ಮೆಲ್ಬೊರ್ನ್(ಫೆ.20): 7ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಇನ್ನೊಂದೇ ದಿನ ಬಾಕಿ. ಶುಕ್ರವಾರ ಟೂರ್ನಿಗೆ ಚಾಲನೆ ದೊರೆಯಲಿದ್ದು 17 ದಿನಗಳ ನಡೆಯಲಿರುವ ಪಂದ್ಯಾವಳಿಗೆ ಆಸ್ಪ್ರೇಲಿಯಾ ಆತಿಥ್ಯ ನೀಡಲಿದೆ. ಇದೇ ಮೊದಲ ಬಾರಿಗೆ ಆಸ್ಪ್ರೇಲಿಯಾದಲ್ಲಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ. 4 ಬಾರಿ ಚಾಂಪಿಯನ್‌ ಆಸ್ಪ್ರೇಲಿಯಾ ಸೇರಿದಂತೆ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

'ಬಿ' ದರ್ಜೆಗೆ ಹಿಂಬಡ್ತಿ ಪಡೆದ ಮಿಥಾಲಿ ರಾಜ್‌!

23 ಪಂದ್ಯಗಳು: ವಿಶ್ವಕಪ್‌ನಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಮಾ.8ರಂದು ಫೈನಲ್‌ ಪಂದ್ಯ ನಡೆಯಲಿದ್ದು, ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ ಪಂದ್ಯಕ್ಕೆ ವೇದಿಕೆ ಒದಗಿಸಲಿದೆ. ತಲಾ 5 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡ ಗುಂಪಿನಲ್ಲಿ 4 ಪಂದ್ಯಗಳನ್ನು ಆಡಲಿದೆ. ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

‘ಎ’ ಗುಂಪಿನಲ್ಲಿ ಭಾರತ: 3 ಬಾರಿ ಸೆಮಿಫೈನಲ್‌ ಪ್ರವೇಶಿಸಿರುವ ಭಾರತ, ಒಮ್ಮೆಯೂ ಫೈನಲ್‌ಗೇರಿಲ್ಲ. ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಪಡೆ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದೆನಿಸಿದೆ. ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಗುಂಪಿನಲ್ಲಿ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳಿವೆ. ‘ಬಿ’ ಗುಂಪಿನಲ್ಲಿ ಮಾಜಿ ಚಾಂಪಿಯನ್‌ಗಳಾದ ಇಂಗ್ಲೆಂಡ್‌, ವೆಸ್ಟ್‌ಇಂಡೀಸ್‌ ಜತೆ ಪಾಕಿಸ್ತಾನ, ದ.ಆಫ್ರಿಕಾ ಹಾಗೂ ಥಾಯ್ಲೆಂಡ್‌ ತಂಡಗಳು ಸ್ಥಾನ ಪಡೆದಿವೆ.

ಐಸಿಸಿ ವರ್ಷದ ತಂಡ: ಸ್ಮೃತಿ ಮಂಧನಾಗೆ ಸ್ಥಾನ

4 ನಗರಗಳಲ್ಲಿ ಪಂದ್ಯಗಳು

ವಿಶ್ವಕಪ್‌ ಪಂದ್ಯಗಳಿಗೆ ಆಸ್ಪ್ರೇಲಿಯಾದ 4 ನಗರಗಳ 6 ಕ್ರೀಡಾಂಗಣಗಳು ಆತಿಥ್ಯ ನೀಡಲಿವೆ. ರಾಜಧಾನಿ ಕ್ಯಾನ್‌ಬೆರಾದ ಮನುಕಾ ಓವಲ್‌, ಮೆಲ್ಬರ್ನ್‌ನ ಜಂಕ್ಷನ್‌ ಓವಲ್‌, ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ(ಎಂಸಿಜಿ), ಪತ್‌ರ್‍ನ ವಾಕಾ ಮೈದಾನ, ಸಿಡ್ನಿಯ ಶೋಗ್ರೌಂಡ್‌ ಸ್ಟೇಡಿಯಂ ಹಾಗೂ ಸಿಡ್ನಿ ಕ್ರಿಕೆಟ್‌ ಮೈದಾನ (ಎಸ್‌ಸಿಜಿ)ದಲ್ಲಿ ಪಂದ್ಯಗಳು ನಡೆಯಲಿವೆ. ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಮಾ.5ರಂದು ಸೆಮಿಫೈನಲ್‌ ಪಂದ್ಯಗಳು ನಡೆದರೆ, ಮಾ.8ಕ್ಕೆ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಫೈನಲ್‌ ನಡೆಯಲಿದೆ.

ಭಾರತದ ವೇಳಾಪಟ್ಟಿ

ದಿನಾಂಕ ಎದುರಾಳಿ ಸಮಯ

ಫೆ.21 ಆಸ್ಪ್ರೇಲಿಯಾ ಮಧ್ಯಾಹ್ನ 1.30ಕ್ಕೆ

ಫೆ.24 ಬಾಂಗ್ಲಾದೇಶ ಸಂಜೆ 4.30ಕ್ಕೆ

ಫೆ.27 ನ್ಯೂಜಿಲೆಂಡ್‌ ಬೆಳಗ್ಗೆ 9.30ಕ್ಕೆ

ಫೆ.29 ಶ್ರೀಲಂಕಾ ಮಧ್ಯಾಹ್ನ 1.30ಕ್ಕೆ


ಹಿಂದಿನ ವರ್ಷಗಳ ಚಾಂಪಿಯನ್‌

2009 ಇಂಗ್ಲೆಂಡ್‌

2010 ಆಸ್ಪ್ರೇಲಿಯಾ

2012 ಆಸ್ಪ್ರೇಲಿಯಾ

2014 ಆಸ್ಪ್ರೇಲಿಯಾ

2016 ವೆಸ್ಟ್‌ಇಂಡೀಸ್‌

2018 ಆಸ್ಪ್ರೇಲಿಯಾ