ಮುಂಬೈನಲ್ಲಿ ಭಾರತ vs ಕಿವೀಸ್ ಮೊದಲ ಸೆಮೀಸ್! ಒಂದು ವೇಳೆ ಪಂದ್ಯ ರದ್ದಾದರೆ ಫೈನಲ್‌ಗೆ ಯಾರು?
ಭಾರತ ರೌಂಡ್ ರಾಬಿನ್ ಹಂತದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಕಿವೀಸ್ 10 ಅಂಕಗಳೊಂದಿಗೆ 4ನೇ ಸ್ಥಾನಿಯಾಗಿ ಸೆಮೀಸ್‌ಗೇರಿದೆ. ಟೂರ್ನಿಯ ಮತ್ತೊಂದು ಸೆಮೀಸ್‌ನಲ್ಲಿ ನ.16ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಪರಸ್ಪರ ಸೆಣಸಾಡಲಿವೆ.
ಮುಂಬೈ(ನ.12): ಈ ಬಾರಿ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಗಳ ವೇಳಾಪಟ್ಟಿ ಅಂತಿಮಗೊಂಡಿದ್ದು, ಮೊದಲ ಸೆಮೀಸ್‌ನಲ್ಲಿ ನ.15ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಭಾರತ ರೌಂಡ್ ರಾಬಿನ್ ಹಂತದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಕಿವೀಸ್ 10 ಅಂಕಗಳೊಂದಿಗೆ 4ನೇ ಸ್ಥಾನಿಯಾಗಿ ಸೆಮೀಸ್‌ಗೇರಿದೆ. ಟೂರ್ನಿಯ ಮತ್ತೊಂದು ಸೆಮೀಸ್‌ನಲ್ಲಿ ನ.16ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಪರಸ್ಪರ ಸೆಣಸಾಡಲಿವೆ. ಇತ್ತಂಡಗಳೂ ತಲಾ 14 ಅಂಕ ಗಳಿಸಿದರೂ, ದ.ಆಫ್ರಿಕಾ 2ನೇ ಸ್ಥಾನಿಯಾಗಿ, ಆಸೀಸ್ 3ನೇ ಸ್ಥಾನಿಯಾಗಿ ಸೆಮೀಸ್‌ಗೇರಿವೆ. ಸೆಮೀಸ್ ಪಂದ್ಯಗಳಿಗೆ ಮೀಸಲು ದಿನವಿದ್ದು, ಮಳೆಯಿಂದಾಗಿ ನಿಗದಿತ ದಿನದಂದು ಕನಿಷ್ಠ 20 ಓವರ್ ಪಂದ್ಯ ಪೂರ್ತಿಗೊಳಿಸಲು ಸಾಧ್ಯವಾಗದಿದ್ದರೆ ಮೀಸಲು ದಿನದಂದು ಆಟ ಮುಂದುವರಿಯಲಿದೆ.
ಬೆಂಗಳೂರಿನ ಪಂದ್ಯಕ್ಕೆ ಟೀಂ ಇಂಡಿಯಾ ಕಾಂಬಿನೇಷನ್ ಬಗ್ಗೆ ಸುಳಿವು ನೀಡಿದ ರಾಹುಲ್ ದ್ರಾವಿಡ್..!
ಭಾರತ ತಂಡವು ತನ್ನ ಪಾಲಿನ ಲೀಗ್ ಹಂತದಲ್ಲಿ ಒಂದು ಪಂದ್ಯ ಆಡುವುದು ಬಾಕಿ ಇರುವುದರ ಹೊರತಾಗಿಯೂ ಅಗ್ರಸ್ಥಾನದಲ್ಲೇ ಭದ್ರವಾಗಿದೆ. ಒಂದು ವೇಳೆ ನೆದರ್‌ಲೆಂಡ್ಸ್ ಎದುರಿನ ಪಂದ್ಯವು ಮಳೆಯಿಂದ ರದ್ದಾದರೂ ತಂಡದ ಅಗ್ರಸ್ಥಾನದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಇಲ್ಲಿಯವರೆಗೆ 8 ಲೀಗ್ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಜೇಯ ನಾಗಾಲೋಟ ಮುಂದುವರೆಸಿದೆ. ಇದೀಗ ನೆದರ್‌ಲೆಂಡ್ಸ್ ತಂಡವನ್ನು ಮಣಿಸಿ ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡಲು ಟೀಂ ಇಂಡಿಯಾ ಸಜ್ಜಾಗಿದೆ.
ಪಂದ್ಯ ರದ್ದಾದರೆ ಫೈನಲ್‌ಗೆ ಯಾರು?
ಸೆಮೀಸ್‌ಗೆ ಮೀಸಲು ದಿನವಿದೆ. ಆದರೆ ಮೀಸಲು ದಿನದಂದೂ ಮಳೆಯಿಂದಾಗಿ ಪಂದ್ಯ ನಡೆಯದೆ ರದ್ದುಗೊಂಡರೆ ಅಂಕಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆದ ತಂಡ ಫೈನಲ್‌ಗೇರಲಿದೆ. ಅಂದರೆ ಭಾರತ-ನ್ಯೂಜಿಲೆಂಡ್ ಪಂದ್ಯ ರದ್ದಾದರೆ ಅಗ್ರಸ್ಥಾನ ಪಡೆದ ಭಾರತ ಫೈನಲ್‌ಗೇರಲಿದ್ದು, ದ.ಆಫ್ರಿಕಾ-ಆಸ್ಟ್ರೇಲಿಯಾ ಪಂದ್ಯ ರದ್ದಾದರೆ ದ.ಆಫ್ರಿಕಾ ಫೈನಲ್ ಪ್ರವೇಶಿಸಲಿದೆ. ಫೈನಲ್‌ಗೂ ಮೀಸಲು ದಿನವಿದೆ.
ICC World Cup 2023: ಪಾಕ್ ಮಣಿಸಿ ವಿಶ್ವಕಪ್‌ಗೆ ಗುಡ್‌ಬೈ ಹೇಳಿದ ಇಂಗ್ಲೆಂಡ್..!
ವಿಶ್ವಕಪ್ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಗಳಿಗೆ 10 ಲಕ್ಷ+ ಪ್ರೇಕ್ಷಕರು: ಹೊಸ ದಾಖಲೆ
ಅಹಮದಾಬಾದ್: ಈಗಾಗಲೇ ಡಿಜಿಟಲ್ ವೀಕ್ಷಣೆಯಲ್ಲಿ ದಾಖಲೆ ಬರೆದಿರುವ ಈ ಬಾರಿ ಏಕದಿನ ವಿಶ್ವಕಪ್, ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರ ನೇರ ವೀಕ್ಷಣೆಯಲ್ಲೂ ಹೊಸ ಮೈಲಿಗಲ್ಲು ತಲುಪಿದೆ. ಈ ಬಾರಿ ವಿಶ್ವಕಪ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಕ್ರೀಡಾಂಗಣಕ್ಕೆ ಆಗಮಿಸಿ ನೇರವಾಗಿ ಪಂದ್ಯ ವೀಕ್ಷಿಸಿದ್ದು, ಇತಿಹಾಸದಲ್ಲೇ ಅತಿ ಹೆಚ್ಚು ಪ್ರೇಕ್ಷಕರನ್ನು ಕಂಡ ಐಸಿಸಿ ಟೂರ್ನಿ ಎಂಬ ದಾಖಲೆಗೆ ಪಾತ್ರವಾಗಿದೆ. ಶುಕ್ರವಾರ ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ-ಅಫ್ಘಾನಿಸ್ತಾನ ಪಂದ್ಯದಲ್ಲಿ ಈ ಮೈಲಿಗಲ್ಲು ಸಾಧಿಸಲಾಗಿದೆ ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.