ವೇದಿಕೆ ಸಿದ್ಧವಾಗಿದ್ದು, ಜಿದ್ದಾಜಿದ್ದಿನ ಪ್ರಶಸ್ತಿ ಫೈಟ್‌ಗೆ ಬದ್ಧವೈರಿಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಆಟಗಾರರು ಸಜ್ಜಾಗುತ್ತಿದ್ದಾರೆ. ಫೈನಲ್‌ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದ್ದು, ಟೀಂ ಇಂಡಿಯಾ ಆಟಗಾರರು ಶುಕ್ರವಾರ ಅಭ್ಯಾಸ ಆರಂಭಿಸಿದರು.

ಗುರುವಾರ ರಾತ್ರಿ ನಗರಕ್ಕೆ ಆಗಮಿಸಿದ ರೋಹಿತ್‌ ಶರ್ಮಾ ಬಳಗ ಶುಕ್ರವಾರ ಬೆಳಗ್ಗೆ ಮೈದಾನಕ್ಕಿಳಿಯಿತು. ರೋಹಿತ್‌ ಅವರು ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ಇತರ ಸಹಾಯಕ ಸಿಬ್ಬಂದಿ ಜೊತೆ ಪಿಚ್‌, ಔಟ್‌ಫೀಲ್ಡ್‌ ಪರಿಶೀಲಿಸಿದರು. ಶನಿವಾರ ಭಾರತ ಕೊನೆಯ ಸುತ್ತಿನ ಅಭ್ಯಾಸ ನಡೆಸಲಿದೆ.

ಇನ್ನು, ಗುರುವಾರ ಕೋಲ್ಕತಾದಲ್ಲಿ ದ.ಆಫ್ರಿಕಾ ವಿರುದ್ಧ ಸೆಮಿಫೈನಲ್‌ ಪಂದ್ಯವಾಡಿದ ಆಸ್ಟ್ರೇಲಿಯಾ ಆಟಗಾರರು ಶುಕ್ರವಾರ ಮಧ್ಯಾಹ್ನ ಅಹಮದಾಬಾದ್‌ ತಲುಪಿದ್ದು, ಶನಿವಾರ ಬೆಳಗ್ಗೆ ನೆಟ್ಸ್‌ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

World Cup 2023 Final: ಬರೀ 10 ಸೆಕೆಂಡ್‌ನ ಜಾಹೀರಾತಿಗೆ ಅಬ್ಬಬ್ಬಾ ಇಷ್ಟೊಂದು ಹಣ!

2003ರ ಸೋಲಿನ ಸೇಡಿಗೆ ಭಾರತ ಕಾತರ!

ಭಾರತ ತಂಡ ಸದ್ಯ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. 2003ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿತ್ತು. ಆ ಸೋಲಿನ ಸೇಡಿಗೆ ಭಾರತ ಕಾಯುತ್ತಿದೆ. ಇನ್ನು ಈ ವರ್ಷ ಉಭಯ ತಂಡಗಳು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಭಾರತವನ್ನು ಸೋಲಿಸಿ ಆಸೀಸ್‌ ಚಾಂಪಿಯನ್‌ ಆಗಿತ್ತು. ಆ ಸೋಲಿಗೂ ಸೇಡು ತೀರಿಸಿಕೊಳ್ಳಲು ರೋಹಿತ್‌ ಬಳಗ ಕಾತರಿಸುತ್ತಿದೆ.

2003 vs 2023: ಇದೆ ಹಲವು ಸಾಮ್ಯತೆ!

ಭಾರತ ಹಾಗೂ ಆಸ್ಟ್ರೇಲಿಯಾ ವಿಶ್ವಕಪ್‌ ಫೈನಲ್‌ನಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿವೆ. ಈ ಎರಡೂ ಫೈನಲ್‌ಗೆ ಕೆಲ ಸಾಮ್ಯತೆಗಳೂ ಇವೆ. 2003ರ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಸತತ 10 ಪಂದ್ಯ ಗೆದ್ದು ಫೈನಲ್‌ಗೇರಿತ್ತು. ಭಾರತ 8 ಪಂದ್ಯ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು. ಈ ವಿಶ್ವಕಪ್‌ನಲ್ಲಿ ಭಾರತ ಸತತ 10 ಗೆಲುವುಗಳೊಂದಿಗೆ ಫೈನಲ್‌ಗೇರಿದೆ. ಆಸ್ಟ್ರೇಲಿಯಾ ಸತತ 8 ಜಯ ಸಾಧಿಸಿ ಟ್ರೋಫಿ ಕದನಕ್ಕೆ ಕಾಲಿಟ್ಟಿದೆ. ಇನ್ನೊಂದು ವಿಶೇಷವೇನೆಂದರೆ, 2003ರಲ್ಲಿ ಗೆದ್ದ ಟ್ರೋಫಿ ಆಸ್ಟ್ರೇಲಿಯಾ ಪಾಲಿಗೆ 3ನೇ ವಿಶ್ವಕಪ್‌ ಗೆಲುವು ಆಗಿತ್ತು. ಈ ಬಾರಿ ಭಾರತವೂ 3ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ಟೀಂ ಇಂಡಿಯಾದ ಪ್ಯಾಕೇಜ್ ಸ್ಟಾರ್ ರಾಹುಲ್: DRS ತೆಗೆದುಕೊಳ್ಳೋದ್ರಲ್ಲೂ ಕನ್ನಡಿಗ ಪಂಟರ್..!

ಕಳೆದ 9 ತಿಂಗಳಲ್ಲಿ ಆಸೀಸ್‌ನದ್ದೇ ಪ್ರಾಬಲ್ಯ!

ಆಸ್ಟ್ರೇಲಿಯಾ ಯಾವತ್ತೂ ವಿಶ್ವ ಶ್ರೇಷ್ಠ ತಂಡ. ಅದರಲ್ಲೂ ಕಳೆದ 9 ತಿಂಗಳಲ್ಲಿ ತಂಡದ ಸಾಧನೆ ಮಹತ್ತರವಾದದ್ದು. ಮಾರ್ಚ್‌ನಲ್ಲಿ ಭಾರತದ ವಿರುದ್ಧ ಭಾರತದಲ್ಲೇ ಟೆಸ್ಟ್‌ ಪಂದ್ಯ ಗೆದ್ದಿದ್ದ ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಭಾರತ, ಬಳಿಕ ಭಾರತದ ವಿರುದ್ಧವೇ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಜಯಿಸಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಅಲ್ಲದೆ ಇಂಗ್ಲೆಂಡ್‌ನಲ್ಲಿ ಆ್ಯಶಸ್‌ ಟ್ರೋಫಿಯನ್ನೂ ತನ್ನಲ್ಲೇ ಉಳಿಸಿಕೊಂಡಿತ್ತು. ಕಮಿನ್ಸ್‌ ಪಡೆ ಈಗ ಆಸ್ಟ್ರೇಲಿಯಾಗೆ 6ನೇ ವಿಶ್ವಕಪ್‌ ಗೆಲ್ಲಿಸಿಕೊಡಲು ತವಕಿಸುತ್ತಿದೆ.

ಇಲ್ಲಿಂಗ್‌ವರ್ಥ್‌, ಕೆಟಲ್ಬರೋ ಫೈನಲ್‌ ಪಂದ್ಯಕ್ಕೆ ಅಂಪೈರ್ಸ್‌

ಫೈನಲ್‌ ಪಂದ್ಯಕ್ಕೆ ಅಂಪೈರ್‌ಗಳ ಹೆಸರನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ. ಇಂಗ್ಲೆಂಡ್‌ನ ರಿಚರ್ಡ್‌ ಇಲ್ಲಿಂಗ್‌ವರ್ಥ್‌ ಹಾಗೂ ರಿಚರ್ಡ್‌ ಕೆಟಲ್ಬರೋ ಪಂದ್ಯದಲ್ಲಿ ಆನ್‌ಫೀಲ್ಡ್‌ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.