ಧರ್ಮಶಾಲಾ ಪಿಚ್‌ ವೇಗಿಗಳಿಗೆ ಹೆಚ್ಚಿನ ನೆರವು ನೀಡುತ್ತಿದ್ದು, ವಿಶ್ವ ಶ್ರೇಷ್ಠ ವೇಗಿಗಳನ್ನು ಹೊಂದಿರುವ ಇತ್ತಂಡಗಳ ಪೈಕಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಸದ್ಯ ಎಲ್ಲರಲ್ಲಿದೆ. ನ್ಯೂಜಿಲೆಂಡ್‌ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿ ತೋರುತ್ತಿದ್ದು, ಈ ಪಂದ್ಯದಲ್ಲೂ ಬದಲಾವಣೆ ಸಾಧ್ಯತೆ ಕಡಿಮೆ.

ಧರ್ಮಶಾಲಾ(ಅ.28): ಈ ಬಾರಿ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವ ತಂಡಗಳೆಂದೇ ಬಿಂಬಿತವಾಗಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಈಗ ಪರಸ್ಪರ ಕಾದಾಟಕ್ಕೆ ಸಿದ್ಧವಾಗಿವೆ. ನಾಕೌಟ್‌ ಪ್ರವೇಶದ ಹಾದಿ ಸುಗಮಗೊಳಿಸಿಕೊಳ್ಳುವುದು ಇತ್ತಂಡಗಳ ಗುರಿಯಾಗಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ. ಸಾಂಪ್ರದಾಯಿಕ ವೈರಿಗಳ ಮಹತ್ವದ ಪಂದ್ಯಕ್ಕೆ ಶನಿವಾರ ಧರ್ಮಶಾಲಾ ಆತಿಥ್ಯ ವಹಿಸಲಿದೆ.

ಧರ್ಮಶಾಲಾ ಪಿಚ್‌ ವೇಗಿಗಳಿಗೆ ಹೆಚ್ಚಿನ ನೆರವು ನೀಡುತ್ತಿದ್ದು, ವಿಶ್ವ ಶ್ರೇಷ್ಠ ವೇಗಿಗಳನ್ನು ಹೊಂದಿರುವ ಇತ್ತಂಡಗಳ ಪೈಕಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಸದ್ಯ ಎಲ್ಲರಲ್ಲಿದೆ. ನ್ಯೂಜಿಲೆಂಡ್‌ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿ ತೋರುತ್ತಿದ್ದು, ಈ ಪಂದ್ಯದಲ್ಲೂ ಬದಲಾವಣೆ ಸಾಧ್ಯತೆ ಕಡಿಮೆ. ಆದರೆ ಕಳೆದ 11 ಏಕದಿನ ಪಂದ್ಯದಲ್ಲಿ ಆಸೀಸ್‌ ವಿರುದ್ಧ ಕಿವೀಸ್‌ ಕೇವಲ 1 ಪಂದ್ಯ ಗೆದ್ದಿದ್ದು, ಸೋಲಿನ ಸರಪಳಿ ಕಳಚಲು ಎದುರು ನೋಡುತ್ತಿದೆ. ಸತತ 4 ಗೆಲುವುಗಳೊಂದಿಗೆ ಸೆಮೀಸ್‌ನತ್ತ ಮುನ್ನುಗ್ಗುತ್ತಿದ್ದ ಕಿವೀಸ್‌ಗೆ ಕಳೆದ ಪಂದ್ಯದಲ್ಲಿ ಸೋಲು ಎದುರಾಗಿದ್ದು, ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ.

ಲಂಕಾ ಬೌಲರ್‌ಗಳ ಮಾರಕ ದಾಳಿ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮಣಿಸಲು ಕೇವಲ 157 ರನ್ ಗುರಿ..!

ಆತ್ಮವಿಶ್ವಾಸಲ್ಲಿ ಆಸೀಸ್‌: ಮೊದಲೆರಡು ಪಂದ್ಯ ಸೋತು ಕುಗ್ಗಿದ್ದ ಆಸೀಸ್‌ ಬಳಿಕ ಹ್ಯಾಟ್ರಿಕ್‌ ಗೆಲುವಿನ ಮೂಲಕ ಇತರ ತಂಡಗಳಿಗೆ ಮೈನಡುಕ ಹುಟ್ಟಿಸಿದ್ದು ಸುಳ್ಳಲ್ಲ. ವಾರ್ನರ್‌, ಮಾರ್ಷ್‌, ಮ್ಯಾಕ್ಸ್‌ವೆಲ್‌ ಸ್ಫೋಟಕ ಆಟ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಕಳಪೆ ಆಟವಾಡುತ್ತಿರುವ ಲಬುಶೇನ್‌ ಈ ಪಂದ್ಯದಿಂದ ಹೊರಬಿದ್ದು, ಟ್ರ್ಯಾವಿಸ್‌ ಹೆಡ್‌ಗೆ ಸ್ಥಾನ ಸಿಗಬಹುದು. ಆ್ಯಡಂ ಜಂಪಾ ತಂಡದ ಆಧಾರಸ್ತಂಭವಾಗಿದ್ದು, ಕಮಿನ್ಸ್‌, ಸ್ಟಾರ್ಕ್‌, ಹೇಜಲ್‌ವುಡ್‌ ಆಟ ಕೂಡಾ ತಂಡಕ್ಕೆ ನಿರ್ಣಾಯಕ.

ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಐಪಿಎಲ್ ನಿವೃತ್ತಿ ಮಾತು ತಳ್ಳಿಹಾಕಿದ ಧೋನಿ !

ಸಂಭವನೀಯ ಆಟಗಾರರ ಪಟ್ಟಿ

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್‌, ಟ್ರಾವಿಸ್ ಹೆಡ್‌, ಮಿಚೆಲ್ ಮಾರ್ಷ್‌, ಸ್ಟೀವ್ ಸ್ಮಿತ್‌, ಜೋಶ್ ಇಂಗ್ಲಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೋಯ್ನಿಸ್‌/ಕ್ಯಾಮರೋನ್ ಗ್ರೀನ್‌, ಪ್ಯಾಟ್ ಕಮಿನ್ಸ್‌(ನಾಯಕ), ಮಿಚೆಲ್ ಸ್ಟಾರ್ಕ್‌, ಆಡಂ ಜಂಪಾ, ಜೋಶ್ ಹೇಜಲ್‌ವುಡ್‌.

ನ್ಯೂಜಿಲೆಂಡ್‌: ಡೆವೊನ್ ಕಾನ್‌ವೇ, ವಿಲ್ ಯಂಗ್‌, ರಚಿನ್‌ ರವೀಂದ್ರ, ಟಾಮ್ ಲೇಥಮ್‌(ನಾಯಕ), ಡೇರಲ್ ಮಿಚೆಲ್‌, ಗ್ಲೆನ್ ಫಿಲಿಪ್ಸ್‌, ಮಾರ್ಕ್‌ ಚಾಪ್ಮನ್‌, ಮಿಚೆಲ್ ಸ್ಯಾಂಟ್ನರ್‌, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯೂಸನ್‌, ಟ್ರೆಂಟ್‌ ಬೌಲ್ಟ್‌.

ಒಟ್ಟು ಮುಖಾಮುಖಿ: 141

ಆಸ್ಟ್ರೇಲಿಯಾ: 95

ನ್ಯೂಜಿಲೆಂಡ್‌: 39

ಫಲಿತಾಂಶವಿಲ್ಲ: 07

ಪಂದ್ಯ: ಬೆಳಗ್ಗೆ 10.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಟಾರ್, ಡಿಸ್ನಿ+ ಹಾಟ್‌ಸ್ಟಾರ್