ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಕಾದಾಟಟೂರ್ನಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆಮೊದಲ ಪಂದ್ಯಕ್ಕೆ ಉಪನಾಯಕಿ ಸ್ಮೃತಿ ಮಂಧನಾ ಅಲಭ್ಯ

ಕೇಪ್‌​ಟೌ​ನ್‌(ಫೆ.12): ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನ​ಸಿ​ನೊಂದಿಗೆ ಐಸಿಸಿ ಮಹಿ​ಳಾ ಟಿ20 ವಿಶ್ವ​ಕಪ್‌ ಟೂರ್ನಿಗೆ ಕಾಲಿ​ಡು​ತ್ತಿ​ರುವ ಭಾರತ ತಂಡ, ಭಾನು​ವಾರ ಸಾಂಪ್ರ​ದಾ​ಯಿಕ ಬದ್ಧ​ವೈರಿ ಪಾಕಿ​ಸ್ತಾನ ವಿರುದ್ಧ ಆಡುವ ಮೂಲ​ಕ ಅಭಿ​ಯಾನ ಆರಂಭಿ​ಸ​ಲಿದೆ. ಪಂದ್ಯಕ್ಕೆ ಕೇಪ್‌​ಟೌ​ನ್‌ನ ನ್ಯೂಲ್ಯಾಂಡ್‌್ಸ ಕ್ರೀಡಾಂಗಣ ಆತಿಥ್ಯ ವಹಿ​ಸ​ಲಿದೆ.

10 ತಂಡ​ಗಳು ಪಾಲ್ಗೊ​ಳ್ಳು​ತ್ತಿ​ರುವ ಟೂರ್ನಿ​ಯಲ್ಲಿ ಕಳೆದ ಬಾರಿ ರನ್ನ​ರ್‌-ಅಪ್‌ ಭಾರತ ‘ಬಿ‘ ಗುಂಪಿ​ನಲ್ಲಿ ಸ್ಥಾನ ಗಿಟ್ಟಿ​ಸಿ​ಕೊಂಡಿದೆ. ಇತ್ತೀ​ಚೆ​ಗ​ಷ್ಟೇ ದಕ್ಷಿಣ ಆ​ಫ್ರಿ​ಕಾ​ದಲ್ಲೇ ತ್ರಿಕೋನ ಸರ​ಣಿ​ಯಲ್ಲಿ ಫೈನ​ಲ್‌​ಗೇ​ರಿದ್ದ ಹರ್ಮ​ನ್‌​ಪ್ರೀತ್‌ ಕೌರ್‌ ಬಳಗ ಉತ್ತಮ ಸಿದ್ಧತೆ ಮಾಡಿ​ಕೊಂಡಿದ್ದು, ಶುಭಾ​ರಂಭದ ನಿರೀ​ಕ್ಷೆ​ಯ​ಲ್ಲಿದೆ. 

ಮತ್ತೊಂದೆಡೆ ಈವ​ರೆ​ಗಿನ ಎಲ್ಲಾ ಟೂರ್ನಿ​ಗ​ಳಲ್ಲೂ ಮೊದಲ ಸುತ್ತಲ್ಲೇ ಸೋತು ಹೊರ​ಬಿ​ದ್ದಿದ್ದ ಪಾಕ್‌ ಈ ಬಾರಿ ನಾಕೌಟ್‌ಗೇರು​ವ ನಿರೀ​ಕ್ಷೆ​ಯ​ಲ್ಲಿದ್ದು, ಜಯ​ದೊಂದಿಗೆ ಟೂರ್ನಿಗೆ ಕಾಲಿ​ಡಲು ಕಾತ​ರಿ​ಸು​ತ್ತಿದೆ. ಭಾರ​ತದ ತಾರಾ ಬ್ಯಾಟರ್‌ ಸ್ಮೃತಿ ಮಂಧನಾ ಗಾಯ​ಗೊಂಡಿದ್ದು, ಈ ಪಂದ್ಯ​ಕ್ಕೆ ಅಲ​ಭ್ಯ​ರಾ​ಗ​ಲಿ​ದ್ದಾರೆ. ಅಂಡ​ರ್‌-19 ವಿಶ್ವ​ಕಪ್‌ ವಿಜೇತ ತಂಡದ ನಾಯಕಿ ಶಫಾಲಿ ವರ್ಮಾ, ಜೆಮಿಮಾ, ದೀಪ್ತಿ ಶರ್ಮಾ, ರೇಣುಕಾ ಸಿಂಗ್‌ ಸೇರಿ​ದಂತೆ ಪ್ರಮುಖ ಆಟ​ಗಾ​ರ​ರಿ​ದ್ದಾರೆ. ಅತ್ತ ಪಾಕ್‌ ನಿದಾ ದಾರ್‌​ರನ್ನು ಹೆಚ್ಚಾಗಿ ನೆಚ್ಚಿ​ಕೊಂಡಿದೆ.

ಪಂದ್ಯ: ಸಂಜೆ 6.30ಕ್ಕೆ
ನೇರ​ಪ್ರ​ಸಾ​ರ: ಸ್ಟಾರ್‌​ಸ್ಪೋರ್ಟ್ಸ್

ಶ್ರೀಲಂಕಾ ಶುಭಾ​ರಂಭ

ಟೂರ್ನಿಯ ಉದ್ಘಾ​ಟನಾ ಪಂದ್ಯ​ದಲ್ಲಿ ಆತಿ​ಥೇಯ ದಕ್ಷಿಣ ಆ​ಫ್ರಿಕಾ ವಿರು​ದ್ಧ 3 ರನ್‌​ಗ​ಳಿಂದ ಗೆದ್ದು ಶ್ರೀಲಂಕಾ ಶುಭಾ​ರಂಭ ಮಾಡಿ​ತು. ಲಂಕಾ ಮೊದಲು ಬ್ಯಾಟ್‌ ಮಾಡಿ 4 ವಿಕೆ​ಟ್‌ಗೆ 129 ರನ್‌ ಗಳಿ​ಸಿ​ದರೆ, ದ.ಆ​ಫ್ರಿಕಾ 9 ವಿಕೆ​ಟ್‌ಗೆ 126 ರನ್‌ ಗಳಿಸಿ ಸೋಲೊ​ಪ್ಪಿ​ಕೊಂಡಿತು.

ಮಹಿಳಾ ಐಪಿಎಲ್‌: ಮುಂಬೈ ತಂಡಕ್ಕೆ ಜೂಲನ್‌ ಮೆಂಟರ್‌

ಮುಂಬೈ: ಕಳೆದ ವರ್ಷ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಭಾರತದ ತಾರಾ ವೇಗಿ ಜೂಲನ್‌ ಗೋಸ್ವಾಮಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮೆಂಟರ್‌ ಹಾಗೂ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ. 350ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್‌ ಪಡೆದಿರುವ ಜೂಲನ್‌ ಮಹಿಳಾ ಏಕದಿನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಂಡಿದ್ದಾರೆ. 

IPL 2023ರ ಬಳಿಕ ನಾಯಕ ಎಂ.ಎಸ್ ಧೋನಿ ನಿವೃತ್ತಿ? ಸಿಎಸ್‌ಕೆ ತಂಡದಲ್ಲಿ ಮಹತ್ವದ ಬೆಳವಣಿಗೆ

ಇದೇ ವೇಳೆ ಇಂಗ್ಲೆಂಡ್‌ ಪರ ಏಕದಿನ, ಟೆಸ್ಟ್‌ನಲ್ಲಿ 2ನೇ ಗರಿಷ್ಠ ರನ್‌ ಗಳಿಸಿರುವ ಶಾರ್ಲೊಟ್‌ ಎಡ್ವರ್ಡ್ಸ್ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಭಾರತದ ಮಾಜಿ ಆಲ್ರೌಂಡರ್‌ ದೇವಿಕಾ ಪಾಲ್ಶಿಕಾರ್‌ ಬ್ಯಾಟಿಂಗ್‌ ಕೋಚ್‌, ತೃಪ್ತಿ ಭಟ್ಟಾಚಾರ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಮಹಿಳಾ ಐಪಿ​ಎಲ್‌ ಟಿ20: ಲಖ​ನೌ ತಂಡದ ಹೆಸರು ಯುಪಿ ವಾರಿ​ಯ​​ರ್ಸ್‌

ಲಖ​ನೌ: ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಮ​ಹಿಳಾ ಐಪಿ​ಎ​ಲ್‌​)ನ ಕ್ಯಾಪ್ರಿ ಗ್ಲೋಬಲ್‌ ಮಾಲಿಕತ್ವದ ಲಖನೌ ತಂಡ ಯುಪಿ ವಾರಿ​ಯ​ರ್ಸ್‌ ಹೆಸ​ರಿ​ನೊಂದಿಗೆ ಟೂರ್ನಿ​ಯಲ್ಲಿ ಕಣ​ಕ್ಕಿ​ಳಿ​ಯ​ಲಿದೆ. ಇತ್ತೀ​ಚೆ​ಗೆ ನಡೆದ ತಂಡ​ಗಳ ಹರಾ​ಜಿ​ನಲ್ಲಿ 757 ಕೋಟಿ ರು.ಗೆ ಕ್ಯಾಪ್ರಿ ಗ್ಲೋಬಲ್‌ ಸಂಸ್ಥೆಯು ಲಖನೌ ಮೂಲದ ತಂಡ​ವನ್ನು ಖರೀ​ದಿ​ಸಿತ್ತು. 

ಇಂಗ್ಲೆಂಡ್‌ನ ಮಾಜಿ ಕ್ರಿಕೆ​ಟಿಗ ಜಾನ್‌ ಲೆವಿ​ಸ್‌ ಮುಖ್ಯ ಕೋಚ್‌ ಆಗಿ ನೇಮ​ಕ​ಗೊಂಡಿದ್ದು, ಅರ್ಜುನ ಪ್ರಶಸ್ತಿ ವಿಜೇತೆ ಅಂಜು ಜೈನ್‌ ಸಹಾ​ಯಕ ಕೋಚ್‌, ಆಸ್ಪ್ರೇ​ಲಿಯಾದ ಆ್ಯಶ್ಲೆ ನಾಫ್ಕೆ ಬೌಲಿಂಗ್‌ ಕೋಚ್‌ ಆಗಿ ಕಾರ್ಯ​ನಿ​ರ್ವ​ಹಿ​ಸ​ಲಿ​ದ್ದಾರೆ.