IPL 2023ರ ಬಳಿಕ ನಾಯಕ ಎಂ.ಎಸ್ ಧೋನಿ ನಿವೃತ್ತಿ? ಸಿಎಸ್‌ಕೆ ತಂಡದಲ್ಲಿ ಮಹತ್ವದ ಬೆಳವಣಿಗೆ
IPL 2023 ಧೋನಿ ಆಡ್ತಾರಾ? ಇದು ಧೋನಿ ಕೊನೆಯ ಐಪಿಎಲ್ ಟೂರ್ನಿಯೇ? ಅನ್ನೋ ಹಲವು ಪ್ರಶ್ನೆಗಳು ಚರ್ಚೆಗಳು ನಡೆಯುತ್ತಿದೆ. ಇದರ ನಡುವೆ ಇದೀಗ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. ಐಪಿಎಲ್ 2023ರ ಧೋನಿಯ ಕೊನೆಯ ಬಾರಿ ಅಭಿಮಾನಿಗಳ ಮುಂದೆ ಮೈದಾನಕ್ಕಿಳಿಯಲಿದ್ದಾರೆ.
ಚೆನ್ನೈ(ಫೆ.11): ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದಾಗ ಅಭಿಮಾನಿಗಳಿಗೆ ಆಘಾತವಾಗಿತ್ತು. ಆದರೆ ಐಪಿಎಲ್ ಟೂರ್ನಿಯಲ್ಲಿ ಧೋನಿ ಆಟ ನೋಡಬಹುದು ಅನ್ನೋ ಸಮಾಧಾನವಿತ್ತು. ಆದರೆ ಇದೀಗ 2023ರ ಐಪಿಎಲ್ ಟೂರ್ನಿಯ ಧೋನಿಯ ಕೊನೆಯ ಕ್ರಿಕೆಟ್ ಟೂರ್ನಿಯಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಧೋನಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಅಥವಾ ಸೂಚೆಯನ್ನು ನೀಡಿಲ್ಲ. ಆದರೆ ಐಪಿಎಲ್ ಆರಂಭಕ್ಕೂ ಮುನ್ನ ಧೋನಿ ಬಹಿರಂಗ ಪಡಿಸುವ ಸಾಧ್ಯತೆ ಇದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮೂಲಗಳು ಹೇಳಿವೆ.
ಮೂರು ವರ್ಷಗಳ ಬಳಿಕ ಐಪಿಎಲ್ ಟೂರ್ನಿ ಮತ್ತೆ ತವರಿನಲ್ಲಿ ಆಯೋಜನೆಗೊಳ್ಳುತ್ತಿದೆ. ತವರಿನ ಅಭಿಮಾನಿಗಳ ಮುಂದೆ ಧೋನಿ ವಿದಾಯ ಹೇಳಲಿದ್ದಾರೆ. ಶೀಘ್ರದಲ್ಲೇ ಧೋನಿ ಫ್ರಾಂಚೈಸಿಗೆ ಅಧಿಕೃತ ಹೇಳಿಕೆ ನೀಡಲಿದ್ದಾರೆ ಎಂದು ಸಿಎಸ್‌ಕೆ ಮೂಲಗಳು ಹೇಳಿವೆ. ಇದು ಧೋನಿಯ ಕೊನೆಯ ಐಪಿಎಲ್ ಟೂರ್ನಿಯಾಗಿದೆ. ಶ್ರೇಷ್ಠ ನಾಯಕನನಿಗೆ ತವರಿನ ಅಭಿಮಾನಿಗಳ ಮುಂದೆ ವಿದಾಯ ನೀಡಲು ನಾವು ಎಲ್ಲಾ ತಯಾರಿ ಮಾಡಿಕೊಳ್ಳುತ್ತೇವೆ. ಐಪಿಎಲ್ 2023 ಆರಂಭಕ್ಕೂ ಮುನ್ನ ಈ ಕುರಿತು ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ಸಿಎಸ್‌ಕೆ ಫ್ರಾಂಚೈಸಿ ಮೂಲಗಳು ಹೇಳಿದೆ.
ಧೋನಿ ಭೇಟಿಯಾದ ದಾದಾ; ಐಪಿಎಲ್ ಟೂರ್ನಿಗೂ ಮುನ್ನ 'ಖಾಸ್ ಬಾತ್'..?
2022ರ ಐಪಿಎಲ್ ಟೂರ್ನಿ ಧೋನಿಯ ಕೊನೆಯ ಟೂರ್ನಿ ಎಂದೇ ಹೇಳಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಧೋನಿ ನಾಯಕತ್ವ ತ್ಯಜಿಸಿ ರವೀಂದ್ರ ಜಡೇಜಾಗೆ ನೀಡಿದ್ದರು. ಆದರೆ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾತಾಳಕ್ಕೆ ಕುಸಿದಿತ್ತು. ಹೀಗಾಗಿ ಮತ್ತೆ ಧೋನಿ ಹೆಗಲಿಗೆ ನಾಯಕತ್ವ ಜವಾಬ್ದಾರಿ ಬಂದಿತ್ತು.ಟೂರ್ನಿಯ ಅಂತ್ಯದಲ್ಲಿ ಧೋನಿ ನಿವೃತ್ತಿ ಮಾತನ್ನು ತಳ್ಳಿ ಹಾಕಿದ್ದರು.
IPL 2023: ಭರ್ಜರಿ ಸಿಕ್ಸರ್ ಮೂಲಕ ಅಭ್ಯಾಸ ಆರಂಭಿಸಿದ ಮಹೇಂದ್ರ ಸಿಂಗ್ ಧೋನಿ..!
ಇದೀಗ ಈ ಬಾರಿಯ ಐಪಿಎಲ್ ಟೂರ್ನಿ ಆಡಿ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ಧೋನಿ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತುಗಳು ಬಲಗೊಳ್ಳುತ್ತಿದೆ. ಐಪಿಎಲ್ ಟೂರ್ನಿಗೂ ಮುನ್ನ ಈ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ಸಿಎಸ್‌ಕೆ ಫ್ರಾಂಚೈಸಿ ಮೂಲಗಳು ಹೇಳಿವೆ. ಆದರೆ ಟೆಸ್ಟ್, ಏಕದಿನ, ಟಿ20 ಅಂತಾರಾಷ್ಟ್ರೀಯ ಮಾದರಿಗೆ ಧೋನಿ ಯಾವುದೇ ಘೋಷಣೆ ಮಾಡಿಲ್ಲ ನಿವೃತ್ತಿ ಹೇಳಿಲ್ಲ. ಸದ್ದಿಲ್ಲದೆ ವಿದಾಯ ಹೇಳಿದ್ದಾರೆ. ಇದು ಧೋನಿ ವಿಶೇಷತೆ. ಆಧರೆ ಈ ಬಾರಿ ಅದೇ ದಾರಿ ಅನುಸರಿಸುತ್ತಾರಾ ಅನ್ನೋ ಆತಂಕ ಅಭಿಮಾನಿಗಳಲ್ಲಿ ಕಾಡುತ್ತಿದೆ.