ಮೋದಿ ಕ್ರೀಡಾಂಗಣದ ಕ್ಲಬ್‌ಹೌಸ್‌ನಿಂದ ತಂಡದ ಬಸ್‌ಗೆ ಗಾಲ್ಫ್ ಕಾರ್ಟ್ (ಬ್ಯಾಟರಿ ಆಧಾರಿತ ಸಣ್ಣ ವಾಹನ)ನ ಹಿಂಬದಿಯ ಆಸನದಲ್ಲಿ ಕುಳಿತು ತೆರಳುತ್ತಿದ್ದ ಮ್ಯಾಕ್ಸ್‌ವೆಲ್, ಇಳಿಯುವ ವೇಳೆ ಬಿದ್ದಿದ್ದು ಅವರ ತಲೆ, ಮುಖಕ್ಕೆ ಪೆಟ್ಟು ಬಿದ್ದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ಒಂದು ಪಂದ್ಯಕ್ಕೆ ವಿಶ್ರಾಂತಿ ನೀಡಲು ತಂಡದ ಆಡಳಿತ ನಿರ್ಧರಿಸಿದೆ.

ಅಹಮದಾಬಾದ್(ನ.02): ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಗಾಯಗೊಂಡಿದ್ದು, ಅವರು ನ.4ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಮೋದಿ ಕ್ರೀಡಾಂಗಣದ ಕ್ಲಬ್‌ಹೌಸ್‌ನಿಂದ ತಂಡದ ಬಸ್‌ಗೆ ಗಾಲ್ಫ್ ಕಾರ್ಟ್ (ಬ್ಯಾಟರಿ ಆಧಾರಿತ ಸಣ್ಣ ವಾಹನ)ನ ಹಿಂಬದಿಯ ಆಸನದಲ್ಲಿ ಕುಳಿತು ತೆರಳುತ್ತಿದ್ದ ಮ್ಯಾಕ್ಸ್‌ವೆಲ್, ಇಳಿಯುವ ವೇಳೆ ಬಿದ್ದಿದ್ದು ಅವರ ತಲೆ, ಮುಖಕ್ಕೆ ಪೆಟ್ಟು ಬಿದ್ದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ಒಂದು ಪಂದ್ಯಕ್ಕೆ ವಿಶ್ರಾಂತಿ ನೀಡಲು ತಂಡದ ಆಡಳಿತ ನಿರ್ಧರಿಸಿದೆ.

ಇನ್ನೂ 2 ಪಂದ್ಯಗಳಿಗೆ ಹಾರ್ದಿಕ್‌ ಪಾಂಡ್ಯ ಇಲ್ಲ!

ಮುಂಬೈ: ಮೊಣಕಾಲು ಗಾಯದಿಂದ ಇನ್ನೂ ಸಂಪೂರ್ಣ ಚೇತರಿಕೆ ಕಾಣದ ಭಾರತದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ, ವಿಶ್ವಕಪ್‌ನ ಮತ್ತೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ. ‘ಲಂಕಾ ಹಾಗೂ ನ.5ರ ದ.ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಹಾರ್ದಿಕ್‌ ಆಡುವುದಿಲ್ಲ. ನ.12ರಂದು ಬೆಂಗಳೂರಲ್ಲಿ ನಡೆಯಲಿರುವ ನೆದರ್‌ಲೆಂಡ್ಸ್‌ ವಿರುದ್ಧದ ಪಂದ್ಯದ ವೇಳೆಗೆ ಅವರು ಫಿಟ್‌ ಆಗುವ ನಿರೀಕ್ಷೆ ಇದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ICC World Cup: ಭಾರತ ಎದುರು ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ

ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿಲ್ಲಿ ಗುಡ್‌ಬೈ

ಅಹಮದಾಬಾದ್‌: ಏಕದಿನ ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಇಂಗ್ಲೆಂಡ್‌ನ ವೇಗಿ ಡೇವಿಡ್‌ ವಿಲ್ಲಿ ಘೋಷಿಸಿದ್ದಾರೆ. 33 ವರ್ಷದ ವಿಲ್ಲಿ ಈ ವರೆಗೂ ಇಂಗ್ಲೆಂಡ್‌ ಪರ 70 ಏಕದಿನ, 43 ಟಿ20 ಪಂದ್ಯಗಳನ್ನಾಡಿದ್ದಾರೆ. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಇಂಗ್ಲಿಷ್ ನಿಘಂಟಿನಲ್ಲಿ 'ಬಾಜ್‌ಬಾಲ್' ಪದಕ್ಕೆ ಸ್ಥಾನ!

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡ ಜನಪ್ರಿಯಗೊಳಿಸಿರುವ ‘ಬಾಜ್‌ಬಾಲ್’ ಶೈಲಿಯ ಆಟಕ್ಕೀಗ ವಿಶೇಷ ಮನ್ನಣೆ ದೊರೆತಿದೆ. ‘ಬಾಜ್‌ಬಾಲ್’ ಎನ್ನುವ ಪದವನ್ನು ಕಾಲಿನ್ಸ್ ಇಂಗ್ಲಿಷ್ ನಿಘಂಟಿಗೆ ಸೇರ್ಪಡೆಗೊಳಿಸಲಾಗಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟ್ ಮಾಡುವ ತಂಡವು ಆಕ್ರಮಣಕಾರಿಯಾಗಿ ಆಡಿ ಎದುರಾಳಿಯ ಮೇಲೆ ಮೇಲುಗೈ ಸಾಧಿಸುವುದು ಎನ್ನುವ ಅರ್ಥ ನೀಡಲಾಗಿದೆ. 

ಏಕದಿನ ವಿಶ್ವಕಪ್‌: ಸಿಕ್ಸರ್ ಸಿಡಿಸುವುದರಲ್ಲೂ ದಾಖಲೆ ಬರೆದ ದಕ್ಷಿಣ ಆಫ್ರಿಕಾ

2022ರ ಮೇ ತಿಂಗಳಲ್ಲಿ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ನೇಮಕಗೊಂಡ ಬಳಿಕ, ತಂಡವು ಅತಿಯಾದ ಆಕ್ರಮಣಕಾರಿ ಆಟವನ್ನಾಡಲು ಆರಂಭಿಸಿತು. ಮೆಕ್ಕಲಂನ ಅಡ್ಡ ಹೆಸರಾದ ‘ಬಾಜ್’ ಎನ್ನುವುದನ್ನು ಮೂಲವಾಗಿಟ್ಟುಕೊಂಡು ಕೆಲ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಬಾಜ್‌ಬಾಲ್ ಎನ್ನುವ ಪದವನ್ನು ಮೊದಲು ಬಳಸಿದ್ದರು. ಆ ಪದ ಬಹಳ ಜನಪ್ರಿಯತೆ ಪಡೆದಿದೆ.